ಕೂಡ್ಲಿಗಿ03: ವೈದ್ಯರ ದಿನಾಚರಣೆ ನಿಮಿತ್ತ ಇಂದು ಪಟ್ಟಣದಲ್ಲಿ ಸಾರ್ವಜನಿಕರು ತಾವು ಬಹು ಮೆಚ್ಚುಗೆ ಪಡುವ ವೈದ್ಯರಿಗೆ ಶುಭಕೋರುವ ಮೂಲಕ ವೈದ್ಯರಿಗೆ ಶುಭ ಹಾರೈಸಿದರು, ಪಟ್ಟಣದ ವೈ ಎಸ್ ಎಸ್ ಆಸ್ಫತ್ರೆಯ ಮಹಿಳಾ ವೈದ್ಯ ಸೌಮ್ಯಶ್ರೀ ರವರಿಗೆ ಪಟ್ಟಣದ ಯುವತಿ ಗುರುಶಾಂತಮ್ಮ ರವರು ಗುಲಾಬಿ ಹೂ ನೀಡಿ ಶುಭಕೋರಿದರು. ಮತ್ತು ಪಟ್ಟಣದ ಸಕರ್ಾರಿ ಆಸ್ಫತ್ರೆಯ ವೈದ್ಯ ಗುರುನಾಥ ರವರಿಗೆ ಸಾಮಾಜಿಕ ಕಾರ್ಯಕರ್ತ ಟಿ. ಇಬ್ರಾಹೀಂ ಖಲೀಲ್ ರವರು ಗುಲಾಬಿ ಹೂ ನೀಡುವುದರ ಮೂಲಕ ವೈದ್ಯರಿಗೆ ಶುಭ ಕೋರಿದರು. ನೂರಾರು ರೋಗಿಗಳು ವಿವಿದೆಡೆಗಳಲ್ಲಿ ವೈದ್ಯರಿಗೆ ಶುಭಕೋರಿದರು.