ಬೈಲಹೊಂಗಲ 12: ಬಹಳ ಅಪರೂಪ ಎನಿಸುವ ಜಾತ್ರೆಗಳು ಎಲ್ಲ ಊರಗಳಲ್ಲಿಯೂ ನಡೆಯುತ್ತಲೆ ಇರುತ್ತವೆ. ಜಾತ್ರೆ ಉತ್ಸವಗಳಿಗೇನು ಕೊರತೆ ಇಲ್ಲ. ಮನುಷ್ಯ ಜಾತ್ರೆಯನ್ನು ಮಾಡುತ್ತಿದ್ದಾನೆ ಹೊರತು ತನ್ನ ಜೀವನದ ಜಾತ್ರೆಯನ್ನು ಮರೆತು ಬದುಕುತ್ತಿದ್ದಾನೆ ಇದರಿಂದ ಉತ್ತಮ ವ್ಯಕ್ತಿಯಾಗಿ ಬದುಕಿನ ಸಾರ್ಥಕತೆ ಅನುಭವಿಸುವುದು ಸಾಧ್ಯವಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ಸ್ವಾಮಿಜಿ ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದ ಕೊಪ್ಪದ ಅಗಸಿಯಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಸಂಜೆ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿ, ಸೃಷ್ಠಿಯ ಒಳಗಡೆ ತಾನು ಒಬ್ಬ ದೊಡ್ಡ ಮನುಷ್ಯ ಎಂದುಕೊಂಡಿರುವ ಮಾನವ ತನ್ನಲ್ಲಿರುವ ಅಹಂಕಾರವನ್ನು ಮೊದಲು ಬಿಡಬೇಕು. ಪೃಕೃತಿಯ ಮುಂದೆ ಮುನುಷ್ಯ ಒಂದು ಸಣ್ಣ ಪ್ರಾಣಿ ಎಂಬುದನ್ನು ಅರಿಯಬೇಕು. ಒಂದು ಕಾಲದಲ್ಲಿ ಹಳ್ಳಿಗಳು ಬಹಳ ಸುಂದರವಾಗಿದ್ದವು. ಹಿರಿಯರ ಮಾತುಗಳನ್ನು ಎಲ್ಲರು ಕೇಳುತ್ತಿದ್ದರು ಹಿರಿಯರು ಹಾಗೇ ನಡೆದುಕೊಳ್ಳುತ್ತಿದ್ದರು. ಹಿರಿಯರು ಬದುಕಿದ್ದ ಸಂಸ್ಕಾರದ ದಾರಿಯಲ್ಲಿ ಕಿರಿಯರು ಸಾಗುತ್ತಿದ್ದರು. ತಂದೆ ತಾಯಿ ಹೇಗೆ ಗೌರವದಿಂದ ಜೀವನ ನಡೆಸುತ್ತಿದ್ದರೋ ಮಕ್ಕಳು ಅಷ್ಟೇ ಚೆನ್ನಾಗಿ ಬದುಕುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹೆತ್ತವರನ್ನು ನೋಡಲಾರದ ಮಕ್ಕಳು ಹುಟ್ಟಿದ್ದಾರೆ. ಯುವಕರು ಸಂಪೂರ್ಣ ದಾರಿ ತಪ್ಪಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಅಮಲಿನಲ್ಲಿ ದುಶ್ಚಟಗಳ ದಾಸರಾಗಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಠಿಸುವವರಾಗಿದ್ದಾರೆ ಎಂದು ವಿಷಾದಿಸಿದ ನಿಜಗುಣ ಶ್ರೀಗಳು ಯುವಕರು ಜಾತ್ರೆಯ ದಿನ ತೇರಿಗೆ ಉತ್ತತ್ತಿ ಬಾಳೆ ಹಣ್ಣಿಗಳನ್ನು ಎಸೆಯುವ ಬದಲು ತಮ್ಮಲ್ಲಿರುವ ದುವ್ರ್ಯಸನಗಳನ್ನು ಎಸೆಯಬೇಕು. ಸದ್ಗುಣ ಸದ್ಭಾವನೆ, ಸಹಬಾಳ್ವೆ, ಸದ್ವಿಚಾರಗಳನ್ನು ಕಲಿತು ಉತ್ತಮ ಸಮಾಜ ಕಟ್ಟಬೇಕೆಂದರು. ಎಲ್ಲರೂ ಅಜ್ಞಾನ, ಅಂಧಕಾರ, ಕಂದಾಚಾರ, ಮೂಢನಂಬಿಕೆಗಳಿಂದ ಹೊರ ಬಂದು ಸತ್ಯದ ಮಾರ್ಗದಲ್ಲಿ ಬದುಕಿ ನಿಜವಾದ ದೇವರನ್ನು ಕಾಣುವಂತವರಾಗಬೇಕೆಂದು ಅವರು ಮಾಮರ್ಿಕವಾಗಿ ನುಡಿದರು.
ಜಾತ್ರಾ ಕಮೀಟಿ ವತಿಯಿಂದ ನಿಜುಗುಣ ಶ್ರೀಗಳನ್ನು ಸತ್ಕರಿಸಲಾಯಿತು. ಜಾತಯ್ರಾ ಕಮೀಟಿ ಅಧ್ಯಕ್ಷ ಸಂಗಯ್ಯ ದಾಭಿಮಠ, ಅಶೋಕ ಪರಂಡಿ, ಉಳವಪ್ಪ ಬಶೆಟ್ಟಿ, ಈರಪ್ಪ ನಾನನ್ನವರ, ಗದಿಗೆಪ್ಪ ಅರಳಿಮರದ, ಸೋಮೇಶ ಕರಿಕಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಪ್ರವಚನ ಆಲಿಸಲು ಸಾವಿರಾರು ಜನ ಸೇರಿದ್ದರು.