ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ: ಬಿ.ಟಿ. ಲಲಿತಾನಾಯಕ್
ಬೆಂಗಳೂರು, ನ.18-ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ತಿಳಿಸಿದರು.
ನಗರದ ಪುರಭವನದ ಎದುರು ಕುಮಾರ್ ಜಾಗೀರ್ದಾರ್ ಅಧ್ಯಕ್ಷತೆಯಲ್ಲಿ ಕ್ರಿಸ್ಪ್ ಸಂಸ್ಥೆ ಹಾಗೂ ಕನರ್ಾಟಕ ರಾಜ್ಯ ವಿಶ್ವಕರ್ಮ ಯುವಜನ ಪರಿಷತ್ ಮತ್ತು ರಾಷ್ಟ್ರೀಯ ಪುರುಷರ ಆಯೋಗ ಜನಾಂದೋಲನ ಸಹಯೋಗದಲ್ಲಿ ಕನರ್ಾಟಕ-ಭಾರತ ಕಾಲ್ನಡಿಗೆ ವಿಜಯೋತ್ಸವ ಹಾಗೂ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇತ್ತೀಚೆಗೆ ಭಾರೀ ಸುದ್ದಿ ಮಾಡಿರುವ ಮೀ ಟೂ ಅಭಿಯಾನದಲ್ಲಿ ಯಾವುದೇ ಸತ್ಯ ಹೊರಬರುತ್ತಿಲ್ಲ. ಕೇವಲ ಆರೋಪ-ಪ್ರತ್ಯಾರೋಪದಲ್ಲೇ ಮುಂದುವರಿದಿದೆ. ಇದರ ಬಗ್ಗೆ ಸುಪ್ರೀಂಕೋಟರ್್ ಸಹ ಸರಿಯಾಗಿ ತೀಪರ್ು ನೀಡಿಲ್ಲ. ಆದ್ದರಿಂದ ಇದಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯ ಎಂಬುದು ಸಹಜ ಪ್ರಕ್ರಿಯೆ. ಪುರುಷರ ಮೇಲೂ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಮಹಿಳೆಯರೂ ಕಾರಣವಾಗಿದ್ದಾರೆ ಎಂದರು.
ಕೋಟರ್್ ತೀಪರ್ು ನೀಡುವಾಗ ಮಹಿಳೆಯರದ್ದು ತಪ್ಪಿದೆಯಾ, ಪುರುಷರ ತಪ್ಪಿರುತ್ತದೋ ಎಂಬುದನ್ನು ತಿಳಿಯದೆ ಮಹಿಳೆಯರ ಪರವಾಗಿ ತೀಪರ್ು ನೀಡುತ್ತದೆ, ಇದು ಸರಿಯಲ್ಲ. ತೀಪರ್ಿನಿಂದ ಪುರುಷನ ಜತೆಗೆ ಅವರ ತಂದೆ-ತಾಯಿ, ಅಕ್ಕ-ತಂಗಿಯರೂ ದೌರ್ಜನ್ಯಕ್ಕೆ ಒಳಗಾಗುವಂತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಸ್ವಾರ್ಥಕ್ಕಾಗಿ ಪುರುಷನ ಮೇಲೆ ದೌರ್ಜನ್ಯ ಸಲ್ಲದು. ಇಬ್ಬರಲ್ಲೂ ಸಮಾನತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎಂದು ಬಿ.ಟಿ.ಲಲಿತಾನಾಯಕ್ ತಿಳಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 