ಸಾಮ್ರಾಟ್ ಸ್ಟೋನ್ ಕ್ರಷರ್ ಉದ್ಘಾಟಿಸಿದ ಯುವ ಧುರೀಣ ಚಿದಾನಂದ ಸವದಿ
Youth leader Chidananda Savadi inaugurated Samrat Stone Crusher
ಅಥಣಿ 21: ತಾಲೂಕಿನ ಪೂರ್ವ ಭಾಗದ ರೈತರಿಗೆ, ಕಾರ್ಮಿಕರಿಗೆ, ಯುವಕರಿಗೆ, ಬಡ ಮತ್ತು ಮಧ್ಯಮ ವರ್ಗದವರಿಗೆ ಅನಕೂಲವಾಗಿಸುವ ನಿಟ್ಟಿನಲ್ಲಿ ಸಾಮ್ರಾಟ್ ಎಂಟರ್್ರೈಸಸ್ ಸ್ಟೋನ್ ಕ್ರಷರ್ ಪ್ರಾರಂಭಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉದ್ಯಮಿ, ಕಾಂಗ್ರೆಸ್ ಪಕ್ಷದ ಯುವ ನಾಯಕ ಶಿವು ಗುಡ್ಡಾಪುರ ಹೇಳಿದರು.
ಅವರು ಅಡಹಳ್ಳಟ್ಟಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ಪ್ರಾರಂಭಿಸಲಾದ ಸಾಮ್ರಾಟ ಸ್ಟೋನ್ ಕ್ರಷರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಭಾಗದಲ್ಲಿ ಸ್ಟೋನ್ ಕ್ರಷರ್ ಮೂಲಕ ನಿರುದ್ಯೊಗಿಗಳಿಗೆ ಉದ್ಯೋಗ ಕಲ್ಪಿಸುವ ಮತ್ತು ಬಡ ಹಾಗೂ ಮಧ್ಯಮ ವರ್ಗರ ರೈತರ ಮನೆ ಮತ್ತು ಇತರ ಕಾಮಗಾರಿಗಳ ನಿರ್ಮಾಣಕ್ಕಾಗಿ ಸ್ಪರ್ಧಾತ್ಮಕ ದರದಲ್ಲಿ ಎಮ್ ಸ್ಯಾಂಡ್, ಖಡಿ, ಡಸ್ಟ ಸೇರಿದಂತೆ ಎಲ್ಲ ವಸ್ತುಗಳನ್ನು ಕಡಿಮೆ ದರದಲ್ಲಿ ಕೊಡುತ್ತೇವೆ. ಈ ಭಾಗದ ಯುವಕರಿಗೆ, ಕಾರ್ಮಿಕರಿಗೆ ಉದ್ಯೋಗ ಕೊಡಬೇಕು ಎನ್ನುವ ಕನಸು ನನ್ನದಾಗಿತ್ತು ಇಂದು ಈ ಉದ್ಯಮ ಪ್ರಾರಂಭಗೊಂಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು ಅಥಣಿ ಮತಕ್ಷೇತ್ರದ ಯುವ ಧುರೀಣ ಚಿದಾನಂದ ಸವದಿ ಸಾಮ್ರಾಟ್ ಸ್ಟೋನ್ ಕ್ರಷರ್ ಉದ್ಘಾಟಿಸಿದರು ಎಂದು ಹೇಳಿದರು.
ಅಡಹಳ್ಳಿಯ ಕಾಂಗ್ರೆಸ್ ಮುಖಂಡ ಈರಗೌಡ ಪಾಟೀಲ ಮಾತನಾಡಿ, ಯುವ ನಾಯಕ ಶಿವು ಗುಡ್ಡಾಪುರ ಮಾಲಿಕತ್ವದಲ್ಲಿ ಸಾಮ್ರಾಟ್ ಸ್ಟೋನ್ ಕ್ರಷರ್ ಅಡಹಳ್ಳಟ್ಟಿ ಗ್ರಾಮದಲ್ಲಿ ಪ್ರಾರಂಭಗೊಂಡಿರುವುದು ನಮ್ಮ ಭಾಗದ ರೈತರಿಗೆ ಅನಕೂಲವಾಗಲಿದೆ ಎಂದ ಅವರು ಸರಕಾರಿ ಕೆಲಸ ನಿರ್ವಹಿಸುವ ಗುತ್ತಿಗೆದಾರರಿಗೂ ಈ ಸ್ಟೋನ್ ಕ್ರಷರ್ ಅನಕೂಲವಾಗಲಿದೆ ಎಂದರು.
ಧುರೀಣರಾದ ಚಿದಾನಂದ ಸವದಿ, ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ,ಮುತ್ತಣ್ಣಾ ಕಾತ್ರಾಳ, ಬಸು ಗುಮಟಿ, ಪುಷ್ಪಕ ಪಾಟೀಲ, ಸಿದ್ದಣ್ಣಾ ಪಾಟೀಲ ,ಮಹಾತೇಂಶ ಠಕ್ಕಣ್ಣವರ, ಬಸು ಬುಟಾಳಿ, ನೀರಾವರಿ ನಿಗಮದ ಪ್ರವೀಣ ಹುಣಸಿಕಟ್ಟಿ, ಸಣ್ಣ ನೀರಾವರಿ ಇಲಾಖೆಯ ಪ್ರವೀಣ ಪಾಟೀಲ, ಸದಾಶಿವ ಹರಪಾಳೆ, ಸತ್ಯಪ್ಪ ಬಾಗೆನ್ನವರ, ಚಿದಾನಂದ ಮಠಪತಿ, ಘಟಿವಾಳ ಗುಡ್ಡಾಪೂರ, ಅಪ್ಪು ಪಾಟೀಲ, ಗಡ್ಡೇಕರ , ಮಹಾಂತೇಶ ಸಮಗೊಂಡ, ಶ್ರೀಕಾಂತ್ ಪೂಜಾರಿ, ರಾಮು ಪಾಟೀಲ, ಗೌರೀಶ ಹಿರೇಮಠ, ಧರೆಪ್ಪ ಠಕ್ಕಣ್ಣವರ ಸೇರಿದಂತೆ ಅನೇಕರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 