ಸಿಡಿಲು ಬಡಿದು ಯುವಕ ಸಾವು

ಸಿಡಿಲು ಬಡಿದು ಯುವಕ ಸಾವು  Young man dies after being struck by lightning

ಹೂವಿನಹಡಗಲಿ 21: ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿ,ಇಬ್ಬರಿಗೆ ಗಾಯಗೊಂಡ ಘಟನೆ  ತಾಲೂಕಿನ ಕಂದಗಲ್ಲು ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಭವಿಸಿದೆ.ಪ್ರಶಾಂತ (21) ಮೃತ ಯುವಕ, ಮೃತ ಯುವಕ ಹಾಗೂ ಆತನ ಸ್ನೇಹಿತರಾದ ಎಂ.ಸಂತೋಷ್ , ಜಿ.ಗೊಣೇಶ್, ಯುಗಾದಿಯ ಅಮವಾಸ್ಯೆ ಯಂದು ಜಮೀನಿನಲ್ಲಿದ್ದ ಕುರಿಗಳಿಗೆ ಪೂಜೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ವೇಳೆ, ಗುಡುಗು ಸಿಡಿಲಿನ ಮಳೆಗೆ ಸಿಡಿಲು ಬಡಿದು ಪ್ರಶಾಂತ ಸ್ಥಳದಲ್ಲೇ ಮೃತ ಪಟ್ಟಿದ್ದರು. ಸಿಡಿಲಿನ ಆರ್ಭಟಕ್ಕೆ  ಎಂ.ಸಂತೋಷ್ ಮತ್ತು ಗೊಣೇಶರನ್ನು ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಗದಗದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯುವಕನನ್ನು ಕಳೆದು ಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಮೃತ ಯುವಕನಿಗೆ ತಂದೆ, ತಾಯಿ, ತಮ್ಮ, ತಂಗಿ ಇದ್ದಾರೆ. ಯುವಕ ಮೃತಪಟ್ಟ ಹಿನ್ನಲೆಯಲ್ಲಿ ಯುಗಾದಿ ಸಂದರ್ಭದಲ್ಲಿ ನಡೆಯುತ್ತಿದ್ದ, ರಣದಮ್ಮ ದೇವಿಯ ಜಾತ್ರೆ ಯನ್ನು ಸ್ಥಗಿತಗೊಳಿಸಲಾಯಿತು. ಸ್ಥಳಕ್ಕೆ ಕಂದಾಯ ನೀರೀಕ್ಷಕ ಎಂ.ಮನೋಹರ, ಗ್ರಾಮ ಆಡಳಿತಾಧಿಕಾರಿ ಬೇಟಿ ನೀಡಿ ಜಿಲಾಡಳಿತಕೆ ಮಾಹಿತಿ ನೀಡಿದಾರೆ.