ಜನಸಂಖ್ಯೆ ಸ್ಪೊಟದ ತಿಳುವಳಿಕೆ ಯುವಕರಲ್ಲಿ ಬರಬೇಕು: ಕೊಳಿವಾಡ
Youth should be made aware of population density: Koliwada
ರಾಣಿಬೆನ್ನೂರ:24 ಪ್ರಸ್ತುತ ದಿನಮಾನಗಳಲ್ಲಿ ಯುವಜನತೆ ದೇಶದ ಸಂಪತ್ತು ದೇಶಕ್ಕೆ ಆಪತ್ತು ಆಗಬಾರದು ಆದ್ದರಿಂದ ಇಂತಹ ಜನಸಂಖ್ಯೆ ಸ್ಪೊಟದ ತಿಳುವಳಿಕೆ ಯುವಕರಲ್ಲಿ ಬರಬೇಕು ಎಂದು ಶಾಸಕ ಪ್ರಕಾಶ ಕೊಳಿವಾಡ ಹೇಳಿದರು.
ಮಂಗಳವಾರ ನಗರದ ಬಿ.ಎ.ಜೆ.ಎಸ್.ಎಸ್ ಮಹಿಳಾ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಎನ್‌ಎಸ್‌ಎಸ್ ಸೇವಾ ಘಟಕ ಇವರ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರಿ್ಡಸಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಲಿಂಗ ಸಮಾನತೆ, ಆರೋಗ್ಯ ಕುಟುಂಬ ಯೋಜನೆಯ ಪ್ರಾಮುಖ್ಯತೆಯನ್ನು ಯುವಕರು ತಿಳಿಯಬೇಕಿದೆ. ವಿಶ್ವ ಜನಸಂಖ್ಯೆಯಲ್ಲಿ ಭಾರತದ ಪಾತ್ರ ಹೆಚ್ಚಿದ್ದು ಜನ ಸಮುದಾಯದ ಅಗತ್ಯತೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಆದ್ದರಿಂದ ಜನಸಂಖ್ಯಾ ನಿಯಂತ್ರಣವಾಬೇಕಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾಽ ರಾಜೇಶ್ವರಿ ಕದರಮಂಡಲಗಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾಽ ರಾಜು ಶಿರೂರು ಜನಸಂಖ್ಯೆ ನಿಯಂತ್ರಣ ಕುರಿತು ಮಾತನಾಡಿದರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೊಟಗಿ, ಪ್ರಾಚಾರ್ಯ ಹೆಚ್.ಬಿ. ಪಟ್ಟಣಶೆಟ್ಟಿ, ಎಚ್.ಎ. ಭಿಕ್ಷಾವರ್ತಿಮಠ, ದೇವೆಂದ್ರ್ಪ.ಡಿ.ಎಸ್, ನಾಗರಾಜ ಕುಡಪಲಿ, ಎಸ್.ಸಿ. ಕೋರಿ, ಶೋಭಾ ಬಸೆನಾಯ್ಕರ, ಸಿಪಿಐ ಶಂಕರ ಜಿ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಬಿ.ಕೆ. ಚೌಡಣ್ಣನವರ, ನಾಗರಾಜ ಕುಡುಪಲಿ ಮತ್ತು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಫೋಟೊ:24ಆರ್‌ಎನ್‌ಆರ್03ರಾಣಿಬೆನ್ನೂರ: ನಗರದ ಬಿ.ಎ.ಜೆ.ಎಸ್.ಎಸ್ ಮಹಿಳಾ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರಿ್ಡಸಿದ್ದ ಒಂದು ದಿನದ ಕಾರ್ಯಗಾರ ಸಮಾರಂಭವನ್ನು ಶಾಸಕ ಪ್ರಕಾಶ ಕೊಳಿವಾಡ ಉದ್ಘಾಟಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 