ಯುವಜನತೆಯಿಂದ ಸಹಿ ಸಂಗ್ರಹ
ಹಾವೇರಿ 20:ದೇಶದ ಬಹುದೊಡ್ಡ ಮಾನವ
ಸಂಪನ್ಮೂಲವಾಗಿರುವ ಯುವಜನತೆಗೆ ಇದುವರೆಗೂ ದೇಶದಲ್ಲಿ ಆಡಳಿತ ನಡೆಸಿದ ಸರಕಾರಗಳು ಉದ್ಯೋಗ ನೀಡದೇ ವಂಚಿಸುತ್ತಿವೆ ಎಂದು ಡಿವೈಎಫ್ಐ ರಾಜ್ಯ
ಕಾರ್ಯದಶರ್ಿ ಬಸವರಾಜ ಪೂಜಾರ ಆರೋಪಿಸಿದರು.
ನಗರದ
ಬಸ್ ನಿಲ್ದಾಣದೆದುರು ಡಿವೈಎಫ್ಐ ಜಿಲ್ಲಾ ಘಟಕವು ಉದ್ಯೋಗ ಸೃಷ್ಟಿಗೆ ಹಾಗೂ ಖಾಸಗೀ ರಂಗದಲ್ಲಿ
ಮೀಸಲಾತಿಗೆ ಒತ್ತಾಯಿಸಿ,ನವೆಂಬರ್ 3ರಂದು ನಡೆಯುತ್ತಿರುವ ದೆಹಲಿ
ಚಲೋದ ಭಾಗವಾಗಿ ವಿದ್ಯಾಥರ್ಿ-ಯುವಜನರು ಹಾಗೂ ಸಾರ್ವಜನಿಕರಿಂದ ನನ್ನ
ಉದ್ಯೋಗವೆಲ್ಲಿ ? ಸಹಿ ಸಂಗ್ರಹ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಮಾತನಾಡಿದರು.
ವರ್ಷಕ್ಕೆರಡು
ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂದು ಚುನಾವಣೆಗೆ ಮುಂಚೆ ಆಸ್ವಾಶನೆ ನೀಡ ಯುವಜನರ ಮತವಪಡೆದು
ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿಯವರು ಉದ್ಯೋಗ ಸೃಷ್ಟಿಯ ಬದಲು ಉದ್ಯೋಗ ನಾಶಕ್ಕೆ
ಮುಂದಾಗಿರುವದನ್ನು ದೇಶದ ಯುವಜನತೆ ಎಂದಿಗೂ
ಸಹಿಸೋದಿಲ್ಲ.ಉದ್ಯೋಗವಿಲ್ಲದೆ ಪರದಾಡುತ್ತಿರುವ ಯುವಜನತೆ ಮುಂಬರುವ
ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು
ಎಚ್ಚರಿಸಿದರು.
ಕೇಂದ್ರ ಸರಕಾರವನ್ನು ಉದ್ಯೋಗಕ್ಕೆ ಒತ್ತಾಯಿಸಿ #ನನ್ನ ಉದ್ಯೋಗವೆಲ್ಲಿ? (#ಘಜಡಿಜ ಒಥಿ
ಎಠಛ) ಅಭಿಯಾನವನ್ನು ದೇಶವ್ಯಾಪಿ ನಡೆಸುತ್ತಿರುವ ಡಿವೈಎಫ್ಐ, ನವಂಬರ್ 3 ರಂದು ದೆಹಲಿ ಚಲೋ
ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚಿನ
ಸಂಖ್ಯೆಯಲ್ಲಿ ಯುವಜನರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು
ವಿನಂತಿಸಿದರು.
ಜಿಲ್ಲಾ ಸಂಚಾಲಕ ಮುಕ್ತಾನಂದ ಹಿರೇಮನಿ ಮಾತನಾಡಿ ಯುವಕರಿಗೆ ಉದ್ಯೋಗ ನೀಡದೇ ಇರುವುದು ದುರಂತ. ಉದ್ಯೋಗ ನೀಡುತ್ತೇವೆ ಎಂದು ಮಾತನಾಡಿದರೆ ಎಲ್ಲರಿಗೂ ಉದ್ಯೋಗ ಸಿಕ್ಕಂತಾಗುವುದಿಲ್ಲ. ನಾವೇಲ್ಲರೂ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.ಸಾವಿರಾರು ವಿದ್ಯಾಥರ್ಿ-ಯುವಜನರು ಮತ್ತು ಸಾರ್ಜನಿಕರು ಸಹಿ ಹಾಕುವ ಮೂಲಕ ಬೆಂಬಲಿಸಿ ಪಾಲ್ಗೊಂಡರು.
ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆಯಾದ ರೇಣುಕಾ ಕಹಾರ, ಜಿಲ್ಲಾ
ಮುಖಂಡರಾದ ಮಂಜುನಾಥ ಮಕರವಳ್ಳಿ, ಹನುಮಂತ ಸುಣಗಾರ, ಎಸ್ಎಫ್ಐ ಜಿಲ್ಲಾ ಸಹಕಾರ್ಯದಶರ್ಿ ಬಸವರಾಜ ಭೋವಿ, ಬಸನಗೌಡ ಭರಮಗೌಡ್ರ, ಸಾಮಾಜಿಕ ಪರಿವರ್ತನ ಜನಾಂಧೋಲನ ಮುಖ್ಯಸ್ಥರಾದ ಹಸೀನಾ ಹೆಡಿಯಾಲ, ಜಾನಪದ ಕಲಾವಿದರಾದ ಬಸವರಾಜ ಶಿಗ್ಗಾಂವಿ, ಮೋಹನ್, ಕಿರಣ್ ಗೊಲ್ಲರ ಮತ್ತಿತರರು
ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 