ಚಿಕ್ಕೋಡಿ 10: ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳ ತಮ್ಮ ಗ್ರಾಮಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಲೇಬೇಕಾಗಿದೆ. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾ ಪಂ ಕಾರ್ಯನಿವರ್ಾಹಕ ಅಧಿಕಾರಿ ಕೆ ಎಸ್ ಪಾಟೀಲ ಹೇಳಿದರು.
ಮಂಗಳವಾರ ತಾ.ಪಂ. ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು.
ಆಡಿ ಗ್ರಾ ಪಂ ಪಿಡಿಓ ಶಿವಾನಂದ ತೇಲಿ, ಬೆನಾಡಿ ಗ್ರಾ ಪಂ. ಪಿಡಿಓ ರಾಮಚಂದ್ರ ವಾಳಕೆ, ಬಾರವಾಡ ಗ್ರಾ ಪಂ. ಪಿಡಿಓ ಪ್ರಕಾಶ ಧನಗರ, ಚಂದೂರ ಗ್ರಾ ಪಂ. ಪಿಡಿಓ ಪ್ರಕಾಶ ಸಮಾಜನ್ನವರ, ಹುನ್ನರಗಿ ಗ್ರಾ ಪಂ. ಪಿಡಿಓ ಆನಂದ ಮಾಳಿ, ಮಲಿಕವಾಡ ಗ್ರಾ ಪಂ. ಪಿಡಿಓ ಅಶೋಕ ಹೊನವಾಡ, ಶಿರದವಾಡ, ಗ್ರಾ ಪಂ ಪಿಡಿಓ ಕುಬೇರ ಕಾಗೆ, ಸಿದ್ನಾಳ ಗ್ರಾ ಪಂ ಪಿಡಿಓ ದಯಾನಂದ ಬಾಚನ್ನಕರ ಇವರು ಗ್ರಾಮ ಪಂಚಾಯತಿಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ್ದಾರೆ. ನೀವು ಇದೆ ರೀತಿ ಕೆಲಸ ಮಾಡಬೇಕು ಹಾಗೂ ಎಲ್ಲರೂ ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಓಡಿಎಪ್ ಮಾಡಲು ತಿಳಿಸಿದರು.
ತಾ ಪಂ ಸಹಾಯಕ ನಿದರ್ೇಶಕ ಆನಂದ ಬಡಕುಂದ್ರೆ, ವ್ಯವಸ್ಥಾಪಕ ಗುರುನಾಥ ಎಂ ಸ್ವಾಮಿ, ಶಿವಾನಂದ ಶಿರಗಾಂವೆ, ಶಶಿಕಾಂತ ಜೋರೆ, ಗುಲಾಬ ಗೌಂಡಿ, ಚೇತನ ಶಿರಹಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳು ಉಪಸ್ಥಿತರಿದ್ದರು.