ಲೋಕದರ್ಶನ ವರದಿ
ಧಾರವಾಡ 04: ಸಾರ್ಥಕ ಜೀವನ ಸಾಗಿಸಬೇಕಾದರೆ ಸದಾ ಅರಿವು ಜಾಗೃತಗೊಳಿಸಿಕೊಂಡಿರಬೇಕಾದುದು ಅಗತ್ಯ ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಕರೆ ನೀಡಿದರು. ಅವರು ಅಮೇರಿಕಾದ ಡೆಟ್ರಾಯಿಟ್ನಲ್ಲಿ ನೂನ್ 29 ಮತ್ತು 30 ರಂದು ನಡೆದ ಉತ್ತರ ಅಮೇರಿಕಾದ ವೀರಶೈವ ಸಮಾಜದ 41 ನೇ ಎರಡು ದಿನಗಳ ವಾಷರ್ಿಕ ಅಧಿವೇಶನದ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡುತ್ತಾ ತಿಳಿಸಿದರು.
ಲೌಕಿಕ ಬದುಕಿನ ಆಗುಹೋಗುಗಳ ಬಗೆಗೆ ಅರಿವು ಇರುವಂತೆ ಆಧ್ಯಾತ್ಮಿಕ ಜೀವನದ ಕಡೆಗೂ ಸದಾ ಜಾಗೃತರಾಗಿರಬೇಕು, ತೀವೃಗತಿಯಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಮನುಷ್ಯ ತನ್ನ ತನವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕಾದ ಅಗತ್ಯವಿದೆ. ಹೊರಗಿನ ವಾತಾವರಣದ ಭಯದ ಕಾರಣದಿಂದಾಗಿಯಲ್ಲ, ಆಂತರಿಕವಾದ ಪಂಚೇಂದ್ರಿಗಳ ಆಕರ್ಷಣೆಗಳಿಂದ ಬದುಕನ್ನು ಹಾಳುಗೆಡವಿಕೊಳ್ಳದೆ ಆತ್ಮದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಜೀವನದಲ್ಲಿ ಬರುವ ಎರಡು ತೊಡರುಗಳಿಗೆ ಭಯಗೊಳ್ಳದೆ, ಭೀತರಾಗದೆ ಭವಿಷ್ಯತ್ತಿನ ಉತ್ತಮಾಂಶಗಳ ಕಡೆಗೆ ಸದಾ ಸಕಾರಾತ್ಮಕವಾಗಿ ಚಿಂತಿಸುತ್ತಾ, ಜೀವನ ಸಾಗಿಸಬೇಕಾದುದು ಅಗತ್ಯ. ಕಳೆದ 41 ವರ್ಷಗಳಿಂದ ಅವಿಚ್ಚಿನ್ನವಾಗಿ ಈ ರೀತಿಯ ವಾಷರ್ಿಕ ಸಮ್ಮೇಳನ ನಡೆಸಿಕೊಂಡು ಬರುತ್ತಿರುವ ಉತ್ತರ ಅಮೇರಿಕಾದ ವೀರಶೈವ ಸಮಾಜದ ಕಾರ್ಯಚಟುವಟಿಕೆಗಳನ್ನು ಪ್ರಶಂಶಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ರವರು ಸಮ್ಮೇಳನದ ಪ್ರಮುಖ ವಿಷಯವಾದ 'ಅರಿವೇ ಗುರು' ಕುರಿತು ಮಾತನಾಡಿದರು. ತುಮಕೂರು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳು ಹಾಗೂ ಶ್ವಾಸಯೋಗ ಕೇಂದ್ರದ ಸಂಸ್ಥಾಪಕರಾದ ಶ್ವಾಸಗುರು ವಚನಾನಂದ ಸ್ವಾಮಿಗಳು, ಬೆಂಗಳೂರಿನ ಉದ್ಯಮಿ ಅಂತರಾಷ್ಟ್ರೀಯ ಲಿಂಗಾಯತ ಯುವ ಸಂಘಟನೆಯ ಸಂಚಾಲಕರೂ ಆದ ನವೀನ್ ಕೊಟ್ಟಿಗೆ ಮತ್ತು ಬೆಂಗಳೂರಿನ ಮತ್ತೊಬ್ಬರು ಉದ್ದಿಮೆದಾರ ಪ್ರದೀಪ್ಕುಮಾರ್ ಮಾತನಾಡಿದರು.
ಕಾರ್ಯಕ್ರಮವು ಅಮೇರಿಕಾ ಮತ್ತು ಭಾರತದ ರಾಷ್ಟ್ರಗೀತೆಗಳೊಂದಿಗೆ ಪ್ರಾರಂಭವಾಯಿತು. ಡೆಟ್ರಾಯಿಟ್ನ ಸಮಾಜದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಡಾ. ಸಿ. ಸೋಮಶೇಖರ್ರವರ 'ಅರಿವೇ ಗುರು', ಡಾ, ಶಿವಾನಂದ ಸ್ವಾಮಿಗಳವರ 'ಸೂಕ್ತಿಗಳು' ಹಾಗೂ ಸಂಸ್ಥೆಯ 'ಪರಿಷ್ಕೃತ ವೆಬ್ಸೈಟ್ ನ್ನು ಬಿಡುಗಡೆ ಮಾಡಲಾಯಿತು. ಶ್ರೀಶೈಲ ಹಾದಿಮನಿಯವರು ಕೊಡುಗೆಯಾಗಿ ನೀಡಿದ ಬಸವೇಶ್ವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಸಮಾಜಕ್ಕೆ ವಿಶೇಷವಾದ ಸೇವೆ ಸಲ್ಲಿಸಿದ ಸಜ್ಜನ ಶಿವಾ, ಡಾ. ಜಗದೀಶ್, ಭವಾನಿ ಮುಡಬಾಗಿಲು, ಅಭಿನವ ರೆಡ್ಡಿ, ಪೂನಂ ಬೆನಕಟ್ಟಿ ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧಿವೇಶನದಲ್ಲಿ ಅನುಭವ ಗೋಷ್ಠಿ, ಯುವ ಗೋಷ್ಠಿ ಹಾಗೂ ವ್ಯವಹಾರ ಕುಶಲ ಮೊದಲಾದ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮೊದಲು ಬಸವೇಶ್ವರರ ಭಾವಚಿತ್ರದ ಮೆರಣಿಗೆ ನೆರವೇರಿತು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ತುಮಕೂರು ದಯಾನಂದ ಸ್ವಾಗತಿಸಿದರು. ಉತ್ತರ ಅಮೇರಿಕಾದ ವೀರಶೈವ ಸಮಾಜದ ಅಧ್ಯಕ್ಷ ಲಕ್ಷ್ಮೀ ಹಿರೇಮಠ್ರವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಬೋಡರ್್ ಆಫ್ ರೀಜನ್ಸ್ ಅಧ್ಯಕ್ಷ ದಾದಾ ಪಾಟೀಲ್ ಹಾಗೂ ಡೆಟ್ರಾಯಿಟ್ ಘಟಕದ ಅಧ್ಯಕ್ಷ ನರೇಂದ್ರ ಹಾದಿಮನಿಯವರು ಮಾತನಾಡಿದರು. ಲೀಲಾ ಪಾಲ್ರವರು ಸಮಾಜದ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸುಜಾತ ಕೋರಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು. ಸಮಾಜದ ಸದಸ್ಯರು, ಯುವಕರು, ಮಕ್ಕಳು ಹಾಗೂ ಭಾರತದಿಂದ ಆಗಮಿಸಿದ್ದ ಕಲಾವಿದರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.