ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ 112 ಕೋಟಿ ನಿವ್ವಳ ಲಾಭ

ಲೋಕದರ್ಶನ ವರದಿ    

ಬಳ್ಳಾರಿ 05: ನಗರದ ಮೋಕಾ ರಸ್ತೆಯಲ್ಲಿರುವ ಕನರ್ಾಟಕ ಗ್ರಾಮಿಣ ಬ್ಯಾಂಕಿನ ಮುಖ್ಯ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಯಾಂಕಿನ ಮೇನೇಜರ್ಗಳಾದ ಶ್ರೀನಾಥ್ ಹೆಚ್. ಜೋಷಿ, ಮಂಜುನಾಥ್, ಶೈಲೇಂದ್ರ ಉಡುಪ, ಪ್ರದೀಪ್ ಕುಮಾರ್ ವರ್ಮ, ರವೀಂದ್ರನಾಥ್ ಇವರುಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಗತಿ ಕ್ರಿಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಕಾವೇರಿ ಗ್ರಾಮೀನ ಬ್ಯಾಂಕ್ ಒಂದಾಗಿ ಈಗ ಮಾರ್ಚ ತಿಂಗಳಿನಿಂದ ಕರ್ನಾಟಕದ  ಗ್ರಾಮೀಣ ಬ್ಯಾಂಕ್ ಆಗಿ ಸೇವೆ ಸಲ್ಲಿಸಲು ತೊಡಗಿದೆ. 

ಈ ಗ್ರಾಮಿಣ ಬ್ಯಾಂಕ್ ಭಾರತದ ಇನ್ನುಳಿದ 46 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗಿಂತ ಕನರ್ಾಟಕ ಗ್ರಾಮೀಣ ಬ್ಯಾಂಕ್ ಪ್ರಥಮಸ್ಥಾನದಲ್ಲಿದೆ. ಬ್ಯಾಂಕಿನ ಒಟ್ಟು ವ್ಯವಹಾರ 46,700 ಕೋಟಿ, ಒಟ್ಟು ಠೇವಣಿ 25435 ಕೋಟಿ, ಒಟ್ಟು ಸಾಲ 21265 ಕೋಟಿಗಳಾಗಿದ್ದು. 1167 ಶಾಖೇಗಳಲ್ಲಿ ವ್ಯವಹಾರ ನಡೆಸಿದೆ. ಬ್ಯಾಂಕಿನ 21 ಜಿಲ್ಲೆಗಳು ಮತ್ತು 19 ಪ್ರಾದೇಶಿಕ ಶಾಖೆಗಳನ್ನು ಹೊಂದಿದೆ. 1167 ಶಾಖೆಗಳೊಂದಿದ್ದು 295 ಎಟಿಎಂ ಗಳು ಕಾಂರ್ಯ ನಿರ್ವಹಿಸುತ್ತಿವೆ. 

ಬ್ಯಾಂಕಿನ ಒಟ್ಟು ಲಾಭ 762 ಕೋಟಿ, ನಿವ್ವಳ ಲಾಭ (ತೆರಿಗೆಯ ನಂತರ) 112 ಕೋಟಿ ಲಾಭವನ್ನು ಗಳಿಸಿದೆ. ಅನುತ್ಪಾದಕ ಸಾಲಗಳು 1135 ಕೋಟಿ, ನಿವ್ವಳ ಅನುತ್ಪಾದಕ ಸಾಲಗಳು 505 ಕೋಟಿ ವ್ಯವಹಾರ ನಡೆದಿದೆ. ಗ್ರಾಹಕರಿಗೆ ಸಂತಸ ತರುವ ರೀತಿಯಲ್ಲಿ ನಮ್ಮ ಎಲ್ಲಾ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ನಮ್ಮ ಎಲ್ಲಾ ಶಾಖೆಗಳಲ್ಲಿ ಆತರ್ಿಕ ಸೇರ್ಪಡೆ ಸಾಮಾಜಿಕ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನವನ್ನು ಹೊಳಗೊಂಡಿದ್ದು, ಪ್ರಶಸ್ಥಿ ಹಾಗಿ ಪಾರಿತೋಷಿಕಗಳನ್ನು ನಮ್ಮ ಬ್ಯಾಂಕ್ ಪಡೆದಿದೆ. ಬ್ಯಾಂಕಿನ ಕಾರ್ಯಕ್ಷೇತ್ರ 21 ಜಿಲ್ಲೆಗಳಲ್ಲಿಯೂ ಸಹ ಉತ್ತಮ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದ ಅವರು ಶಾಖಾವಾರು ವ್ಯವಹಾರ 40.01ಕೋಟಿ, ಸಿಬ್ಬಂದಿವಾರು ವ್ಯವಹಾರ 8.71 ಕೋಟಿ ವ್ಯವಹಾರ ಮಾಡಿದ್ದು ಆಥರ್ಿಕ ಮುನ್ನಡೆಯಲ್ಲಿ ಬ್ಯಾಂಕ್ ನಡೆಯುತ್ತಿದೆ. 

ಸ್ವಸಹಾಯ ಸಮಘಗಳ ರಚನೆಗೆ ಒಟ್ಟು 148140 ಸಮಘಗಳು ರಚನೆ ಮಾಡಿ 87709 ಸಂಘಗಳಿಗೆ  ಸಾಲ ವಿತರಣೆ ಮಾಡಿದ್ದಾರೆ. ಸಂಘಗಳಿಗೆ ನೀಡಿದ ಸಾಲ 1731 ಕೋಟಿ ಒಟ್ಟು 31785 ಜಂಟಿ ಸಹಾ ಹೊಣೆಗಾರಿಕೆ ಗುಂಪುಗಳನ್ನು ರಚಿಸಿ 304 ಕೋಟಿ ಸಾಲ ವಿತರಣೆ ಮಾಡಿದೆ, ಎಟಿಎಂ ಸೌಲಭ್ಯ ವಂಚಿತ 6634 ಗ್ರಾಮಗಳಲ್ಲಿ ಮನೆ ಬಾಗಿಲಲ್ಲೆ ಬ್ಯಾಂಕ್ ಸೇವೆಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.  ಪತ್ರಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ಆಡಳಿತಾ ಮಂಡಳಿಯ ಸಿಬ್ಬಂದಿ ಉಪಸ್ಥಿತರಿದ್ದರು.