ಯುವ ಜನರು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಪಿಎಸ್‌ಐ ಪರಶುರಾವ

ಯುವ ಜನರು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಪಿಎಸ್‌ಐ ಪರಶುರಾವ Young people should adopt life skills: PSI Parashurav

ಮುಂಡಗೋಡ, 17  : ಲೊಯೋಲ ವಿಕಾಸ ಕೇಂದ್ರ ಹಾಗೂ ಯುವರತ್ನ ತಾಲೂಕ ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಲೊಯೋಲ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಅಂತರಾಷ್ರೀಯ ಯುವ ದಿನಾಚರಣೆ ಅಂಗವಾಗಿ ಯುವಜನತೆಗೆ ಆಟೋಟ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.ಸದರಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಜಾಖಾನ್ ಮೋದಿನಖಾನ್ ಪಠಾಣ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷರು ಮುಂಡಗೋಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯುವಜನರು ಒಟ್ಟಾಗಿ ಕೆಲಸ ಮಾಡುವುದರಿಂದ ದೇಶದ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆ ನಿಟ್ಟಿನಲ್ಲಿ ಇಂದಿನ ಯುವಕರು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಕರೆನೀಡುತ್ತಾ ಆಟೋಟ ಚಟುವಟಿಕೆಗೆ ಚಾಲನೆ ನೀಡಿದರು.  

ಮುಂಡಗೋಡ ಪಿಎಸ್‌ಐ ಪರಶುರಾಮ ಮಿರ್ಜಿಗಿ ಅವರು ಮಾತನಾಡುತ್ತಾ ಲೊಯೋಲ ವಿಕಾಸ ಕೇಂದ್ರದ ಮತ್ತು ಯುವರತ್ನ ಒಕ್ಕೂಟದ ಸಮಾಜಸೇವಾ ಕಾರ್ಯವನ್ನು ಶ್ಲಾಘಿಸುತ್ತಾ ಸ್ವಾಮಿ ವಿವೇಕಾನಂದರು ನಮ್ಮ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ಆಧ್ಯಾತ್ಮಿಕತೆ, ಧಾರ್ಮಿಕತೆ ಹಾಗೂ ಯುವ ಸಬಲೀಕರಣದ ಮಹತ್ವವನ್ನು ಅರಿತು ನಾವು ಮುನ್ನಡೆಯಬೇಕಿದೆ ಯುವ ಜನರು ತಮ್ಮ ವೃತ್ತಿ ಕೌಶಲ್ಯ ಹಾಗೂ ಜೀವನ ಕೌಶಲ್ಯಗಳನ್ನು ಅಳವಡಿಸಿಕೊಂಡು ಗ್ರಾಮ, ತಾಲೂಕ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಏಳಿಗೆಯ ಬದಲಾವಣೆ ತರಬೇಕಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎಫ್ ಸಂಗಮೇಶ್ವರ ಜಿಲ್ಲಾಧ್ಯಕ್ಷರು, ಡಿಎಸ್‌ಎಸ್, ಅಂಬೇಡ್ಕರ್ ಧ್ವನಿ, ಹಾಗೂ ಎಲ್‌ಜಿಸಿ ಸದಸ್ಯರು ಯಲ್ಲಾಪುರ ವಿಧಾನ ಸಭಾ ಕ್ಷೇತ್ರ ಮುಂಡಗೋಡ ಅವರು ಮಾತನ್ನಾಡುತ್ತಾ ಯುವಕರು ಸಾರ್ವಜನಿಕ ಆಸ್ತಿಗಳು ಎಂದು ಪರಿವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಇದರಿಂದ ಹೊರಬಂದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆತ್ಮಗೌರವದೊಂದಿಗೆ ಗುರಿಯನ್ನು ಇಟ್ಟುಕೊಂಡು ಕಾನೂನಾತ್ಮಕ ತರಭೇತಿ ಪಡೆದು ತಮ್ಮ ಗುರಿಯತ್ತ ಸಾಗಬೇಕು ಎಂದರು.     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲೊಯೋಲ ವಿಕಾಸ ಕೇಂದ್ರ ನಿರ್ದೇಶಕರಾದ ಫಾಽಽ ಅನಿಲ್ ಡಿ’ಸೋಜ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಇಂದಿನ ಯುವಕರು ಒಳ್ಳೆಯ ಕಾರ್ಯಕ್ಕೆ ಒಟ್ಟಾಗಿ ಸೇರುವುದು ಕಡಿಮೆ ಆಗಿದೆ. ಯುವಕರು ಸಕಾರಾತ್ಮಕ ಹೊಸ ಬದಲಾವಣೆಗಾಗಿ ಹೊಸ ಹೊಸ ಕಲಿಕೆಯೊಂದಿಗೆ ಜೀವನ ಕೌಶಲ್ಯ, ವೃತ್ತಿ ಕೌಶಲ್ಯ ನಾಯಕತ್ವ, ಭಾಗವಹಿಸುವಿಕೆ, ಸಮಸ್ಯೆಗಳನ್ನು ಎದುರಿಸುವಿಕೆ, ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಿಕೆಯಂತಹ ತರಭೇತಿಗಳನ್ನು ಪಡೆದು ತಮ್ಮ ವೈಯಕ್ತಿಕ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಆ ಕೆಲಸವನ್ನು ಈಗಾಗಲೆ ನಮ್ಮ ಯುವರತ್ನ ಯುವ ಒಕ್ಕೂಟ ಮುಂಡಗೋಡ ತಾಲೂಕಿನಾದ್ಯಾಂತ ಮಾಡುತ್ತಿದೆ ಅದನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಲೊಯೋಲ ವಿಕಾಸ ಕೇಂದ್ರವು ತಮಗೆ ಮಾರ್ಗದರ್ಶನ ಸಲಹೆ ಸೂಚನೆ ತರಭೇತಿ ನೀಡಲು ಸದಾ ಸಿದ್ದವಿರುತ್ತದೆ ಎಂದು ಫಾದರ್ ಅನಿಲ ಡಿಸೋಜಾ ಅವರು ತಿಳಿಸಿದರು. 

ಯುವಜನರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. 2025 ಸಾಲಿನಲ್ಲಿ 6 ತಿಂಗಳ ಕಂಪ್ಯೂಟರ ತರಭೇತಿ ಮುಗಿಸಿದ 19 ಹಾಗೂ ಹೊಲಿಗೆ ತರಭೇತಿ ಮುಗಿಸಿದ 12 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇಂದಿನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರೋಟರಿ ಕ್ಲಬ್ ಕಾರ್ಯದರ್ಶಿಗಳಾದ ಜಾನಿ ಪೀಲೀಫ್, ಜನಸ್ಪೂರ್ತಿ ಒಕ್ಕೂಟದ ಅಧ್ಯಕ್ಷರಾದ ಸರೋಜಾ ಚವ್ಹಾಣ, ಮುಂಡಗೋಡನ ಮಹಿಳಾ ಉದ್ಯಮಿಗಳಾದ ಮಹಾಲಕ್ಷ್ಮೀ ಬುಲಗುಡಿ ಜ್ಯೋತಿ ಸಮಾಜ ಸೇವಾ ಸಂಸ್ಥೆಯ ಸಿಽಽ ಸೋನಿಯಾ ಡಿ’ಸೋಜ ಹಾಗೂ ಯುವರತ್ನ ಒಕ್ಕೂಟದ ಅಧ್ಯಕ್ಷರಾದ ತನ್ವೀರ್ ಮಿರ್ಜಾಜನಕರ ಹಾಗೂ ಸದಸ್ಯರು,  65 ಯುವಜನರು ಸೇರಿದಂತೆ  ಎಲ್‌ವಿಕೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆ ಶಕುಂತಲಾ ಕುಂಬಾರ ನಿರೂಪಿಸಿದರು. ಅಮೃತಾ ಗೌಳಿ ಸ್ವಾಗತಿಸಿದರು. ದೀಪಾ ಮೂಡಿ ವಂದಿಸಿದರು. ವರ್ಷಾ ಚವ್ಹಾಣ ಸಂವಿಧಾನ ಪ್ರಸ್ತಾವನೆ ಮಂಡಿಸಿದರು.