ಪಾರೇಶ ಭೋಸಲೆ
ಬೆಳಗಾವಿ : ಜಿಲ್ಲೆಯಲ್ಲಿ ಡೆಂಘೀ ರೋಗವು ದಿನ ದಿನದಿಂದ ಹರಡುತ್ತಲಿದ್ದು ಈ ಕುರಿತು ಜಿಲ್ಲಾಡಳಿತವಾಗಲಿ ಅಥವಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಲೆ ಕೆಲಸಿಕೊಳ್ಳದೆ ಕಣ್ಣು ಮುಚ್ಚಿ ಕುಳಿತಿರುವದು ದುರಂತವಾಗಿದೆ. ಒಮದು ಕಡೆಯಲ್ಲಿ ಡೇಂಗ್ಯು ಪೀಡಿತ ರೋಗಿಗಳಿಗೆ ಅವಶ್ಯಕತೆ ಇರುವ ಬಿಳಿ ರಕ್ತ ಕಣವು ಆಸ್ಪತ್ರೆಗಳಲ್ಲಿ ಹಾಗೂ ರಕ್ತ ಬಂಢಾರಗಳಲ್ಲಿ ದೊರೆಯದೆ ಹಿನ್ನೆಲೆಯಲ್ಲಿ ರೋಗಿಗಳ ಸಂಬಂಧಿಕರು ಪರದಾಡುತ್ತಿದ್ದಾರೆ. ಅತ್ತ ರಕ್ತ ದೊರೆಯದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸ್ಥಿತಿ ಹದಗೇಡುತ್ತ ಸಾಗಿರುವದು ಹಲವಾರು ರೋಗಿಗಳ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿರುವದು ದುದರ್ೈವದ ಸಂಗತಿಯಾಗಿದೆ.
ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಡೆಂಘೀ ರೋಗವು ಅತಿ ವೇಗವಾಗಿ ಹರಡುತ್ತಲಿದ್ದು, ಈ ರೋಗಕ್ಕೆ ಜಿಲ್ಲೆಯ ಕೆಲವು ನಾಗರಿಕರು ರೋಷಿ ಹೋಗಿದ್ದಾರೆ. ಇತ್ತ ಕೆಲವು ಡೆಂಘೀ ರೋಗ ಅಂಟಿಕೊಂಡಿರುವ ರೋಗಿಗಳು ಆಸ್ಪತ್ರೆಗಳಲ್ಲಿನ ರಕ್ತ ಭಂಡಾರಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ರಕ್ತ ದೊರೆಯದ ಹಿನ್ನೆಲೆಯಲ್ಲಿ ಇತ್ತ ಹಾಸಿಗೆಯ ಮೇಲೆ ರೋಗಿಗಳು ನರಳುತ್ತಾ ನರಳುತ್ತಾ ತೊಂದರೆ ಅನುಭವಿಸುತ್ತಿದ್ದರೆ ಇತ್ತ ರೋಗಿಗಳ ಕುಟುಂಬಸ್ಥರು ರಕ್ತಕ್ಕಾಗಿ ಅಲೇದಾಟ ನಡೆಸುವ ಸ್ಥಿತಿ ಅಂತೂ ಸೊಚನೀಯವಾಗಿದೆ.
ಕೆಲವು ರೋಗಿಗಳಿಗೆ ಎ ಪಾಜೀಟಿವ್ ರಕ್ತ ಅವಶಕತೆ ಇರುವ ಹಿನ್ನಲೆಯಲ್ಲಿ ಎ ಪಾಜೀಟಿವ್ ರಕ್ತ ಹೊಂದಿರುವ ರಕ್ತದಾನಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇತ್ತ ರಕ್ತ ಭಂಡಾರಗಳಲ್ಲಿ ಎ ಪಾಜೀಟಿವ್ ರಕ್ತ ದೊರೆಯ ಕಾರಣ ಹಿನ್ನೆಲೆ ಹಲವು ರೋಗಿಗಳ ಕುಟುಂಬಸ್ಥರು ಕೈ ಚೆಲ್ಲಿ ಕುಳಿತು ಡೆಂಘೀ ಪೀಡಿತ ತಮ್ಮ ರೋಗಿಯನ್ನು ಉಳಿಸಿಕೊಳ್ಳು ಅಗುತ್ತಾ ಅಥವಾ ಇಲ್ಲ ಅನ್ನುವ ರೀತಿಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಿರುವ ದೃಶ್ಯಗಳನ್ನು ಆಸ್ಪತ್ರೆಗಳಲ್ಲಿ ಕಂಡ ಕಂಡವರು ಆರೋಗ್ಯ ಇಲಾಖೆಗೆ ಹಿಡಿ ಶಾಪ ಹಾಕುವಂತಾಗಿದೆ.
ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆಯವರೆ ಬುಧವಾರ ಸಂಜೆಯ ವೇಳೆಗೆ ಜಿಲ್ಲೆಯಲ್ಲಿ 23 ಡೆಂಘೀ ಪೀಡಿತ ರೋಗಿಗಳು ಪತ್ತೆಯಾಗಿರುವ ಬಗ್ಗೆ ವರದಿಯನ್ನು ನೀಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಡೆಂಘೀ ಪೀಡಿತ ರೋಗಿಗಳಿದ್ದು, ಅವರು ಈ ಬಗ್ಗೆ ಬಹಿರಂಗವಾಗಿ ತಮಗೆ ಡೆಂಘೀ ರೋಗ ಅಂಟಿಕೊಂಡಿದೆ ಎಂದು ಹೇಳಲು ಹಿಂದೆ ಸರಿಯುತ್ತಿದ್ದಾರೆ. ಇನ್ನೂ ಕೆಲವು ತಮ್ಮ ಡೆಂಘೀ ಪೀಡಿತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ನೆರೆಯ ಮಹಾರಾಷ್ಟ್ರ ರಾಜ್ಯ ಕಡೆಗೆ ಚಿಕಿತ್ಸೆಗಾಗಿ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಇಷ್ಠೇಲ್ಲಾ ಡೆಂಘೀ ರೋಗದಿಂದ ಅವಾತಂರಗಳು ನಡೆಯುತ್ತಿದ್ದರೂ ಜಿಲ್ಲಾಡಳಿತವಾಗಲಿ ಅಥವಾ ಜಿಲ್ಲಾ ಆರೋಗ್ಯ ಇಲಾಖೆಯಾಗಲೆ ಕ್ರಮಕೈಗೊಳ್ಳದೆ ಇರುವದು ಜಿಲ್ಲೆಯ ನಾಗರಿಕೆ ದುರಂತ ಎಂದು ಬಣ್ಣಿಸಲಾಗುತ್ತಿದೆ. ಅಧಿಕಾರಿಗಳ ಈ ಕ್ರಮವನ್ನು ನೋಡಿದರೆ ಬೆಕ್ಕಿ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವ ಗಾಧೆಯಂತೆ ಅಧಿಕಾರಿಗಳು ವತರ್ಿಸುತ್ತಿರುವದು ಶೋಚನಿಯ ಸಂಗತಿಯಾಗಿದೆ.