ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಇಲ್ಲದೇ ದಾರಿ ತಪ್ಪುತ್ತಿರುವ ಯುವಕರು: ಶಾಸಕ ಮಾನೆ
Youth are going astray due to lack of good morals and education for children: MLA Mane
ಹಾನಗಲ್:ಅಕ್ಷರಅನುಭವಕೂಡಿ ಹಿತಾನುಭವದ ಶಿಕ್ಷಣ ಬೇಕಿದೆ. ಇದು ಶರಣರು, ಸಂತರು, ಸೂಫಿಗಳ ನಾಡು, ಭಾವೈಕ್ಯತೆಯ ಬೀಡು.ಮಾನವತೆಇಲ್ಲಿನ ಮೌಲ್ಯವಾಗಿದೆ.ಸಂಘರ್ಷ ಬಿಡೋಣ.ಆರ್ಥಿಕ ಮುನ್ನಡೆಗೆ ಮುಂದಾಗೋಣಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬೆಳಗಾಲಪೇಟೆಗ್ರಾಮದಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ರಚಿತವಾದಜ್ಞಾನತರಂಗ ಮಾಸ ಪತ್ರಿಕೆ ಬಿಡುಗಡೆ ಹಾಗೂ ಶಾಲಾ ಸಂಸತ್ತಿನಉದ್ಘಾಟನೆ ನೆರವೇರಿಸಿ ಅವರುಮಾತನಾಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ನೀಡದೇ ಹೋಗುತ್ತಿರುವುದರಿಂದ ವಿನಾಶದತ್ತಯುವ ಪೀಳಿಗೆ ಹೋಗುತ್ತಿರುವ ಅಪಾಯಗಳು ಕಣ್ಮುಂದೆಕಾಣುತ್ತಿವೆ. ಭಾರತ ವಿಶ್ವ ಬಂಧುಆಗಿದೆ.ಈಗ ವಿಶ್ವ ನಾಯಕತ್ವ ನಮ್ಮದಾಗಬೇಕಾಗಿದೆ.ಇದುಯಾರೊಬ್ಬರಿಂದ ಸಾಧ್ಯವಾಗುವುದಲ್ಲ. ಸಾಮೂಹಿಕ ಜವಾಬ್ದಾರಿ ಬೇಕಿದೆ. ಹಾಗಾಗಿ ನಾವೆಲ್ಲರೂ ಸಾಮಾಜಿಕ ಕಳಕಳಿ, ಜವಾಬ್ದಾರಿ ಪ್ರದರ್ಶಿಸಬೇಕಿದೆ. ನಮಗೇಕೆ ಬೇಕು?ಎನ್ನುವಅನಾದರ ಬೇಡಎಂದರು.
ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿದರು.ಚಂದ್ರಶೇಖರ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು.ಆಲದಕಟ್ಟಿಗ್ರಾಪಂಅಧ್ಯಕ್ಷೆ ಮಾಳವ್ವ ದೇವಸೂರ, ಸದಸ್ಯರಾದ ಹನುಮಂತಪ್ಪ ವಡ್ಡರ, ವೀರಣ್ಣ ನಿಂಬಣ್ಣನವರ, ಮುಖಂಡರಾದ ಸುರೇಶ ಮುಸುರಿ, ಮಲ್ಲಿಕಾರ್ಜುನದೇವಣ್ಣನವರ, ಮುಕ್ತಾನಂದ ಹಿರೇಮನಿ, ಮೆಹಬೂಬಅಲಿ ಹುದ್ದಾರ, ಶಾಂತವೀರೇಶ ನೆಲೊಗಲ್, ಪ್ರಶಾಂತಕಾಡಪ್ಪನವರ, ಬಂಕಮ್ಮ ಸವಣೂರ, ಕೃಷ್ಣ ಉರಣಕರ, ಪಿಡಿಒಎಸ್.ಪಿ.ಮರಾಠಿ, ಗಂಗಾಧರ ಪ್ಯಾಟಿ, ಪ್ರಕಾಶ ಈಳಿಗೇರ, ಸುರೇಶ ಶೆಟ್ಟಿ, ಸುರೇಶತಂಗೋಡ, ಪ್ರತಿಭಾ ಪಾಟೀಲ, ಅನುಸೂಯಕರ್ಕಿಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 