ರಂಗಪಂಚಮಿ ನಿಮಿತ್ತ ಯುವಕರು, ಯುವತಿಯರ ಬಣ್ಣದಾಟ
Youth and young women dance in colors on the occasion of Ranga Panchami
ರಾಯಬಾಗ 08 : ಪಟ್ಟಣದಲ್ಲಿ ಭಾನುವಾರ ರಂಗಪಂಚಮಿ ನಿಮಿತ್ತ ಯುವಕರು, ಯುವತಿಯರು, ಮಹಿಳೆಯರು, ಮಕ್ಕಳು ಬಣ್ಣದಲ್ಲಿ ಮುಳಗೆದ್ದರು. ಪರಸ್ಪರ ಬಣ್ಣ ಹಚ್ಚಿ, ಕೆಕೆ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಭಾನುವಾರ ರಜೆ ದಿನ ಇರುವುದರಿಂದ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಬಣ್ಣದಾಟ ಜೋರಾಗಿ ನಡೆಯಿತು. ಯುವಕರು ಸಂಗೀತ ನಾದಕ್ಕೆ ಹೆಜ್ಜೆ ಹಾಕಿದರು. ಮಕ್ಕಳು ಪಿಚಕಾರಿಗಳಿಂದ ಬಣ್ಣದ ನೀರು ಸಿಂಪಡಿಸಿ ಸಂಭ್ರಮದಿಂದ ಕುಣಿದಾಡಿದರು. ಮಹಿಳೆಯರು ಕೂಡ ಬಣ್ಣದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ರಾಯಬಾಗ ತಹಸೀಲ್ದಾರ ಮಹಾದೇವ ಸನಮುರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಚಂದರಗಿ ಹಾಗೂ ಸಿಬ್ಬಂದಿ ಕೂಡ ಯುವಕರೊಂದಿಗೆ ಬಣ್ಣದಾಟದಲ್ಲಿ ಪಾಲ್ಗೊಂಡು, ಬಣ್ಣ ಹಚ್ಚಿ ಸಂಭ್ರಮಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 