ಭಾರತೀಯ ಸೈನ್ಯದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಯುವಕರಿಗೆ ಸನ್ಮಾನ
Youth selected as fire fighters in the Indian Army honored
ಮಾಂಜರಿ 24: ಚಿಕ್ಕೋಡಿ ತಾಲೂಕಿನ ಯಡೂರ, ಯಡೂರವಾಡಿ, ಚಂದೂರ ಗ್ರಾಮದ 9 ಜನ ಯುವಕರು ಭಾರತೀಯ ಸೈನ್ಯದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಶಿಂಗಾಡೆ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಸಾದ ಫುಲಾರೆ, ಓಂಕಾರ ಹೆದ್ದೂರೆ, ಪಂಕಜ ಮಾನೆ, ಸಂಕೇತ ಭಂಡಾರೆ, ರಿತೇಶ ಉಮರಾಣೆ, ಸೋಪಾನ ಧನಗರ, ರಾಕೇಶ ಧನಗರ ಸಂಕೇತ ಶಿಂಧೆ, ಆದರ್ಶ ಉಗಾರೆ ಹೀಗೆ 9 ಜನ ಯುವಕರು ಭಾರತೀಯ ಸೈನ್ಯದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರವೀಂದ್ರ ಬೋರಗಾವೆ ಮಾತನಾಡಿ ಇವತ್ತು ಯಡೂರ ಸೇರಿದಂತೆ ಸುತ್ತಮುತ್ತಲಿನ ಹೆಚ್ಚಿನ ಯುವಕರು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.ಸೈನ್ಯಕ್ಕೆ ಆಯ್ಕೆಯಾದ ಯುವಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವ ಲಕ್ಷ್ಮಣ ಶಿಂಗಾಡೆಯವರ ಕಾರ್ಯ ಪ್ರಶಂಸೆನೀಯ ಎಂದರು.
ಈ ಸಂದರ್ಭದಲ್ಲಿ ವಿಷ್ಣು ಶಿಂಗಾಡೆ,ಶಿವು ಹಂಜಿ,ಅಣ್ಣಾಸಾಬ ಹಂಜಿ,ಪಂಚಾಕ್ಷರಿ ಜಡೆ, ಸಂತೋಷ ಪಾಟೀಲ, ರವಿಂದ್ರ ಬೋರಗಾಂವೆ,ಗುಂಡು ಪುಲಾರೆ,ಪೋಪಟ ಕರೋಶಿ, ಧನಂಜಯ ಜಾಧವ,ದಾದು ನರವಾಡೆ, ಸಂತೋಷ ಬೆಳವಿ, ಮಲ್ಲಿಕಾರ್ಜುನ ಮಠಪತಿ, ಮಂಜುನಾಥ ಬೆಡಗೆ, ಬಸವರಾಜ ಹುನ್ನೂರ,ಶೀತಲ ಬೋರಗಾಂವೆ, ವೃಷಭ ಪೂಜಾರಿ, ಸಂತೋಷ ಟೇಂಗಲೆ, ಸಂತೋಷ ಶಿಂಗಾಡೆ, ಪ್ರವೀಣ ಖಡಕೆ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 