ಯಮಕನಮರಡಿ 10: ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದ್ದರಿಂದ ಎಲ್ಲರೂ ಸಕರ್ಾರದ ಮಹತ್ವಕಾಂಕ್ಷೆ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಪ್ರತಿಯೊಬ್ಬರೂ ಶೌಚಾಲಯ ಕಟ್ಟಿಕೊಳ್ಳಬೇಕು ಎಂದು ಹುಕ್ಕೇರಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಜಿ.ಎ ಕರಗುಪ್ಪಿ ಹೇಳಿದರು.
ಸ್ಥಳೀಯ ಗ್ರಾ.ಪಂ.ನಲ್ಲಿ ಸೋಮವಾರದಂದು ಗ್ರಾಮೀಣ ಕೂಟ ಹಾಗೂ ನವ್ಯದಿಶಾ ಸಂಸ್ಥೆ ಬೆಳಗಾವಿ ಮತ್ತು ಯಮಕನಮರಡಿ ಗ್ರಾ.ಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಗೊಂಚಲ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾ.ಪಂ ಪಿ.ಡಿ.ಓ ಎ.ಪಿ ಜಯಮಾಲಾ ಮಾತನಾಡಿ ಮಹಿಳೆಯರು ಶೌಚಾಲಯ ಕಟ್ಟಿಕೊಳ್ಳಲು ತಮ್ಮ ಮನೆಯವರ ಮನವೊಲಿಸಬೇಕು. ಶೌಚಾಲಯ ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ಗ್ರಾ.ಪಂ. ವತಿಯಿಂದ ಸಹಾಯಧನ ನೀಡಲಾಗುವುದು ಎಂದು ಹೇಳಿದರು.
ನವ್ಯದಿಶಾ ಅಭಿವೃದ್ಧಿ ಅಧಿಕಾರಿ ಪುನೀತ ಕೆರೂರ ಅವರು ಶೌಚಾಲಯ ಕಟ್ಟಿಕೊಳ್ಳುವ ಹಾಗೂ ಬಳಕೆ ಕುರಿತು ಮಾಹಿತಿ ನೀಡಿ ಪ್ರೋಜೆಕ್ಟರ್ ಮುಖಾಂತರ ವಿವರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮೀಣ ಕೂಟದ ಶಾಖಾ ವ್ಯವಸ್ಥಾಪಕ ಮಹಮದ ಅರೀಪ ಮತ್ತು ಸಿಬ್ಬಂದಿಗಳಾದ ಲಕ್ಷ್ಮಣಗೌಡ, ಕಲ್ಲಯ್ಯ, ಸಂತೋಷ ಮುಂತಾದವರು ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ಎಲ್ಲ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.