ಲೋಕದರ್ಶನ ವರದಿ
ಮಾಂಜರಿ 25: ಪ್ರಸಕ್ತ ಸಾಲಿನಲ್ಲಿ ತಂಬಾಕು ಉತ್ಪಾದನೆ ಕುಶಿದಿದ್ದರಿಂದ ಬೆಲೆ ದುಪ್ಪಟ್ಟಾಗುವ ಸಂಭವ ದಟ್ಟಾಗಿವೆ. ಇಂದು ವ್ಯಾಪಾರಿಗಳು ಪ್ರತಿ ಕಿ.ಲೋ. ತಂಬಾಕಿಗೆ 100 ರಿಂದ 140 ರೂ ಖರೀದಿ ಮಾಡುತ್ತಿದ್ದು ತಂಬಾಕು ಉತ್ಪಾದಕರ ಮುಖದಲ್ಲಿ ಸ್ವಲ್ಪ ಮಂದಹಾಸ ಮೂಡಿಸಿದೆ.
ಕಳೆದ 3 ದಶಕಗಳ ಹಿಂದೆ ತಾಲೂಕಿನಲ್ಲಿ ಸುಮಾರು 20 ರಿಂದ 25 ಸಾವಿರ ಹೆಕ್ಟರವರೆಗೆ ತಂಬಾಕು ಉತ್ಪಾದನೆ ಮಾಡುತ್ತಿದ್ದರು. ಆದರೆ ಈ ಸಾಲಿನಲ್ಲಿ 8400 ರಿಂದ 9000 ಹೆಕ್ಟರ ಮಾತ್ರ ಉತ್ಪಾದನೆಯಾಗಿದೆ. ಈ ಸಾಲಿನಲ್ಲಿ ಕಳೆದ ಸಾಲಿಗಿಂತ ಚಿಕ್ಕೋಡಿ ತಾಲೂಕಿನಲ್ಲಿ ತಂಬಾಕು ಉತ್ಪಾದನೆ ಕುಸಿದಿದ್ದು, ಇದಕ್ಕೆ ಪ್ರಮುಖ ಕಾರಣ ವ್ಯಾಪರಿಗಳ ಧೋರಣೆ, ಹವಾಮಾನ ವೈಫಲ್ಯವೇ ಕಾರಣ.
ನಿಪ್ಪಾಣಿ ವ್ಯಾಪಾರಿಗಳು ಯುಗಾದಿ ಹಬ್ಬದ ನಂತರ ತಂಬಾಕು ಖರಿದಿ ಪ್ರಾರಂಬಿಸುತ್ತಿದ್ದರು ಆದರೆ ಪ್ರಸಕ್ತ ಸಾಲಿನಲ್ಲಿ ಉತ್ಪಾದನೆ ಕುಸಿದಿರುವ ಹಿನ್ನಲೆಯಲ್ಲಿ ಖರೀದಿ ಪ್ರಾರಂಭಿಸಿದ್ದಾರೆ. ಸರಾಸರಿ ಪ್ರತಿಕಿಲೊ 100 ರಿಂದ 140 ರೂ ವರಗೆ ಖರಿದಿಸಿದ್ದಾರೆ ಅಕ್ಕೋಳ ಗ್ರಾಮದಲ್ಲಿ 125 ರಿಂದ 130 ರೂ, ಖಡಕಲಾಟ 130 ರಿಂದ 138 ರೂ, ಮತ್ತು ಜತ್ರಾಟ ಗ್ರಾಮದಲ್ಲಿ ತಂಬಾಕು 120 ರಿಂದ 122 ರೂ ವರಗೆ ಖರಿದಿಸಿದ್ದು, ಬೇಲೆ ಇನ್ನು ದುಪ್ಪಟಾಗುವ ಸಂಭವವಿದೆ.
ಚಿಕ್ಕೋಡಿ ತಾಲೂಕಿನ ಪಶ್ಚಿಮ ಮತ್ತು ಉತ್ತರ ಭಾಗದಲ್ಲಿ ತಂಬಾಕು ಬೆಳೆಯುತ್ತಾರೆ. ಅದರಲ್ಲಿ ಪಶ್ಚಿಮ ಭಾಗದ ನಿಪ್ಪಾಣಿ ಪರಿಸರದ ಅಕ್ಕೊಳ, ಖಡಕಲಾಟ, ಪಟ್ಟಣಕುಡಿ, ಗಳತಗಾ, ತಪಕರವಾಡಿ, ಶಿವಾಪೂರವಾಡಿ, ಸಿದ್ನಾಳ, ಕುನ್ನೂರ, ಹುನ್ನರಗಿ, ಶಿರಗಾಂವ, ಗಿರಗಾಂವ, ರಾಮಪೂರ ಮುಂತಾದ ಗ್ರಾಮಗಳಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಇಂದಿಗೂ ರೈತರು ತಂಬಾಕು ಬೆಳೆಯುತ್ತಾರೆ.
ತಂಬಾಕು ಉತ್ಪಾದನೆಯಲ್ಲಿ ಕುಸಿತ: 1998 ರಲ್ಲಿ 21,759, 1999 ರಲ್ಲಿ 16,698, 2000 ರಲ್ಲಿ 16,850, 2001 ರಲ್ಲಿ 16,850, 2002 ರಲ್ಲಿ 18,119, 2003 ರಲ್ಲಿ 14,770, 2004 ರಲ್ಲಿ 17,819, 2005 ರಲ್ಲಿ 16,570, 2006 ರಲ್ಲಿ 14,870, 2007 ರಲ್ಲಿ 15,620, 2008 ರಲ್ಲಿ 16,063, 2009 ರಲ್ಲಿ 13,422, 2010 ರಲ್ಲಿ 13,755, 2011 ರಲ್ಲಿ 11,212, 2012 ರಲ್ಲಿ 14,551 ಹೆಕ್ಟರ ಉತ್ಪಾದನೆ ಮಾಡಿದ್ದು, 2013 ರಲ್ಲಿ 10,650 2014 ರಲ್ಲಿ 10,146, 2015 ರಲ್ಲಿ 10011 ಮತ್ತು 2016 ರಲ್ಲಿ 9800 ಹೆಕ್ಟರ್ ಮತ್ತು 2017 ಸಾಲಿನಲ್ಲಿ 9457 ಹೇಕ್ಟರ ಮತ್ತು 2018 ರಲ್ಲಿ 8085 ಹೆಕ್ಟರ, 2019 ರಲ್ಲಿ ತಂಬಾಕು ಉತ್ಪಾದನೆಯಾಗಿದೆ.
ಕಳೆದ ಸಾಲಿನಲ್ಲಿ ಪ್ರತಿ ಕೆಜಿಗೆ 70 ರಿಂದ 100 ರೂ ಮಾರಾಟ ವಾಗಿತ್ತು ಆದರೆ ಈ ವರ್ಷ 100 ರಿಂದ 140 ರೂ. ವರೆಗೆ ಮಾರಾಟವಾಗುತ್ತದೆ. ಇನ್ನಷ್ಟು ಹೆಚ್ಚಿನ ಬೆಲೆ ಸಿಕ್ಕಾಗ ಮಾತ್ರ ರೈತನಿಗೆ ಲಾಭ ದೊರಕಬಹುದು. ಈ ವರ್ಷ ತಂಬಾಕು ಉತ್ಪಾದನೆ ಕಡಿಮೆಯಾಗಿದ್ದರಿಂದ ಬೆಲೆ ದುಪ್ಪಟ್ಟಾಗ ಬಹುದು ಎಂಬುದು ಉತ್ಪಾದಕರ ಆಶಯವಾಗಿದೆ.
ಪ್ರತಿಕ್ರಿಯೆ: ಪ್ರಸಕ್ತ ಸಾಲಿನಲ್ಲಿ ತಂಬಾಕು ಉತ್ಪಾದನೆ ಕುಸಿದಿದ್ದರಿಂದ ವ್ಯಾಪಾರಿಗಳು ಬೇಗನೆ ಖರಿದಿ ಪ್ರಾರಂಭಿಸಿದ್ದಾರೆ, ಆದರೆ ತಂಬಾಕು ಬೆಳೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲಾ, ಅನುಕೂಲದ ವಾತಾವರಣ ದಿಂದಾಗಿ ಉತ್ತಮದಜರ್ೆ ತಂಬಾಕು ಬೆಳೆದಿದೆ, ಇನ್ನು ಹೆಚ್ಚಿಗೆ ಬೆಲೆ ಸಿಗಬೇಕಾಗಿದೆ ಎನ್ನುತ್ತಾರೆ ಜತ್ರಾಟ ಗ್ರಾಮದ ಉತ್ಪಾದಕ ಎಲ್.ಬಿ.ಖೋತ.