ಲೋಕದರ್ಶನ ವರದಿ
ಹೂವಿನಹಡಗಲಿ 02: ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳನ್ನು ಒಳಗೊಂಡು ಹೂವಿನಹಡಗಲಿ ನೂತನ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಅಭಿವೃದ್ದಿ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳು ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಬುಧವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಜಿಲ್ಲಾ ಕೇಂದ್ರದಿಂದ ಹೂವಿನಹಡಗಲಿ 140ಕಿ.ಮೀ. ದೂರದಲ್ಲಿದೆ.ತಾಲೂಕಿನ ಗಡಿ ಗ್ರಾಮಗಳ ಜಿಲ್ಲಾ ಕೇಂದ್ರದಿಂದ 190 ಕಿ.ಮೀ.ದೂರದಲ್ಲಿವೆ.ಪಶ್ಚಿಮ ತಾಲೂಕುಗಳಾದ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಇತ್ತೀಚೆಗೆ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟಿರುವ ಹರಪನಹಳ್ಳಿ ತಾಲೂಕು ಜಿಲ್ಲಾ ಕೇಂದ್ರದಿಂದ ಸಾಕಷ್ಟು ಅಂತರದಲ್ಲಿವೆ.ಸಾರ್ವಜನಿಕರಿಗೆ ಆಡಳಿತಾತ್ಮಕ ಅನಾನೂಕೂಲತೆಗಳು ಉಂಟಾಗಿದ್ದು, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ರಚಿಸಬೇಕು ಹೊರತು ವಿಜಯನಗರ ಜಿಲ್ಲೆ ಘೋಷಣೆಗೆ ವಿರೋಧವನ್ನು ಹೂವಿನಹಡಗಲಿ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಒತ್ತಾಹಿಸಿದರು.
ಈಗಾಗಲೇ ಶೈಕ್ಷಣಿಕ ಜಿಲ್ಲೆ ಕೇಂದ್ರಕ್ಕೆ ಒತ್ತಾಯಿಸಿ 2004ರಿಂದ ಇಲ್ಲಿಯವರೆಗೂ ಪ್ರತಿಭಟನೆ,ಉಪವಾಸ ಸತ್ಯಾಗ್ರಹ, ಪತ್ರಚಳುವಳಿ ಮೂಲಕ ಸಕಾರಕ್ಕೆ ಹತ್ತಾರುಬಾರಿ ಕೋರಿಕೆ ಸಲ್ಲಿಸಲಾಗಿತ್ತು ಜತೆಗೆ ಜನಪ್ರತಿನಿಧಿಗಳ ಗಮನಕ್ಕೆ ಕೂಡ ತರಲಾಗಿತ್ತು, ಆದರೆ ಸಕರ್ಾರದಿಂದ ಸಕಾರತ್ಮಕ ನಿಧರ್ಾರ ಬಂದಿರುವುದಿಲ್ಲ.ದಕ್ಷಿಣ ಕನರ್ಾಟಕದ ಜಿಲ್ಲೆಗಳ ಅಭಿವೃದ್ದಿ ಹೋಲಿಸಿದೆ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ದಿ ನಿರೀಕ್ಷಿತ ಮಟ್ಟದಲ್ಲಿ ಆಗಿರುವುದಿಲ್ಲ. ಬಳ್ಳಾರಿ ಜಿಲ್ಲೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅತ್ಯಧಿಕ ತೆರಿಗೆ ಸಲ್ಲಿಕೆಯಾದೂ ಆದರೆ ಸಕರ್ಾರದಿಂದ ಈ ಭಾಗದ ಶಿಕ್ಷಣ, ಉದ್ಯೋಗ, ನೀರಾವರಿ, ಸಾರಿಗೆ ಆರೋಗ್ಯ ಕ್ಷೇತ್ರಗಳಿಗೆ ಅನುದಾನಗಳು ಮತ್ತು ಅವಕಾಶಗಳು ಮರೀಚಿಕೆಯಾಗಿವೆ.ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ನ 3ಗಂಟೆಗೆ ಕರೆದಿರುವ ಜನಪ್ರತಿನಿಧಿಗಳ ಅಭಿಪ್ರಾಯಗಳ ಸಭೆಯಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಂಗೂರು ಶಿವಯೋಗಿಶ್ವರ ಸ್ವಾಮೀಜಿ, ಉತ್ತಂಗಿ ಸೋಮಶೇಖರ ಸ್ವಾಮೀಜಿ, ಫಾ.ಡೆನ್ಜಲ್ ವೇಗಸ್, ಕಸಾಪ ಮಾಜಿ ಅಧ್ಯಕ್ಷ ತೋ.ಮ.ಶಂಕ್ರಯ್ಯ, ಹಣ್ಣಿ ವೀರಣ್ಣ, ಕರಿವೀರನಗೌಡ, ರಾಘುನಾಂದ, ಕೆ.ಪುತ್ರೇಶ, ಕಸಾಪ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ರೈತ ಸಂಘದ ವಿ.ಬಿ.ಸೋಮಶೇಖರ, ಗಂಗಾಧರ, ಎಐಟಿಯುಸಿ ಶಾಂತರಾಜ, ಎಸ್.ಎಂ.ಕೂಡ್ಲಯ್ಯ, ಅಂಗನವಾಡಿ ಸಂಘಟನೆ ಅಧ್ಯಕ್ಷೆ ಮಂಜುಳಾ, ಎಂ.ಚಿದಾನಂದ, ಕನ್ನಡ ಸೇನೆ ಕಲಿಕೇರೆ ಬಸವರಾಜ, ದಯಾನಂದ ಮಾತನಾಡಿದರು. ನಂತರ ತಹಶೀಲ್ದಾರ ಕೆ.ರಾಘವೇಂದ್ರರಾವ್ ಅವರಿಗೆ ಮನವಿ ಸಲ್ಲಿಸಿದರು.