ಡಿ.13ರಂದು ದಿಗಂತ್ ಐಂದ್ರಿತಾ ಮದುವೆ
ಬೆಂಗಳೂರು, ನ.21- ಸ್ಯಾಂಡಲ್ವುಡ್ನ ದೂದ್ಪೇಡಾ ದಿಗಂತ್ ಮತ್ತು ಇಂದ್ರಕನ್ಯೆ ಐಂದ್ರಿತಾ ರೇ ಮದುವೆ ಡಿಸೆಂಬರ್ 13ರಂದು ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ. ಇದರೊಂದಿಗೆ ಒಂಭತ್ತು ವರ್ಷಗಳ ಇವರಿಬ್ಬರ ಪ್ರೀತಿ-ಪ್ರೇಮ ಕೊನೆಗೂ ವಿವಾಹ ಬಂಧನದೊಂದಿಗೆ ಶುಭಂ ಆಗಲಿದೆ.
ದಿಗಂತ್ ಮತ್ತು ಐಂದಿತ್ರಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು-ಗುಸು ಶುರುವಾಗಿ ಅನೇಕ ವರ್ಷಗಳೇ ಉರುಳಿವೆ. ಈ ಪ್ರಣಯದ ಪಕ್ಷಿಗಳು ಕೆಲವು ವರ್ಷಗಳ ಹಿಂದೆಯೇ ಸತಿ-ಪತಿಗಳಾಗಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲವೇ ? ಈಗ ಡಿಸೆಂಬರ್ 13ರಂದು ದಿಗಂತ್, ಐಂದಿತ್ರಾಗೆ ಮಾಂಗಲ್ಯಧಾರಣೆ ಮಾಡುವುದು ಬಹುತೇಕ ಖಚಿತವಾಗಿದೆ.
ಈ ಜೋಡಿ ಇದುವರೆಗೂ ತಮ್ಮ ಪ್ರೀತಿ-ಪ್ರೇಮವನ್ನು ಮಾಧ್ಯಮದ ಎದುರು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಖಾಸಗಿ ವಾಹಿನಿಗಳ ಪ್ರತ್ಯೇಕ ಟಾಕ್ ಶೋಗಳಲ್ಲಿ ದಿಗ್ಗಿ ಮತ್ತು ಐಂದ್ರಿತಾ ತಮ್ಮ ಲವ್ವಿ-ಡವ್ವಿ ಗುಟ್ಟನ್ನು ರಟ್ಟು ಮಾಡಿದ್ದರು. ಸ್ಯಾಂಡಲ್ವುಡ್ ಸೆಂಚುರಿ ಸ್ಟಾರ್ ಡಾ.ಶಿವರಾಜಕುಮಾರ್ ಟಾಕ್ಶೋನಲ್ಲಿ ದಿಗಂತ್ನಿಂದ ಇದನ್ನು ಬಾಯಿ ಬಿಡಿಸಿದ್ದರು. ಶಿವಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸದೇ ಬೇರೆ ಮಾರ್ಗ ಇಲ್ಲದ ದಿಗಂತ್ ಇದೇ ವಷರ್ಾಂತ್ಯದಲ್ಲಿ ನಮ್ಮ ಮದುವೆ ನಡೆಯಲಿದೆ ಎಂದು ತಿಳಿಸಿದ್ದರು.
ವಿವಾಹದಲ್ಲೂ ಸಾರ್ಥಕತೆ : ಬೆಂಗಳೂರಿನಲ್ಲಿ ಈ ತಾರಾ ಜೋಡಿ ತಮ್ಮ ವಿವಾಹವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಚಿತ್ರರಂಗದ ಖ್ಯಾತನಾಮರು ಸೇರಿದಂತೆ ಅತಿಗಣ್ಯ ವ್ಯಕ್ತಿಗಳು ಹಾಗೂ ಆಪ್ತೇಷ್ಟರನ್ನು ಮಾತ್ರ ಮದುವೆಗೆ ಆಹ್ವಾನಿಸಲಿದ್ದಾರೆ.
ಅದ್ದೂರಿ ವಿವಾಹ ಮತ್ತು ಆರತಕ್ಷತೆಗೆ ದುಬಾರಿ ಹಣ ವ್ಯಯಿಸುವ ಬದಲು ಆ ಹಣವನ್ನು ಸಮಾಜದ ಒಳತಿಗಾಗಿ ಬಳಸಲು ಈ ಜೋಡಿ ನಿರ್ಧರಿಸಿದ್ದಾರಂತೆ. ಒಟ್ಟಾರೆ ಡಿಸೆಂಬರ್ನಲ್ಲಿ ಸ್ಯಾಂಡಲ್ವುಡ್ನಲ್ಲಿ ಲವ್ಬಡರ್್ಗಳ ಮದುವೆಗೆ ವೇದಿಕೆ ಸಜ್ಜಾಗುತ್ತಿದೆ.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 