ಡಯಟ್ದಲ್ಲಿ ಡಿಇಎಲ್ಇಡಿ ವ್ಯಾಸಂಗಕ್ಕೆ ಅವಕಾಶ

ಧಾರವಾಡ 04: ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ 2 ವರುಷಗಳ ಡಿಪ್ಲೋಮಾ ಇನ್ ಎಲೆಮೆಂಟರಿ ಎಜ್ಯೂಕೇಷನ್ (ಡಿ.ಇಎಲ್.ಇಡಿ.) ಶಿಕ್ಷಕರ ಶಿಕ್ಷಣದ ವೃತ್ತಿಪರ ತರಬೇತಿ ವ್ಯಾಸಂಗಕ್ಕೆ ಅವಕಾಶವಿದ್ದು, ಮೊದಲ ವರುಷಕ್ಕೆ 100 ಸೀಟುಗಳ ಲಭ್ಯತೆ ಇದೆ.

     ಪಿ.ಯು.ಸಿ.ಯಲ್ಲಿ ತೇರ್ಗಡೆಯಾಗಿರುವ ಹಾಗೂ ಪ್ರಸ್ತುತ ಪಿ.ಯು.ಸಿ. ಪೂರಕ ಪರೀಕ್ಷೆಗೆ ಹಾಜರಾಗಿರುವ ವಿದ್ಯಾಥರ್ಿಗಳು ಡಿ.ಇಎಲ್.ಇಡಿ. ವ್ಯಾಸಂಗಕ್ಕೆ ಪ್ರವೇಶ ಪಡೆಯಬಹುದಾಗಿದೆ.

ತರಬೇತಿ ಸೌಲಭ್ಯಗಳು: ಡಯಟ್ದಲ್ಲಿ ನುರಿತ ಅನುಭವಿ ಉಪನ್ಯಾಸಕರಿದ್ದು, ವಿಶಾಲ ವರ್ಗದ ಕೋಣೆಗಳಲ್ಲಿ ತಂತ್ರಜ್ಞಾನ ಆಧಾರಿತ ಪಾಠಬೋಧನೆ ನಡೆಯುತ್ತದೆ. ಸಂಸ್ಥೆಯಲ್ಲಿ ಸುಸಜ್ಜಿತ ಭಾಷಾ ಪ್ರಯೋಗಾಲಯ, ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಶೈಕ್ಷಣಿಕ ತಂತ್ರಜ್ಞಾನ ಕೊಠಡಿ, ದೊಡ್ಡ ಗ್ರಂಥಾಲಯ ಹಾಗೂ ಇ-ಗ್ರಂಥಾಲಯ ಸೇರಿ ಅನೇಕ ಸೌಕರ್ಯಗಳಿವೆ.

ಇ-ವಿದ್ಯಾ ಅಕಾಡೆಮಿ:  ಡಯಟ್ದಲ್ಲಿ ಇ-ವಿದ್ಯಾ ಅಕಾಡೆಮಿ ಇದ್ದು, ಇಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಿಕೆಗೆ 20 ಕಂಪ್ಯೂಟರ್ಗಳ ಲ್ಯಾಬ್ ಇದೆ. ಇಲ್ಲಿ ವಿಪುಲ ನಿರಂತರ ಅಂತಜರ್ಾಲ (ಇಂಟರ್ನೆಟ್) ಸಂಪರ್ಕ ಸೌಲಭ್ಯವಿದ್ದು, ಪ್ರಶಿಕ್ಷಣಾಥರ್ಿಗಳು ತಮಗೆ ಬೇಕಾದ ಅಗತ್ಯ ಕಲಿಕಾಂಶಗಳನ್ನು ಇಲ್ಲಿಂದ ಸಂಗ್ರಹಿಸಬಹುದಾಗಿದೆ. ವಿಭಿನ್ನ ಶೈಕ್ಷಣಿಕ ತರಬೇತಿ ಅಂಶಗಳನ್ನು ಪಡೆದುಕೊಳ್ಳಲು ಸುಸಜ್ಜಿತ ವೀಡಿಯೋ ಕಾನ್ಫರನ್ಸ್ ಕೊಠಡಿಯನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ. ಎರಡು ವರುಷಗಳ ಡಿ.ಎಲ್.ಇಡಿ. ತರಬೇತಿಗೆ ಪ್ರವೇಶ ಪಡೆಯುವ ವಿದ್ಯಾಥರ್ಿಗಳಿಗೆ ಶಿಷ್ಯವೇತನ ಸೌಲಭ್ಯವೂ ಇದೆ.

ಉಚಿತ ವಸತಿ ವ್ಯವಸ್ಥೆ: ಡಿ.ಎಲ್.ಇಡಿ. ವಿದ್ಯಾಥರ್ಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ದಿನದ 24 ಗಂಟೆ ನೀರಿನ ಪೂರೈಕೆ ಮತ್ತು ಸ್ನಾನಕ್ಕೆ ಸೋಲಾರ್ ಬಿಸಿ ನೀರಿನ ಸೌಲಭ್ಯವಿದೆ. ಅಪರಾಹ್ನ ಅಕ್ಷರದಾಸೋಹದ ಉಚಿತ ಊಟದ ವ್ಯವಸ್ಥೆಯೂ ಇದೆ. ರಾಜ್ಯದ ಯಾವುದೇ ಜಿಲ್ಲೆಯ ವಿದ್ಯಾಥರ್ಿಗಳು ಪ್ರವೇಶ ಪಡೆಯಬಹುದಾಗಿದೆ.