ಮೋದಿ - ಸೌದಿ ಅರೇಬಿಯಾದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಭೇಟಿ

ಬ್ಯೂನಸ್ ಏಸರ್್(ಅಜರ್ೆಂಟೀನಾ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬ್ಯೂನಸ್ ಏಸರ್್ನಲ್ಲಿ ಸೌದಿ ಅರೇಬಿಯಾದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರು. ಈ ವೇಳೆಯಲ್ಲಿ ಪ್ರಧಾನಿ ಸೌದಿ ರಾಜಕುಮಾರ ಅವರಿಗೆ ಭಾರತದಲ್ಲಿ ತಂತ್ರಜ್ಞಾನ, ಕೃಷಿ ಮತ್ತು ಇಂದನ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ಹೇಳಿದರು ಎಂದು ಸೌದಿ ಸುದ್ಧಿ ಸಂಸ್ಥೆ ಹೇಳಿದೆ.

ಉಭಯ ನಾಯಕರು ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಅಜರ್ೆಂಟೀನಾದ ರಾಜಧಾನಿ ಬ್ಯೂನಸ್ ಏಸರ್್ನಲ್ಲಿದ್ದಾರೆ. ಬ್ಯೂನಸ್ ಏಸರ್್ನಲ್ಲಿರುವ ಸೌದಿ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಅವರ ಮನೆಯಲ್ಲಿ ಪ್ರಧಾನಿ ಮೋದಿ ಸೌದಿ ರಾಜಕುಮಾರ ಅವರನ್ನು ಭೇಟಿಯಾಗಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಆಯಿಲ್ ಪೂರೈಕೆ ಬಗ್ಗೆ ಚಚರ್ಿಸಿದರು.

ಅಕ್ಟೋಬರ್ನಲ್ಲಿ ಇಸ್ತಾನ್ಬುಲ್ನಲ್ಲಿ ಪತ್ರಕರ್ಥನ ಕೊಲೆಯಾದ ನಂತರ, ಜಿ-20 ಶೃಂಗಸಭೆ ಸೌದಿ ರಾಜಕುಮಾರ ಭಾಗವಹಿಸುತ್ತಿರುವ ಪ್ರಮುಖ ಅಂತರಾಷ್ಟ್ರೀಯ ಕಾರ್ಯಕ್ರಮವಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಂದರು ನಿಮರ್ಾಣ, ಹೆದ್ದಾರಿ ನಿಮರ್ಾಣ ಮತ್ತು ಬೇರೆ ಯೋಜನೆಗಳಿಗೆ ಬಂಡವಾಳ ಹೂಡುವುದಾಗಿ ಸೌದಿ ರಾಜಕುಮಾರ ಪ್ರಧಾನಿ ಮೋದಿ ಅವರಿಗೆ ಹೇಳಿದರು ಎಂದು ಉನ್ನತ ರಾಜತಾಂತ್ರಿಕರು ಹೇಳಿದರು.  

                                                  ಭವಿಷ್ಯದ ಯೋಜನೆಗಳಾದ ತಂತ್ರಜ್ಞಾನ, ಕೃಷಿ ಮತ್ತು ಇಂದನ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವುದಾಗಿ ಹೇಳಿದರು ಎಂದು ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಜೊತೆಯಲ್ಲಿ ಭಾಗವಹಿಸಿರುವ ವಿದೇಶಾಂಗ ಕಾರ್ಯದಶರ್ಿ ವಿಜಯ್ ಗೋಖಲೆ ಸಭೆಯ ನಂತರ ಓದಿ ಹೇಳಿದರು.

ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕೃಷಿ ಉತ್ಪನ್ನಗಳನ್ನು ಬದಲಿಗೆ ಭಾರತದಿಂದ ಆಮದು ಮಾಡಿಕೊಳ್ಳುವುದರ ಬಗ್ಗೆ ಸಭೆಯಲ್ಲಿ ಚಚರ್ಿಸಲಾಯಿತು ಎಂದು ಸೌದಿ ಸುದ್ಧಿ ಸಂಸ್ಥೆ ಹೇಳಿದೆ.

2014ರಲ್ಲಿ ಮೋದಿ ಭಾರತದ ಪ್ರಧಾನಿಯಾದ ನಂತರ, ಸೌದಿ ಅರೇಬಿಯಾ ಸೇರಿದಂತೆ ಎಲ್ಲಾ ಮುಸ್ಲೀಂ ರಾಷ್ಟ್ರಗಳ ಜೊತೆ ಸಂಬಂಧಗಳನ್ನು ಉತ್ತಮ ಪಡಿಸಿಕೊಂಡಿದೆ. ಮತ್ತು ಪಾಕಿಸ್ತಾನದ ಅನುಕೂಲಗಳಿಗೆ ಕಡಿವಾಣ ಹಾಕಿ, ಭಾರತದ ಆಥರ್ಿಕ ವ್ಯವಸ್ಥೆ ಶೀಘ್ರವಾಗಿ ಬೆಳೆಯುವುದಕ್ಕೆ ಆಕರ್ಷಕ ಬಂಡವಾಳವನ್ನು ಹೂಡುವಂತೆ ಮಾಡಿದೆ.

ಮುಂದಿನ 2-3 ವರ್ಷಗಳಲ್ಲಿ ಸೌದಿ ಅರೇಬಿಯಾವು ಭಾರತದಲ್ಲಿ ಮಹತ್ವವಾದ ಬಂಡವಾಳ ಹೂಡಲಿದೆ ಎಂದು ಗೋಖಲೆ ಹೇಳಿದರು. ಉಭಯ ನಾಯಕರು ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಪರಸ್ಪರ ಸಹಾಕಾರ ನೀಡುವುದರ ಬಗ್ಗೆ ಮಾತನಾಡಿದರು.

ಸೌದಿ ಅರೇಬಿಯಾ ಪ್ರಪಂಚದಲ್ಲೇ ಅತ್ಯದಿಕ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಆಯಿಲ್ನ್ನು ಉತ್ಪಾದಿಸುತ್ತದೆ. ಭಾರತವು ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ದೊಡ್ಡ ರಾಷ್ಟ್ರವಾಗಿದೆ. ಸೌದಿಯಿಂದ ಈ ಉತ್ನ್ನಗಳನ್ನು ಖರೀದಿಸುವದರ ಮೂಲಕ ಪೆಟ್ರೋಲ್ ಮತ್ತು ಆಯಿಲ್ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉಭಯ ನಾಯಕರು ಮಾತನಾಡಿದರು.