ದೇವರ ಆಟ ಬಲ್ಲವರಾರು ಕಿರುಚಿತ್ರ ಲೋಕಾರ್ಪಣೆ
ಲೋಕದರ್ಶನ ವರದಿ
ಬೆಳಗಾವಿ : ಇಲ್ಲಿನ ವಡಗಾವಿಯ ಜೀವೇಶ್ವರ ಭವನದಲ್ಲಿ, ಹವ್ಯಾಸಿ ಬರಹಗಾರರಾದ ಮಂಜುನಾಥ ದನದಮನಿಯವರ ನೇತೃತ್ವದ ಕಸ್ತೂರಿ ನಿವಾಸ ತಂಡದ ಉತ್ಸಾಹಿ ಯುವಕರು ನಿಮರ್ಿಸಿದ ದೇವರ ಆಟ ಬಲ್ಲವರಾರು ಕಿರುಚಿತ್ರದ ಸಿ.ಡಿ.ಗಳನ್ನು ರವಿವಾರ, ತಾತ್ಯಾಸಾಹೇಬ ಮುಸಳೆ ಶಾಲೆಯ ಕಾರ್ಯದಶರ್ಿ ಪರಶುರಾಮ ಢಗೆಯವರು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ನಟಿ ಶ್ರೀಮತಿ. ವಿದ್ಯಾ ತೆಕರ್ಿ ಹಾಗೂ ಉಮಾ ಸಂಗೀತ ಶಾಲೆಯ ಶಿಕ್ಷಕಿ ಶ್ರೀಮತಿ. ಮಂಗಲ ಮಠದ ಚಿತ್ರವನ್ನು ಪ್ರಶಂಸಿಸಿದರು. ಅನಮೋಲ್ ತಂಗುಧಾಮದ ನಿರೀಕ್ಷಕಿ ಸಿಸ್ಟರ್ ಅನಿತಾ ಗ್ರೇಸಿಯಸ್ ಹಾಗೂ ಖ್ಯಾತ ಉದ್ಯಮಿ ನಾಗೇಶ ಹುಬ್ಬಳ್ಳಿಯವರು ತಂಡಕ್ಕೆ ಶುಭ ಹಾರೈಸಿದರು.
ನಗರದ ವೇವ್ಸ್ಟ್ರೀಮ್ ಸ್ಟುಡಿಯೋದಲ್ಲಿ ಮಾತಿನ ಮರುಲೇಪನ ಮಾಡಿರುವ ಚಿತ್ರಕ್ಕೆ ಸಂಗಮೇಶ ಡಿಜಿಟಲ್ನ ಅಶೋಕ ಜಿಡಗಿಯವರ ಛಾಯಾಗ್ರಹಣ, ಪ್ರಶಾಂತ ಕಾಮಕರವರ ಸಂಕಲನವಿದ್ದು, ತಾರಾಗಣದಲ್ಲಿ ಮಂಜುನಾಥ ಡಿ, ಅಜಿತ್, ನಿತಿನ್, ಅಭಿಷೇಕ್ ಹಾಗೂ ಐಶ್ವರ್ಯ ಮೊದಲಾದವರಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 