ಯುವನಾಯಕ ವಿನಯಗೌಡಾ ಉರ್ಫ ರಾಜು ಎ.ಬಿ. ಪಾಟೀಲರ ಸುಪುತ್ರ ಇವರ ಜನ್ಮೋತ್ಸವ
Yuvanayaka Vinayagowda alias Raju A.B. Patil's son's birthday celebration
ಲೋಕದರ್ಶನ ವರದಿ
ಸಂಕೇಶ್ವರ 13: ಸಹಕಾರಿ ರಂಗದ ಭೀಷ್ಮ ಸಹಕಾರಿ ತತ್ವದ ಅಡಿಯಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಚೇರಮನ ದಿ. ಬಸಗೌಡಾ ಪಾಟೀಲರ ಕಿರಿಯ ಮೊಮ್ಮಗ ಯುವನಾಯಕ ವಿನಯಗೌಡಾ ಉರ್ಫ ರಾಜು ಎ.ಬಿ. ಪಾಟೀಲರ ಸುಪುತ್ರ ಇವರ ಜನ್ಮೋತ್ಸವ ರವಿವಾರ ನಡೆಯಲಿದ್ದು ವಿನಯಗೌಡಾ ಪಾಟೀಲರು ಸೆಂಟ್ ಮೇರಿ ಆಂಗ್ಲ ಮಾಧ್ಯಮ ಹಾಯಸ್ಕೂಲ ಬೆಳಗಾವಿಯಲ್ಲಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವನ್ನು ಪಡೆದರು ನಂತರ ಪಿ.ಯು.ಸಿ. ವ್ಯಾಸಂಗವನ್ನು ಲಿಂಗರಾಜ ಕಾಲೇಜ ಬೆಳಗಾವಿಯಲ್ಲಿ ಪಡೆದುಕೊಂಡರು ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನದಲ್ಲಿ ಯು.ಕೆ. ವಿಶ್ವವಿದ್ಯಾಲಯದಲ್ಲಿ ವ್ಯವಹಾರ ಪದವಿಧರರಾಗಿ ಉತ್ತಿರ್ಣಗೊಂಡಿದ್ದಾರೆ,
ಇವರು ಎಸ್.ಡಿ.ವ್ಹಿ.ಎಸ್. ಸಂಘದ ನಿರ್ದೇಶಕರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ತಮ್ಮ ತಂದೆಯವರಾದ ಎ.ಬಿ. ಪಾಟೀಲರ ಆಶೀರ್ವಾದದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆದರ್ಶವನ್ನಾಗಿ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ. ಅನ್ನಪೂರ್ಣಾ ಇನ್ಸಿ-್ಟಟ್ಯೂಟ ಎಂ.ಬಿ.ಎ. ಕಾಲೇಜ ಎ.ಬಿ.ಪಾಟೀಲ ಪಬ್ಲಿಕ ಸ್ಕೂಲ (ಸಿ.ಬಿ.ಎಸ್.ಈ) ಪದಿವಪೂರ್ವ ಮಹಾವಿದ್ಯಾಲಯ ಹಾಗೂ ನಿಡಸೋಶಿ ಎಸ್.ಜೆ.ಡಿ. ಹಾಯಸ್ಕೂಲ ಚೇರಮನ್‌ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮತ್ತು ದಿ.ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರಿ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಾಜಿ ಸಚಿವ ಎ.ಬಿ. ಪಾಟೀಲರ ಸಂಸ್ಕಾರ ಆದರ್ಶ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ ಇವರು ಸೌಮ್ಯ ಸ್ವಭಾವದವರು ಇದ್ದು ಎಲ್ಲ ಕಾರ್ಯಕರ್ತರು ಜನತೆ ಇವರ ಕಡೆಗೆ ಯಾವುದೇ ಕೆಲಸಗಳ ಬಗ್ಗೆ ಬಂದರು ತಕ್ಷಣ ಫೋನಿನ ಮುಖಾಂತರ ಅಧಿಕಾರಿಗಳಿಗೆ ತಿಳಿಸಿ ಅವರ ಕೆಲಸಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ ಯಾವಾಗಲೂ ಹಸಮುಖರಾಗಿ ಇರುತ್ತಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 