ವಲಯ ಮಟ್ಟದ ಪುರುಷರ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ ರಾಯಚೂರ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಥಮ
Zonal Level Men's Kabaddi Tournament Concludes Raichur Institute of Medical Sciences First
ವಲಯ ಮಟ್ಟದ ಪುರುಷರ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ ರಾಯಚೂರ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಥಮ
ಜಮಖಂಡಿ 29: ನಗರದ ಬಿಎಲ್‌ಡಿಇ ಸಂಸ್ಥೆಯ ನಸಿಂರ್ಗ್ ಮಹಾವಿದ್ಯಾಲಯ, ರಾಜೀವ ಗಾಂಧಿ ಆರೊಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಲಬುರ್ಗಿ ಸಹಯೋಗದಲ್ಲಿ ವಲಯ ಮಟ್ಟದ ಪುರುಷರ ಕಬ್ಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭ ಜರುಗಿತು.
ಬಿಎಲ್‌ಡಿಇ ಸಂಸ್ಥೆಯ ವಿಜಯಪುರ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಮಾತನಾಡಿ, ಕಬಡ್ಡಿ ನಮ್ಮ ದೇಹದ ಬೆಳವಣಿಗೆಗೆ ಪೂರಕವಾಗಿದ್ದು, ಇತ್ತೀಚಿಗೆ ಈ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ ಎಂದರು.
ಪ್ರೋ. ಎಸ್.ಎಚ್. ಲಗಳಿ ಮಾತನಾಡಿ, ಕ್ರೀಡೆಗೆ ನಮ್ಮ ಸಂಸ್ಥೆಯಲ್ಲಿ ಸದಾ ಪ್ರೋತ್ಸಾಹ ನೀಡುತ್ತಿದ್ದು, ಅದರ ಸದುಪಯೋಗವನ್ನು ಎಲ್ಲ ಕ್ರೀಡಾಪಟುಗಳು ಪಡೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಕೈಲಾಸ ಹಿರೇಮಠ, ಕಲಬುರ್ಗಿ ವಲಯದ ಸಂಯೋಜಕ ವಿ, ನಾಥಾನಿಯಲ್, ಆಯ್.ಎಸ್. ನ್ಯಾಮಗೌಡ, ನಸಿಂರ್ಗ್ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ವೀರಭದ್ರ್ಪ ಜಿ ಮೇಂಡಗುದಿ ಸ್ವಾಗತಿಸಿದರು. ಪ್ರಾಧ್ಯಾಪಕ ಸುರೇಶ ಬಿರಾದರ ಪ್ರಾರ್ಥಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.
ಪ್ರಥಮ ಸ್ಥಾನವನ್ನು ರಾಯಚೂರ ವೈದ್ಯಕೀಯ ವಿಜ್ಞಾನ ಸಂಸ್ಥೆ ಪಡೆದುಕೊಂಡಿತು. ದ್ವಿತೀಯ ಸ್ಥಾನ ಬಾಗಲಕೋಟ ಬಿ.ವಿ.ವಿ.ಎಸ್. ಸಜ್ಜಲಶ್ರೀ ನಸಿಂರ್ಗ್ ಮಹಾವಿದ್ಯಾಲಯ, ತೃತೀಯ ಸ್ಥಾನ ನಂದಿ ನಸಿಂರ್ಗ್ ಮಹಾವಿದ್ಯಾಲಯ ಬಾಗಲಕೋಟ, ನಾಲ್ಕನೇ ಸ್ಥಾನ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು, ಎಸ್.ಜೆ.ಜಿ.ಎಂ.ಸಿ, ಕೊಪ್ಪಳ ಪಡೆದುಕೊಂಡಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 