ಅಕ್ರಮ ಮದ್ಯ ಮಾರಾಟ ತಡೆ ಹಿಡಿಯುವಂತೆ ಆಗ್ರಹಿಸಿ ಮನವಿ


ಸಿಂದಗಿ;  ತಾಲೂಕಿನ  ಯರಗಲ್ ಬಿ ಕೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ  ತಡೆ ಹಿಡಿಯುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಬಕಾರಿ ವೃತ್ತ ನಿರಿಕ್ಷಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತ ಚೇತನ ರಾಂಪೂರ ಮಾತನಾಡಿ, ತಾಲೂಕಿನ ಯರಗಲ್ ಬಿ.ಕೆ ಗ್ರಾಮದಲ್ಲಿ ನಧಿಕೃತವಾಗಿ ಸುಮಾರು 6ರಿಂದ7 ಮದ್ಯದ ಅಂಗಡಿಗಳಿದ್ದು. ಪ್ರತಿನಿತ್ಯಯಾ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಸರಾಯಿಗೆ ತುತ್ತಾದ ಬಡ ಕುಟುಂಬಗಳು ಬಿದಿಗೆ ಬಂದ್ದಿವೆ.

ಅಧಿಕಾರಿಗಳು ಕೂಡಲೆ  ಒಂದು ಗ್ರಾಮದಲ್ಲಿನ ಸರಾಯಿ ಅಂಗಡಿಗಳನ್ನು ಬಂದ ಮಾಡಿಸಿ ಸೂಕ್ತ ಕ್ರಮ ಕೈಗಳ್ಳಬೇಕು ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೆ ಹೋದಲ್ಲಿ ಉಗ್ರವಾದ ಹೊರಾಟ ಮಾಡಬೆಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

        ಪ್ರತಿಭಟನೆಯಲ್ಲಿ ಮುತ್ತು ಹಿಪ್ಪರಗಿ, ಸಂಗಮೇಶ ರತ್ನಾಖಾರ, ಮುತ್ತು ಬಂಡ್ಡಿವಡ್ಡರ, ವಾಸೀಮ ಶೇಖ, ಸಾಧೀಕ ಮತರ್ುರ, ಮಂಜು ಮೇಲಿನಮನಿ, ಸಂತೋಷ ಯಲಗೋಡ, ರಾಜು ಕರಗದಾರ, ರವಿ ಕಲಾಲ, ಸಂಜು ಕಲಾಲ, ಯರಗಲ್ ಬಿ.ಕೆ ಗ್ರಾಮಸ್ಥರಾದ ಶಂಕರಲಿಂಗ ಪರಗೊಂಡ, ಭೀಮನಗೌಡ ಬಿರಾದಾರ, ಯಮನಪ್ಪಗೌಡ ಬಿರಾದಾರ, ಶ್ರೀಶೈಲ ಅಲ್ಲಾಪುರ, ಹುಲಿಕಂಠ ಹೇರ ಸೇರಿದಂತೆ ಹಲವರಿದ್ದರು.