ಯುವಕರು ದೇಶಸೇವೆಗೆ ಸದಾ ಸನ್ನದ್ಧರಾಗಿರಬೇಕು: ಮಳಗಾವೆ
Youth must always be ready to serve the country: Malagave
ಲೋಕದರ್ಶನ ವರದಿ
ಕಾಗವಾಡ 28: ಕಾರ್ಗಿಲ್ ವಿಜಯ ದಿವಸವು ಭಾರತೀಯ ಸೈನ್ಯದ ಶೌರ್ಯ ಮತ್ತು ಪರಾಕ್ರಮದ ಪ್ರತೀಕವಾಗಿದೆ. ಈ ದಿನವು ದೇಶಕ್ಕಾಗಿ ನಗುನಗುತ್ತಲೇ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ತ್ಯಾಗವನ್ನು ನಮಗೆ ನೆನಪಿಸುತ್ತದೆ ಎಂದು ನಿವೃತ್ತ ಸುಬೇದಾರ್ ಬಾಬಾಸಾಹೇಬ್ ಮಳಗಾವೆ ಹೇಳಿದ್ದಾರೆ. ಅವರು ರವಿವಾರ ದಿ. 26ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಎನ್‌ಸಿಸಿ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾರ್ಗಿಲ್ ಯುದ್ಧದ ವೇಳೆ ಅತ್ಯಂತ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆಹಾರವಿರಲಿಲ್ಲ, ನಿದ್ರೆಯಿರಲಿಲ್ಲ, ಹವಾಮಾನವೂ ಅನುಕೂಲಕರವಾಗಿರಲಿಲ್ಲ. ಶತ್ರುಗಳು ನಮ್ಮ ಬಂಕರ್‌ಗಳನ್ನು ಧ್ವಂಸಗೊಳಿಸುತ್ತಿದ್ದರೂ ಸಹ ನಾವು ಧೈರ್ಯ ಮತ್ತು ಶೌರ್ಯದಿಂದ ಹೋರಾಡಿ ಈ ಐತಿಹಾಸಿಕ ವಿಜಯವನ್ನು ಸಾಧಿಸಿದ್ದೇವೆ. ಈ ಪರಾಕ್ರಮದಿಂದ ಪ್ರೇರಣೆ ಪಡೆದು ಯುವಕರು ದೇಶಸೇವೆಗೆ ಸದಾ ಸನ್ನದ್ಧರಾಗಿರಬೇಕು ಎಂದರು.
ಮೇಜರ್ ವ್ಹಿ.ಎಸ್. ತುಗಶೆಟ್ಟಿ, ಡಾ. ಎಸ್.ಪಿ. ತಳವಾರ ಮಾತನಾಡಿದರು. ಪ್ರೊ. ಬಿ.ಎ. ಪಾಟೀಲ, ವ್ಹಿ.ಎಸ್. ತುಗಶೆಟ್ಟಿ, ಪ್ರೊ. ಪಿ.ಬಿ. ನಂದಾಳೆ, ಲೆಫ್ಟಿನೆಂಟ್ ಅಶೋಕ ಅಳಗೊಂಡಿ, ಕೆಡೆಟ್ ಚಿದಾನಂದ ದಾಗೆ, ಕೆಡೆಟ್ ಉಷಾ ಕೋಕಣೆ, ರಾಜಶ್ರೀ ಕಾಡಾಪುರೆ ಸೇರಿದಂತೆ ಪ್ರಾಧ್ಯಾಪಕರು, ಎನ್‌ಸಿಸಿ ಕೆಡೆಟ್‌ಗಳು ಹಾಗೂ ಕಾಗವಾಡ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 