ಝಾಕೀರ್ ನಾಯ್ಕನನ್ನು ಗಡಿಪಾರು ಮಾಡುವುದಿಲ್ಲ - ಮಲೇಷ್ಯಾ ಪ್ರಧಾನಿ ಮಹಾಥೀರ್ ಮಹಮದ್

ಲೋಕದರ್ಶನ ವರದಿ

ಕೌಲಾಲಂಪುರ: ವಿವಾದಿತ ಮುಸ್ಲಿಂ ಮತ ಪ್ರಚಾರಕ ಝಾಕೀರ್ ನಾಯ್ಕನನ್ನು ಗಡಿಪಾರು ಮಾಡುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಾಥೀರ್ ಮಹಮದ್ ಹೇಳಿದ್ದಾರೆಂದು ವರದಿಯಾಗಿದೆ. ಎಲ್ಲಿಯವರೆಗೆ ಅವರು ಯಾವುದೇ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲವೋ ಅಲ್ಲಿಯವರೆಗೆ ಗಡಿ ಪಾರು ಮಾಡುವ ಪ್ರಶ್ನೆ ಇಲ್ಲ. ಅವರಿಗೆ ನಾವು ಶಾಶ್ವತ ವಸತಿಯನ್ನು ಕಲ್ಪಿಸುತ್ತೇವೆಂದು ಮಹಾಥೀರ್ ಮಹಮದ್ ಹೇಳಿರುವುದಾಗಿ ವರದಿಯಾಗಿದೆ. ತನ್ನನ್ನು ಮಲೇಷ್ಯಾದಿಂದ ಗಡಿಪಾರು ಮಾಡಲಾಗಿದೆ ಎನ್ನುವ ಮಾಧ್ಯಮದ ವರದಿಗಳನ್ನು ಝಾಕೀರ್ ತಳ್ಳಿ ಹಾಕಿದ್ದ ಝಾಕೀರ್ ನಾಯ್ಕ್ ಅನ್ಯಾಯದ ವಿಚಾರಣೆಯಿಂದ ಸುರಕ್ಷಿತವಾಗಿರುವವರೆಗೆ ನಾನು ಭಾರತಕ್ಕೆ ಮರಳುವುದಿಲ್ಲ ಎಂದಿದ್ದರು. ಢಾಕಾ ದಾಳಿ ನಡೆಸಿದ ಐಸಿಸ್ ಉಗ್ರರಿಗೆ ಪ್ರೇರಪಣೆ ನೀಡಿದ ಆರೋಪ ಝಾಕೀರ್ ನಾಯ್ಕ್ ಮೇಲೆ ಕೇಳಿ ಬಂದಿದ್ದು, 2016 ರಿಂದ ಮಲೇಷ್ಯಾದ ಪುತ್ರಜಯದಲ್ಲಿ ನೆಲೆಸಿದ್ದು, ಭಾರತಕ್ಕೆ ಮರಳಿಲ್ಲ.