ಯುವಕನ ಹತ್ಯೆ ಪ್ರಕರಣ: ಸಂಬಂಧಿಸಿದವರ ಮೇಲೆ ಕಠಿಣ ಕ್ರಮಕೈ ಒತ್ತಾಯ
Youth's murder case: Strict action demanded against those involved
ಯುವಕನ ಹತ್ಯೆ ಪ್ರಕರಣ: ಸಂಬಂಧಿಸಿದವರ ಮೇಲೆ ಕಠಿಣ ಕ್ರಮಕೈ ಒತ್ತಾಯ
ಕೊಪ್ಪಳ 08: ಕೊಪ್ಪಳ ನಗರದಲ್ಲಿ ಇತ್ತೀಚೆಗಷ್ಟೇ ನಡೆದ ಭಯಾನಕ ಹತ್ಯೆ ಪ್ರಕರಣವು ನಮ್ಮೆಲ್ಲರನ್ನು ತೀವ್ರ ಆತಂಕಕ್ಕೊಳಪಡಿಸಿದೆ. ಇಲ್ಲಿನ ಕುರುಬರ ಓಣಿಯ ಗವಿಸಿದ್ಧಪ್ಪ ನಾಯಕ ಎಂಬ ಯುವಕನನ್ನು, ಕೊಲೆ ಮಾಡಲಾಗಿದೆ,ಪ್ರೀತಿ ಸಂಬಂಧ ಈ ಹತ್ಯೆಗೆ ಕಾರಣವಾಗಿದ್ದು ಈಗಾಗಲೇ ತಪ್ಪಿತಸ್ಥರು ಬಂಧಿತರಾಗಿದ್ದಾರೆ ಎಂಬುದು ಸಮಾಧಾನದ ವಿಷಯವಾಗಿದ್ದರೂ, ಈ ಘಟನೆಯು ಶಾಂತಿ, ಕಾನೂನು ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡಿದ ಪರಿಣಾಮ ಸಮಾಜದ ಮೇಲಾಗುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶುಕ್ರವಾರದಂದು ಸೋಲಾದಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ, ಕೊಪ್ಪಳ ಘಟಕದ ಪದಾಧಿಕಾರಿಗಳು ಲಿಖಿತ ದೂರು ಸಲ್ಲಿಸಿ ಮನವಿ ಮಾಡಿ ಕೊಂಡು ಒತ್ತಾಯಿಸಿದ್ದಾರೆ. ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ನೀಡಬೇಕು, ಸಮಾಜದಲ್ಲಿ ಯಾವುದೇ ಶಂಕೆ, ಗೊಂದಲ, ಅಥವಾ ಧರ್ಮೀಯ ವಿಷ ಪ್ರಚೋದನೆಯಾಗದಂತೆ ನಿಗಾ ಇಡಬೇಕು ಮತ್ತು ಭದ್ರತೆ ಹೆಚ್ಚಿಸಬೇಕು. ಶಾಲಾ, ಕಾಲೇಜು ಮತ್ತು ಯುವ ಸಮುದಾಯದಲ್ಲಿ ಶಾಂತಿ ಸಂದೇಶವನ್ನು ಹರಡುವ ಕಾರ್ಯ ಕೈಗೊಳ್ಳಬೇಕು.ಆರೋಪಿಗಳಲ್ಲಿ ಗಾಂಜಾ ಸೇವನೆ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಈ ಪ್ರಕರಣದಲ್ಲಿ ಯಾವುದೇ ಸಮುದಾಯವನ್ನು ಉದ್ದೇಶಿಸಿ ತಪ್ಪು ಪ್ರಚಾರ ನಡೆಯದಂತೆ ಕಾನೂನು ಕ್ರಮ ಕೈಗೊಳ್ಳಬೇಕು.ಈ ಘಟನೆಯು ಕೇವಲ ವೈಯಕ್ತಿಕ ಕಾರಣದಿಂದ ನಡೆದದ್ದಾಗಿದ್ದರೂ, ಸಮಾಜದಲ್ಲಿ ಅಶಾಂತಿ ಹರಡದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೋಲಿದಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಶಾಖೆ, ಕೊಪ್ಪಳ ಘಟಕದಸ್ಥಾನೀಯ ಅಧ್ಯಕ್ಷ, ಏಜಾಜ್ ಅಹಮದ್ ಶರೀಫ್ ರವರು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಭೇಟಿ ಮಾಡಿ ಮನವಿ ಪತ್ರ ಅರ್ಿಸಿ ಒತ್ತಾಯಿಸಿದ್ದಾರೆ, ಈ ಸಂದರ್ಭದಲ್ಲಿ ಅವರೊಂದಿಗೆ ಕಾರ್ಯದರ್ಶಿ ಮಹಮ್ಮದ್ ಯೂಸುಫ್, ಸದಸ್ಯರಾದ ಮೊಹಮ್ಮದ್ ಗೌಸ್ ಪಟೇಲ್ ಹಾಗೂ ರೆಹಮತ ಹುಸೇನ್ ಉಪಸ್ಥಿತರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 