ಸುಧಾ ರಬಿನಾಳಗೆ ಯುಗ ದರ್ಶನಿ ರತ್ನ ಪ್ರಶಸ್ತಿ ಪ್ರದಾನ
Yuga Darshani Ratna Award to Sudha Rabinal
ವಿಜಯಪುರ 10: ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ಯುಗ ದರ್ಶಿನಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚಿಗೆ ಜರುಗಿತು.
ಇದೇ ಸಂದರ್ಭದಲ್ಲಿ ವಿಜಯಪುರ ನಗರದ ವಾರ್ಡ್ ನಂ. 21 ರ ಸಾಯಿಪಾರ್ಕ್‌ನ ಸುಧಾ ರಬಿನಾಳ ಪಂಚಾಯತ ಅಭಿವೃದ್ಧಿ ಅಧಿಕಾರಿ, ಶ್ರೀಶೈಲ ಗಬ್ಬೂರ ನ್ಯಾಯವಾದಿಗಳು ಇವರುಗಳಿಗೆ ಕಾಶಿಯಲ್ಲಿ ರಾಷ್ಟ್ರಮಟ್ಟದ ಯುಗ ದರ್ಶಿನಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಾರಣಾಸಿ ಬನಾರಸ (ಕಾಶಿ) ಹಿಂದೂ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಪಶು ಸಂಗೋಪನ ಸಚಿವರಾದ ರೇಣುದೇವಿ ಹಾಗೂ ಇದರ ಮುಖ್ಯಸ್ಥರಾದ ಸಾಹಿತಿಗಳಾದ ಡಾ. ಸರಸ್ವತಿ ಚಿಮ್ಮಲಗಿ , ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ, ಚಲನಚಿತ್ರ ನಟಿ ಪ್ರೇಮಾ, ಚೇತನಾ ಪೂಜಾರಿ, ವಿಜಯ ಪೂಜಾರಿ ಇನ್ನು ಅನೇಕ ಪ್ರಮುಖರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಪ್ರಶಸ್ತಿಯನ್ನು ಸ್ವೀಕರಿಸಿದ ಸಾಯಿ ಪಾರ್ಕನ ನಿವಾಸಿಗಳಿಗೆ ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಉರ್ ಮಲ್ಲಿಕಾರ್ಜುನ ಗಡಗಿ, ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಉಪಾಧ್ಯಕ್ಷ ಚನಬಸಯ್ಯ ಹಿರೇಮಠ, ಲಕ್ಷ್ಮೀ ನಗರದ ಹಿರಿಯರಾದ ಈಶ್ವರ ಹೂಗಾರ, ಸಾಯಿಬಣ್ಣ ಕಮತಗಿ, ಆರ್.ಎಸ್. ವಾಲೀಕಾರ, ಎಂ.ಐ.ಬಿರಾದಾರ, ಸಿದ್ದು ಇಜೇರಿ, ಪ್ರದೀಮ ಮಸ್ಕಿನ, ಬಳ್ಳೂರ ಸರ್ ಹಾಗೂ ನವಲಿ ಸರ್ ಇತರರು ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 