ಅ.25ರಂದು ಯುವ ಸಾಹಿತಿ - ಸಾಹಿತ್ಯಾನುಸಂಧಾನ ಕಾರ್ಯಕ್ರಮ

ಅ.25ರಂದು ಯುವ ಸಾಹಿತಿ - ಸಾಹಿತ್ಯಾನುಸಂಧಾನ ಕಾರ್ಯಕ್ರಮ Young Writers - Literary Dialogue Program on October 25th

ಅ.25ರಂದು ಯುವ ಸಾಹಿತಿ - ಸಾಹಿತ್ಯಾನುಸಂಧಾನ ಕಾರ್ಯಕ್ರಮ 

ಬಾಗಲಕೋಟೆ 24: ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಅಕಾಡೆಮಿ ನವದೆಹಲಿ ಹಾಗೂ ಬಾಗಲಕೋಟೆ ಬಸವೇಶ್ವರ ಕಲಾ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಅ. 25 ರಂದು ಮ. 2:30ಕ್ಕೆ ಮಹಾವಿದ್ಯಾಲಯದ ಸಭಾಭವನದಲ್ಲಿ ಯುವ ಸಾಹಿತಿ - ಸಾಹಿತ್ಯಾನುಸಂಧಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿಗಳಾದ, ಹುಬ್ಬಳ್ಳಿಯ ರಂಗನಾಥ ಕಂಟನಕುಂಟೆ, ಕವಯಿತ್ರಿ ಮತ್ತು ರಂಗಭೂಮಿ ಕಲಾವಿದರಾದ ಬೆಂಗಳೂರಿನ ಜಯಲಕ್ಷ್ಮೀ ಪಾಟೀಲ ಇರಲಿದ್ದು. ನಮ್ಮ ಸೃಜನಶೀಲ ಬರಹದ: ದೃಷ್ಠಿ - ಸೃಷ್ಠಿ ವಿಷಯದ ಕುರಿತು  ಕಥೆಗಾರರಾದ ವಿಜಯಪುರದ ಅನಿಲ್ ಗುನ್ನಾಪೂರ ಹಾಗೂ ಕಥೆಗಾರ್ತಿ ಬಾಗಲಕೋಟೆಯ ಮಲ್ಲಮ್ಮ ಜೊಂಡಿ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಸ್‌.ಆರ್‌.ಮೂಗನೂರಮಠ ವಹಿಸಲಿದ್ದು ನಗರದ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿಯ ಸದಸ್ಯರಾದ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.