ಚವಡಿಹಾಳ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬೇಟಿ
Zilla Panchayat Deputy Secretary visits Chavadihala work site
ಲೋಕದರ್ಶನ ವರದಿ
ಇಂಡಿ 15 : ವಿಜಯಪೂರ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಇಂಡಿ ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಚವಡಿಹಾಳ ಗ್ರಾಮದ ಮಹಾದೇವ ಬಸಣ್ಣ ತೊಂಡಿಕಟ್ಟಿ ಇವರ ಹೊಲದ ಹತ್ತಿರ ಕೆನಾಲ್ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಸದರಿ ಕಾಮಗಾರಿ ಸ್ಥಳದಲ್ಲಿ ಓಒಒಖ ಫೇಸ್ ಅಥೆಂಟಿಕೇಶನ್ ಆಧಾರಿತವಾಗಿ ಹಾಜರಾತಿ ಕುರಿತು ಪರೀಶೀಲಿಸಿದರು.
ಕೂಲಿಕಾರ್ಮಿಕರ ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಿ ಕಾರ್ಮಿಕರ ನಿಖರವಾದ ಹಾಜರಾತಿಯನ್ನು ಪಡೆದಿರುವ ಕುರಿತು ಮಾಹಿತಿ ಪಡೆದುಕೊಂಡರು. ಸದರಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಕಲ್ಪಿಸಿರುವ ಕುರಿತು ಖಾತ್ರಿಪಡಿಸಿದರು. ನಂತರ ಕೂಲಿಕಾರರೊಂದಿಗೆ ಸಮಾಲೋಚಿಸಿ ಕುಂದು-ಕೊರತೆ ಬಗ್ಗೆ ಚರ್ಚಿಸಿದರು. ಬಿಸಿಲಿನ ತಾಪ ಹೆಚ್ಚಿದ್ದು, ಎಲ್ಲರು ಬೇಗನೆ ಬಂದು ಕೆಲಸ ಮಾಡಿ ಬೇಗನೆ ಮರಳಿ, ಆದಷ್ಟು ನೆರಳಿನಲ್ಲಿ ಕೆಲಸ ಮಾಡಿ ಎಂದು ಕೂಲಿಕಾರರಿಗೆ ಸಲಹೆ ನೀಡಿದರು.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೂಲಿಕಾರರು ಕೆಲಸಕ್ಕೆ ಬರುವವರಿಗೆ ಎನ್‌ಎಂಆರ್ ತೆಗೆಯಿಸುವಂತೆ ಮತ್ತು ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲು ಗ್ರಾ.ಪಂ ಪಿಡಿಓ ಸಿದ್ದರಾಯ ಬಿರಾದಾರ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹದೇವಪ್ಪ ಏವೂರ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಸಂಜಯ ಕಡಗೆಕರ ಚವಡಿಹಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದರಾಯ ಬಿರಾದಾರ, ತಾಂತ್ರಿಕ ಸಂಯೋಜಕರು ಶಿವರಾಜ ಬಿರಾದಾರ, ಚಡಚಣ ಮತ್ತು ಇಂಡಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರು ವಿನೋದ ಸಜ್ಜನ, ರಾಮಗೌಡ ಸರಬಡಗಿ, ತಾಂತ್ರಿಕ ಸಹಾಯಕರು ಬಾಬು ನಾಯಕ, ಗ್ರಾಮ ಕಾಯಕ ಮಿತ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 