ವಾಷಿಂಗ್ಟನ್, ನ.21-ಭಯೋತ್ಪಾದಕರನ್ನು ದಮನ ಮಾಡಲು ಪಾಕಿಸ್ತಾನ ನಮಗೆ ನೆರವು ನೀಡುತ್ತಿಲ್ಲ. ಹೀಗಾಗಿ ಆ ದೇಶಕ್ಕೆ ಅಮೆರಿಕಾದಿಂದ 1.66 ಶತಕೋಟಿ ಡಾಲರ್ ನೆರವು ಯಾವುದೇ ಕಾರಣಕ್ಕೂ ಲಭಿಸುವುದಿಲ್ಲ ಎಂದು ಅಧ್ಯಕ್ಛ ಡೊನಾಲ್ಡ್ ಟ್ರಂಪ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಇದರೊಂದಿಗೆ ಈಗಾಗಲೇ ಭದ್ರತಾ ನೆರವು ಸ್ಥಗಿತದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಅಮೆರಿಕ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಸಕರ್ಾರ ನೀಡುತ್ತಿದ್ದ ಭದ್ರತಾ ನೆರವನ್ನು ಸ್ಥಗಿತಗೊಳಿಸಿದೆ.
ಪ್ರತೀ ವರ್ಷ ಅಮೆರಿಕ ಸಕರ್ಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಮಾರು 1.66 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಪಾಕ್ಗೆ ನೀಡುತ್ತಿದ್ದ ಭದ್ರತಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಪಾಕಿಸ್ತಾನ ಸಕರ್ಾರ ಉಗ್ರರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಚಚರ್ೆ ನಡೆಸಲಾಗಿತ್ತು. ಈ ವೇಳೆ ಅಮೆರಿಕ ಸಕರ್ಾರ ಪಾಕಿಸ್ತಾನ ಸಕರ್ಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕಾಂಗ್ರೆಸ್ನಿದರ್ೇಶನದ ಮೇರೆಗೆ 2016ರಲ್ಲಿ ವಿದೇಶಿ ಸೇನಾ ನಿಧಿ (ಎಫ್ಎಂಎಫ್) ಅಡಿ ನೀಡಿರುವ ಸುಮಾರು 1.66 ಬಿಲಿಯನ್ ಡಾಲರ್ ಮೊತ್ತದ ಭದ್ರತಾ ನೆರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಆಫ್ಘಾನಿಸ್ತಾನದಲ್ಲಿ ಅಮೆರಿಕ ರಕ್ಷಣಾ ಇಲಾಖೆಯ ಸಹಾಯಕ ಕಾರ್ಯದಶರ್ಿಯಾಗಿರುವ ಡೇವಿಡ್ ಸಿಡ್ನಿ ಅವರು, ಒಬಾಮ ಅವರ ಸಕರ್ಾರದ ಅವಧಿಯಲ್ಲೇ ಪಾಕಿಸ್ತಾನ ಮತ್ತು ಕೇಂದ್ರೀಯ ಏಷ್ಯಾದಲ್ಲಿನ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಪಾಕ್ ಸಕರ್ಾರಕ್ಕೆ ನಿದರ್ೇಶನ ನೀಡಲಾಗಿತ್ತು.
ಆದರೆ ಈ ವರೆಗೂ ಪಾಕ್ ಸಕರ್ಾರ ಈ ಬಗ್ಗೆ ನಿಣರ್ಾಯಕ ಕ್ರಮ ಕೈಗೊಂಡಿಲ್ಲ. ಅಂದು ಪಾಕ್ ಸಕರ್ಾರ ತಮಗೆ ಮಾತು ನೀಡಿತ್ತಾದರೂ, ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹೀಗಾಗಿ ಭದ್ರತಾ ನೆರವನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.