ಉಕ್ಕು ಕಾರ್ಖಾನೆ ಸ್ಥಾಪನೆಗಾಗಿ: ಬಲ್ದೋಟ ಕಂಪನಿಗೆ ಬೆಂಬಲಿಸಲು ಯೂಸೂಫ ಖಾನ್ ಕರೆ

ಉಕ್ಕು ಕಾರ್ಖಾನೆ ಸ್ಥಾಪನೆಗಾಗಿ: ಬಲ್ದೋಟ ಕಂಪನಿಗೆ ಬೆಂಬಲಿಸಲು ಯೂಸೂಫ ಖಾನ್ ಕರೆ Yusuf Khan calls for support to Baldota company for setting up steel factory

ಕೊಪ್ಪಳ 13: ನಗರದ ಹೊರ ವಲಯ ಪ್ರದೇಶದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗಾಗಿ ಮುಂದೆ ಬಂದಿರುವ ಬಲದೋಟ ಕಂಪನಿಗಳಿಗೆ ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲಿಸಬೇಕು. ಸದರಿ ಕಾರ್ಖಾನೆ ಸ್ಥಾಪನೆ ಆಗಬೇಕು ಇಲ್ಲಿನ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಬೇಕು ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿರುವ ಎಂ,ಡಿ  ಯೂಸುಫ್ ಖಾನ್ ರವರು ಮನವಿ ಮಾಡಿ ಮಾಡಿಕೊಂಡಿದ್ದಾರೆ. 

ಈ ಕುರಿತು ಹೇಳಿಕೆ ನೀಡಿದ ಅವರು ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಬಳಡೋಟ ಕಂಪನಿ ಪರ ನಿಂತ ಕೆಲ ಸಂಘ ಸಂಸ್ಥೆಗಳ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದ ಅವರು ಇದರಿಂದ ಯಾವುದೇ ಪರಿಸರ ಹಾನಿಯಾಗದಂತೆ ಕಾರ್ಖಾನೆಯವರು ಅಗತ್ಯ ಕ್ರಮ ಕೈಗೊಳ್ಳಬೇಕು, ಇದಕ್ಕೆ ಮುಂದೆ ಬಂದಿರುವ ಕಾರ್ಖಾನೆ ಬಲ್ದೋಟ ಕಂಪನಿಯ ಆಡಳಿತ ಮಂಡಳಿ ಭರವಸೆ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆ , ಇದರಿಂದ ಕೊಪ್ಪಳಕ್ಕೆ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚಾಗಲಿದೆ, ಇದು ಬೃಹತ್ ಉದ್ದಿಮೆಯಾಗಿದೆ, ಇದರ ಸ್ಥಾಪನೆಗಾಗಿ ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಸುಮಾರು 54,000 ಕೋಟಿ ರೂ ವೆಚ್ಚದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಬಲ್ದೋಟ ಸಂಸ್ಥೆ ಇತ್ತೀಚಿಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದೊಂದಿಗೆ ಒಪ್ಪಂದ ಮಾಡಿಕೊಂಡು ಅದಕ್ಕೆ ಸಹಿ ಹಾಕಿ ಈಗ ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಲು ಮುಂದಾಗಿದೆ, ಇದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿ ಅಷ್ಟೇ ಆದರೆ ಇದರಿಂದ ಹೆಚ್ಚು ಅನುಕೂಲ ಕೂಡ ವಾಗಲಿದೆ ಇಲ್ಲಿಯ ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ, ಕೊಪ್ಪಳ ಸರ್ವಾಂಗಿನ ಅಭಿವೃದ್ಧಿ ಹೊಂದಲಿದೆ,

ಬಳ್ದೋಟ ಸ್ಟೀಲ್ ಮತ್ತು ಪವರ್ ಲಿಮಿಟೆಡ್, ಬಿ ಎಸ್ ಪಿ ಎಲ್ ಹೆಸರಿನಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಯಾಗಲಿದ್ದು ಇದರಿಂದ ಸಾವಿರಾರು ಉದ್ಯೋಗಗಳು ಕೊಪ್ಪಳದಲ್ಲಿ ಸೃಷ್ಟಿಯಾಗಲಿದೆ, ಉದ್ಯೋಗ ಆರಿಸಿಕೊಂಡು ಜಿಲ್ಲೆಯ ಜನರು ಬೇರೆ ನಗರಗಳತ್ತ ವಲಸೆ ಹೋಗುವದು ತಪ್ಪುತ್ತದೆ ಆರ್ಥಿಕತೆ ಹೆಚ್ಚಳಕ್ಕೂ ಅನುಕೂಲವಾಗುತ್ತದೆ, ಕೂಡಲೆ ಸದರಿ ಕಾರ್ಖಾನೆ ಸ್ಥಾಪನೆ ಆಗಬೇಕು ಇದಕ್ಕೆ ಸರ್ಕಾರ ಮತ್ತು ಜಿಲ್ಲೆಯ ಸಂಘಟನೆಗಳು ಸಹಕಾರ ನೀಡಬೇಕು ಜಿಲ್ಲಾಡಳಿತ ಮತ್ತು ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಾಪನೆಗಾಗಿ ಅನುಕೂಲತೆಗಳನ್ನು ಒದಗಿಸಿಕೊಡಬೇಕು ಇಂಥ ಬೃಹತ್ ಕಾರ್ಖಾನೆ ಸ್ಥಾಪನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಬಲ್ದೋಟ ಕಂಪನಿ ಪರ ನಿಂತು ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಎಂ ಡಿ ಯೂಸುಫ್ ಖಾನ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.