ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲಿಯೇ ಸಾವು
Youth dies on the spot after being electrocuted
ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲಿಯೇ ಸಾವು
ಲೋಕದರ್ಶನ ವರದಿ
ಜಮಖಂಡಿ 09: ನಗರದ ಚಿಕ್ಕಲಗಾರ ಗಲ್ಲಿಯ ಯುವಕನೊರ್ವನಿಗೆ ಬೆಳಗಿನ ಜಾವದಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಮುಧೋಳ ರಸ್ತೆಯ ಪಕ್ಕದಲ್ಲಿರುವ ಚಿಕ್ಕಲಗಾರ ಗಲ್ಲಿಯ ಯುವಕ ದರ್ಶನ ಚಂದ್ರಶೇಖರ ಚಿಕ್ಕಲಗಾರ (20) ಸಾವನ್ನಪ್ಪಿದ ದುರ್ದೈವಿ. ಬೆಳಗಿನ ಜಾವದಲ್ಲಿ ದೇವಸ್ಥಾನದ ಮೇಲೆ ವಿದ್ಯುತ್ ಬಲ್ಪ್ ಜೋಡಣೆ ಮಾಡಲು ಹೋದ ಸಮಯದಲ್ಲಿ ದೇವಸ್ಥಾನದ ಮೇಲೆ ಮುಖ್ಯ ವಿದ್ಯುತ್ ಕಂಬದ ತಂತಿ ಹಾಯ್ದು ಬಲ್ಪವನ್ನು ಜೋಡಿಸುತ್ತಿದ್ದ ವೇಳೆಯಲ್ಲಿ ವಿದ್ಯುತ್ ಮೇನ್ ಲೈನ್ ಅತೀ ಕೆಳಗಡೆ ಇರುವ ಕಾರಣ ಮೃತನ ಕೈ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬರುತ್ತದೆ.
ಸ್ಥಳಕ್ಕೆ ಶಹರ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಇತ್ತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 