ಯುವಕರು ಉದ್ಯೋಗ ಸೃಷ್ಟಿಕರ್ತರಾಗಬೇಕು: ಆನಂದ ನ್ಯಾಮಗೌಡ

ಯುವಕರು ಉದ್ಯೋಗ ಸೃಷ್ಟಿಕರ್ತರಾಗಬೇಕು: ಆನಂದ ನ್ಯಾಮಗೌಡ Youth should become job creators: Ananda Nyamagowda

ಲೋಕದರ್ಶನ ವರದಿ 

ಜಮಖಂಡಿ 26 : ಮಕ್ಕಳು ಹೆಚ್ಚು ಅಂಕಗಳಸಿ ಮನೆತನಕ್ಕೆ ಅಷ್ಟೇ ಅಲ್ಲ ಸಮಾಜಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಯುಗದಲ್ಲಿ ಮುಂದೆ ಬರುವ ಕೆಲಸ ಮಾಡುವ ಜೊತೆಗೆ ಉನ್ನತ ಉದ್ಯೋಗದಂತ ಕೋರ್ಸಗಳನ್ನು ಕಲಿಯುವ ಜೊತೆಗೆ ದೊಡ್ಡ ಉದ್ಯಮಿಗಳಾಗಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಯುವಕರು ಮಾಡಬೇಕೆಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ನಂದಿಕೇಶ್ವರ ದೇವಸ್ಥಾನದಲ್ಲಿ ಸಭಾ ಭವನದಲ್ಲಿ ನಡೆದ ತಾಲ್ಲೂಕಾ ಗಾಣಿಗ ಸಮಾಜ ಹಾಗೂ ತಾಲೂಕಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ  ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಗಾಣಿಗ ಸಮಾಜದ ಸಂಘಟನೆಯು 16 ನೇ ವರ್ಷಗಳ ಕಾಲ ನಿರಂತರವಾಗಿ ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಡಾಕ್ಟರ್, ಇಂಜೀನೀಯರ, ಉನ್ನತ ಹುದ್ದೆಯ ಅಧಿಕಾರಿಗಳು ಆಗುವ ಜೊತೆಗೆ ಉದ್ಯೋಗದ ಕಡೆಗೆ ಗಮನಹರಿಸಿ ದೊಡ್ಡ ಉದ್ಯಮಿಗಳಾದರೆ ಸಾಕಷ್ಟು ವಿದ್ಯಾವಂತರು ನಿರುದ್ಯೋಗದಿಂದ ಇದ್ದಾರೆ.

ಅಂತವರಿಗೆ ಕೆಲಸ ನೀಡಿದರೆ ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯ. ಮಕ್ಕಳಲ್ಲಿ ಸಾಧನೆ ಮಾಡುವ ಗುರಿ,ಚಲವನ್ನು ಹೊಂದಬೇಕು. ಗಾಣಿಗ ಸಮಾಜ ಕೇವಲ ಗಾಣಿಗ ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮಾಜದ ಜೊತೆ ಸೇರಿ ಸಾಧಕರಿಗೆ ಸನ್ಮಾನಿಸಿ ಗೌರವಿಸಿದು ಹೆಮ್ಮೆಯ ವಿಷಯವಾಗಿದೆ. ಅತೀ ಕಡುಬಡುವ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಸಂಘಟನೆ ಮಾಡುವಂತೆ ಆಗಬೇಕು ಎಂದರು. 

ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ ಮಾತನಾಡಿ, ಸಮಾಜವನ್ನು ಕಟ್ಟುವ ಜೊತೆಗೆ ಬೇರೆಬೇರೆ ಸಮಾಜವನ್ನು ಪ್ರೀತಿಸೋಣ. ಸಹೋದರತೆಯಿಂದ ಕಾನೋಣ. ಮಕ್ಕಳಲ್ಲಿ ಸಂಸ್ಕಾರದ ಗುಣಗಳನ್ನು ಹೆತ್ತ ತಂದೆ, ತಾಯಿಯಂದಿರು ಮಾಡಬೇಕು ಎಂದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿ, ಇಂದು ಎರಡು ಪ್ರಮುಖ ಸಂಘಟನೆಯಗಳು ಕೆಲಸ ಮಾಡುತ್ತಿವೆ. ಒಂದು ಸಂಘ ಸಮಾಜವನ್ನು ತಿದ್ದುವ ಕೆಲಸವನ್ನು ಹಿರಿಯರ ಜೊತೆ ಕೂಡಿಕೊಂಡು ಕೆಲಸ ಮಾಡುತ್ತಿದೆ.