ಧಾರವಾಡ 13: ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಣ ಸಂಸ್ಥೆಗಳು ತಮ್ಮ ಪ್ರಗತಿಯನ್ನು ಕಾಣಬೇಕು. ಅವರ ಶ್ರೇಯೋಭಿವೃದ್ಧಿಯೇ ಸಂಸ್ಥೆಯ ಗುರಿಯಾಗಿರಬೇಕು ಹಾಗಾದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದಶರ್ಿ ಡಾ. ನ. ವಜ್ರಕುಮಾರ ಹೇಳಿದರು.
69ನೇ ಕನರ್ಾಟಕ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪಡೆದ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಮೂರನೆ ಸ್ಥಾನ ಪಡೆದ ಜೆ.ಎಸ್.ಎಸ್ ಪದವಿ ಕಾಲೇಜಿನ ವಿದ್ಯಾರ್ಥಿ ಗಳನ್ನು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಜೆ.ಎಸ್.ಎಸ್ ವಿದ್ಯಾಥರ್ಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಕ.ವಿ.ವಿ ಕ್ರೀಡಾಕೂಟದಲ್ಲಿ 11 ಬಾರಿ ಜೆ.ಎಸ್.ಎಸ್ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ. 13 ಬಂಗಾರದ ಪದಕವನ್ನು ಪಡೆಯುವದರ ಮೂಲಕ ಜೆ.ಎಸ್.ಎಸ್ ಎಸ್.ಎಮ್ ಆಯ್ ಯು.ಜಿ ಮತ್ತು ಪಿ.ಜಿ ಯ ಪ್ರಾಚಾರ್ಯ ಡಾ. ಅಜಿತ ಪ್ರಸಾದರವರು ಬಂಗಾರದ ಮನುಷ್ಯರಾಗಿದ್ದಾರೆ ಎಂದು ಹೇಳಿದರು.
ಕ.ವಿ.ವಿ ಕುಲಪತಿಗಳ ಕ್ರೀಡಾ ಪ್ರಶಸ್ತಿ ಹಾಗೂ ಪ್ರೋತ್ಸಾಹ ಧನ ಪಡೆದ ಜೆ.ಎಸ್.ಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಜಿ. ಕೃಷ್ಣಮೂತರ್ಿಯವರನ್ನು ಅಭಿನಂದಿಸಿದರು. ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದರವರು ಮಾತನಾಡಿ ಸಂಸ್ಥೆ ಹಾಗೂ ವಿದ್ಯಾಥರ್ಿಗಳಿಬ್ಬರ ಪ್ರಯತ್ನ ಈ ಸುವರ್ಣ ದಿನಕ್ಕೆ ಸಾಕ್ಷಿಯಾಗಿದೆ. ನನ್ನ ಕಾಲೇಜಿನ ವಿದ್ಯಾಥರ್ಿಗಳ ಸಾಧನೆ ನನಗೆ ಹೆಮ್ಮೆ ತಂದಿದೆ. ಆಡಳಿತ ಮಂಡಳಿಯ ಸಹಕಾರ ಸಹಾಯ ಅನನ್ಯವಾದದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐ.ಟಿ.ಐ ನ ಮಹಾವೀರ ಉಪಾದ್ಯೆ, ದೈಹಿಕ ನಿದರ್ೇಶಕ ಜಿನೇಂದ್ರ ಕುಂದಗೊಳ, ಶ್ರವಣಯೋಗಿ ಉಪಸ್ಥಿತರಿದ್ದರು.