ಇದೇನು ಸಾರ್ವಜನಿಕ ಗ್ರಂಥಾಲಯವೋ? ಕುಡುಕರಿಗೆ ಆಶ್ರಯ ತಾಣವೋ?

ಶಶಿಧರ ಶಿರಸಂಗಿ

ಶಿರಹಟ್ಟಿ 05: ಈಗಿನ ಕಾಲದ ಪರಿಸ್ಥಿತಿಯಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳ ಮೊರೆಹೋಗಿ ಎಲ್ಲವನ್ನೂ ಜಾಲತಾಣಗಳಲ್ಲಿಯೇ ಕಾಣುವಂತಹ ಪರಿಸ್ಥಿತಿಯಿದ್ದು, ಆದರೂ ಸಕರ್ಾರವು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಜ್ಞಾನಾರ್ಜನೆಯ ತಾಣವಾಗ ಬೇಕಾಗಿರುವ ವಾಚನಾಲಯ ಇಂದು ಆಲಸಿಗಳ ಹಾಗೂ ಕುಡಕರ ವಿಶ್ರಾಂತಿ ತಾಣವಾಗಿರುವದು ಸಾಹಿತ್ಯ ಪ್ರೇಮಿಗಳು ಜ್ಞಾನಾರ್ಜನೆಯ ಹಸಿವಿರುವ ಓದುಗರು ವಾಚನಾಲಯದ ಮೆಟ್ಟಿಲು ಹತ್ತಲು ಹಿಂದೇಟು ಹಾಕುವಂತೆ ಮಾಡಿದೆ.

ಅಂದಾಜು 1852ರ ಆಸುಪಾಸಿನಲ್ಲಿ ಹವ್ಯಾಸಿ ಓದುಗರು ತಮ್ಮ ಸತತ ಹಾಗೂ ಸ್ವಪ್ರಯತ್ನದಿಂದ ಸ್ಥಾಪಿಸಿ ಮನ್ನಡೆಸಿದ ಶತಮಾನೋತ್ಸವ ಆಚರಿಸಿದ ನಗರದ ಲೋಕಮಾನ್ಯ ಟಿಳಕ ವಾಚನಾಲಯ ಓದುಗರ ಸಾಹಿತ್ಯ ಆಸಕ್ತಿಯನ್ನು ತಣಿಸುವ ಕೇಂದ್ರವಾಗಿ ವಿಜೃಂಭಣೆಯ ದಿನಗಳನ್ನು ಕಂಡ ವಾಚನಾಲಯ ಇಂದು ಸರಕಾರದ ಅಧೀನದಲ್ಲಿದ್ದರೂ ಕೂಡಾ ತನ್ನ ನೈಜ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಇದರ ಜೊತೆಗೆ ಆವರಣದಲ್ಲಿ ಈ ರೀತಿ ಚಟುವಟಿಕೆಗಳು ನಡೆಯುತ್ತಿರುವದು ಸಾಹಿತ್ಯ ಆಸಕ್ತರ ಮನ ಕಲಕಿದೆ. 

ಅತ್ಯಮೂಲ್ಯ ವರ್ಣ ಚಿತ್ರಗಳ ರಕ್ಷಣೆ ಆಗಬೇಕಾಗಿದೆ. 

ಮರಾಠಾ ರಾಜ ವಂಶಸ್ಥರಾದ ಸಾಂಗ್ಲೀ ಮಹಾರಾಜರ ಆಡಳಿತಕ್ಕೆ ಸೇರಿದ ಶಿರಹಟ್ಟಿ ಭಾಗದ ಜನರ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಆಧ್ಯತೆ ನೀಡಲು ಹಾಗೂ ಸಾಹಿತ್ಯಾಸಕ್ತರ ಕೋರಿಕೆಯ ಮೇರೆಗೆ ಈಗಿರುವ ಕಟ್ಟಡವನ್ನು ರಾಜ ವಂಶಸ್ಥರು ಗ್ರಂಥಾಲಕ್ಕೆ ಬಿಟ್ಟುಕೊಟ್ಟಿದ್ದರು. ಎರಡು ಅಂತಸ್ತುಗಳನ್ನು ಹೊಂದಿರುವ ಕಟ್ಟಡದ ನೆಲ ಅಂತಸ್ಥಿನಲ್ಲಿ ಅಂದಿನ ಕಾಲದ ರಾಜ ಮನೆತನದವರ, ಲೋಕಮಾನ್ಯ ಟಿಳಕರ ಹಾಗೂ ಗ್ರಂಥಾಲಯದ ಸ್ಥಾಪನೆಗೆ ಶಕ್ತಿಯಾಗಿ ನಿಂತ ಅನೇಕ ಮಹನೀಯರ ಆ ಕಾಲದ ಅತ್ಯಮೂಲ್ಯ ವರ್ಣ ಚಿತ್ರಗಳು ರಾರಾಜಿಸುತಿದ್ದು ಅವುಗಳನ್ನು ರಕ್ಷಿಸುವ ಅವಷ್ಯ ಕತೆ ಇದೆ.

ಕೇವಲ ಕಾದಂಬರಿಗಳಿಗೆ ಸೀಮಿತವಾದ ಗ್ರಂಥಾಲಯ: ನೆಲ ಅಂತಸ್ತಿನಲ್ಲಿ ಸಧ್ಯ ವಾಚನಾಲಯದ ವ್ಯವಸ್ಥೆ ಹಾಗೂ ಮೇಲಿನ ಭಾಗದಲ್ಲಿ ಗ್ರಂಥಾಲಯದ ವ್ಯವಸ್ಥೆ ಇದ್ದು ಇಂದಿನ ಓದುಗರಿಗೆ ಲೋಕ ಜ್ಞಾನ ನೀಡಬಲ್ಲ ಸಾಕಷ್ಠು ಪುಸ್ತಕಗಳ ಕೊರತೆ ಎದ್ದು ಕಾಣುತ್ತಿದೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಇಂದಿನ ಯುಗದಲ್ಲಿ ಬೆರಳ ತುದಿಯಲ್ಲಿ ಜ್ಞಾನ ಭಂಡಾರವೆ ಲಭ್ಯವಾಗಿರುವಾಗ ಪ್ರಸಕ್ತ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲಬಲ್ಲ ಸಾಹಿತ್ಯ ಕೃತಿಗಳ ಕೊರತೆ ಗ್ರಂಥಾಲಯದಲ್ಲಿ ಇದ್ದು ಕೇವಲ ನಾಟಕ ಹಾಗೂ ಕಥೆ ಕಾದಂಬರಿಗಳ ಗೂಡಾಗಿರುವ ಗ್ರಂಥಾಲಯ ಓದುಗರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅವಸಾನದ ಅಂಚಿನಲ್ಲಿರುವ ಕಟ್ಟಡ: ನೂರಾರು ವರ್ಷಗಳ ಹಿಂದೆ ಹೆಮ್ಮೆಯಿಂದ ಬೀಗುತಿದ್ದ ಕರೆಕಲ್ಲಿನಲ್ಲಿ ಕಟ್ಟಿದ ಕಟ್ಟಡ ಇಂದು ಅವಸಾನದ ಅಂಚಿನಲ್ಲಿ ಇದೆ. ಮೇಲಿನ ಅಂತಸ್ಥಿನ ಛಾವಣಿ ಮಂಗಳೂರ ಹಂಚಿನದಾಗಿದ್ದು ಮಳೆ ಬಂದಾಕ್ಷಣ ಮಳೆ ಹನಿ ಓದುಗರ ಮೇಲೆ ಬೀಳುವಷ್ಟು ಸ್ಥಿತಿಲವಾಗಿದೆ. ಇದರಿಂದಾಗಿ ಹಳೆಯ ಕಾಲದ ಪುಸ್ತಕಗಳು ಹಾಳಾಗುತ್ತಿರುವದು ಓದುಗರನ್ನು ಚಿಂತೆಗೆ ಈಡುಮಾಡಿದೆ. ಇಂದಿನ ಓದುಗರನ್ನು ಆಕಷರ್ಿಸುವ ಪಿಠೋಪಕರಣಗಳ ಕೊರತೆ ಕೂಡಾ ಗ್ರಂಥಾಲಯದ ಹಿನ್ನಲೆಗೆ ಕಾರಣವಾಗಿದೆ. ಸಧ್ಯ ಕಟ್ಟಡಕ್ಕೆ ಇರುವ ಸುತ್ತು ಗೋಡೆಯ ಎತ್ತರ ಕಡಿಮೆ ಇರುವದರಿಂದ ರಜೆ ದಿನಗಳಲ್ಲಿ ಕಟ್ಟಡದ ವರಾಂಡ ಅನೈತಿಕ ಚಟವಟಿಕೆಗಳ ತಾಣವಾಗುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನೇಲ್ಲೂರ-ಪ್ಯಾಟಿ: ಪರಿಸರ ದಿನಾಚರಣೆ