ಇಂಡಿ ತಾಲೂಕು ವಿವಿಧ ಗ್ರಾಪಂಗಳಿಗೆ ಜಿಪಂ ಸಿಇಓ ರಿಷಿ ಆನಂದ ಭೇಟಿ

ಇಂಡಿ ತಾಲೂಕು ವಿವಿಧ ಗ್ರಾಪಂಗಳಿಗೆ ಜಿಪಂ ಸಿಇಓ ರಿಷಿ ಆನಂದ ಭೇಟಿ Zilla Panchayat CEO Rishi Anand visits various Gram Panchayats in Indi Taluk


ಲೋಕದರ್ಶನ ವರದಿ   

ಇಂಡಿ 02: ತಾಲೂಕಿನ ಬಸನಾಳ  ಬಬಲಾದ, ಬಳ್ಳೊಳ್ಳಿ ಮತ್ತು ಇಂಗಳಗಿ ಗ್ರಾಮ ಪಂಚಾಯಿತಿಗಳಿಗೆ ವಿಜಯಪೂರ ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಭೇಟಿ ನೀಡಿ ಪರೀಶೀಲನೆ ನಡೆಸಿದರು.  ತಾಲೂಕಿನ ಬಸನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಪ್ರಗತಿ ಹಂತದಲ್ಲಿ ಇರುವ  ಕೊಟ್ನಾಳ ಗ್ರಾಮದ ಕೆನಾಲ್ ಪುನರಸ್ಚೇತನ ಕಾಮಗಾರಿ, ಬಬಲಾದ ಗ್ರಾಮ ಪಂಚಾಯತಿ ವ್ಯಾಪ್ತಿಯ  ಅರಣ್ಯ ಪ್ರದೇಶದಲ್ಲಿ ಕಜಡಿಛಿಠಚಿಣಠ ಖಿಚಿಟಿಞ ( ಇಂಗು ಕೆರೆ) ನಿರ್ಮಾಣ ಕಾಮಗಾರಿ, ಬಳ್ಳೊಳ್ಳಿ  ಕರೆ ಪುನಶ್ಚೇತನ ಕಾಮಗಾರಿ ಹಾಗೂ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಟ್ರಂಚ್ ಪಿಟ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಕಾಮಗಾರಿ  ಮೆಚ್ಚುಗೆ ಹಾಗೂ ಪ್ರಶಂಸೆ ವ್ಯಕ್ತಪಡಿಸಿದರು.  ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಾವಕಾಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.  

ಕಾಲುವೆ ಪುನಶ್ಚೇತನ, ಹೂಳು ತೆಗೆಯುವಿಕೆ, ಇಂಗು ಕೆರೆ, ಕೆನಾಲ್, ಕಾಲುವೆ, ಜಲ ಸಂರಕ್ಷಣೆ ಸೇರಿದಂತೆ ವಿವಿಧ ಕಾಮಗಾರಿಗಳಿಂದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯಾಗುವುದರ ಜೊತೆಗೆ, ಕೂಲಿಕಾರರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುತ್ತಿದೆ ಎಂದು ಹೇಳಿದರು. ಯೋಜನೆಯ ಮೂಲಕ ಗ್ರಾಮಗಳ ಅಭಿವೃದ್ಧಿ, ಜಲಮೂಲಗಳ ಸಂರಕ್ಷಣೆ ಹಾಗೂ ಕೂಲಿಕಾರರ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಅವಕಾಶ ಕಲ್ಪಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಕಾಮಗಾರಿಗಳನ್ನು ಇದೇ ರೀತಿಯ ಗುಣಮಟ್ಟದೊಂದಿಗೆ ಮುಂದುವರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವರಿಗೆ ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು.  ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆನರಾ ಬ್ಯಾಂಕ್ ನಿಂಬಾಳ ಕೇಡಿ ಮ್ಯಾನೇಜರ್ ರವರು ವಿಮಾ ಯೋಜನೆಗಳ ಸೌಲಭ್ಯಗಳನ್ನು ತಿಳಿಸಿದರು.