ಯೋಗಿ ಕಾಲಿಗೆರಗಿದ ಪೊಲೀಸ್ ಅಧಿಕಾರಿ
ಗೋರಖ್ಪುರ, ಉತ್ತರ ಪ್ರದೇಶ 28: ಇಲ್ಲಿನ ಗೋರಖನಾಥ ದೇವಸ್ಥಾನದಲ್ಲಿ ಗುರು ಪೂಣರ್ಿಮೆಯ ದಿನದಂದು ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯೋರ್ವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀವರ್ಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಂದ ಹಾಗೆ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ಮಠದ ಪೀಠಾಧೀಶ್ವರರೂ ಮಹಾಂತರೂ (ಮುಖ್ಯ ಅರ್ಚಕ) ಆಗಿದ್ದಾರೆ.
ವೈರಲ್ ಆಗಿರುವ ಫೋಟೋದಲ್ಲಿ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಅವರು ಆದಿತ್ಯನಾಥ್ ಅವರ ಕಾಲಿಗೆರಗಿ ಕೈಮುಗಿದು ಆಶೀವರ್ಾದ ಪಡೆಯುತ್ತಿರುವುದು ಕಂಡು ಬರುತ್ತದೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಪ್ರವೀಣ್ ಸಿಂಗ್ ಅವರ ನಿಲುವನ್ನು ಪ್ರಶ್ನಿಸಿ ಸ್ಪಷ್ಟೀಕರಣವನ್ನು ಕೇಳಿದೆ.
ಇದಕ್ಕೆ ಉತ್ತರವಾಗಿ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್, "ನನ್ನನ್ನು ಭದ್ರತಾ ಕರ್ತವ್ಯದ ಮೇಲೆ ಗೋರಖನಾಥ ದೇವಾಲಯಕ್ಕೆ ನಿಯೋಜಿಸಲಾಗಿತ್ತು. ನನ್ನ ಕರ್ತವ್ಯ ಮುಗಿಸಿದ ಬಳಿಕ ನಾನು ಪೊಲೀಸ್ ಬೆಲ್ಟ್, ಕ್ಯಾಪ್ ಮತ್ತು ಇತರ ಚಿಹ್ನೆಗಳನ್ನು ತೆಗೆದಿರಿಸಿ ತಲೆಗೆ ಟವಲ್ ಸುತ್ತಿ ಶ್ರದ್ಧಾಭಕ್ತಿಯಿಂದ ಪೀಠಾಧೀಶ್ವರ, ಮಹಾಂತ, ಯೋಗಿ ಆದಿತ್ಯನಾಥರ ಆಶೀವರ್ಾದ ಪಡೆದಿದ್ದೇನೆ' ಎಂದು
ಹೇಳಿದ್ದಾರೆ.
"ನನ್ನ ಶಟರ್್ ಬೆವರಿನಿಂದ ಒದ್ದೆಯಾಗಿತ್ತು; ನಾನು ನನ್ನ ಕರ್ತವ್ಯವನ್ನು ನಿರ್ಲಕ್ಷಿಸಿಲ್ಲ; ಮಹಾಂತ ಯೋಗಿ ಅವರು ಎರಡು ಸಂದರ್ಭಗಳಲ್ಲಿ ದೇವಸ್ಥಾನದಲ್ಲಿ ಗುರು ಪೀಠದಲ್ಲಿ ಕುಳಿತುಕೊಳ್ಳುವುದು ರೂಢಿ - ಒಮ್ಮೆ ನವರಾತ್ರಿ ಸಂದರ್ಭದಲ್ಲಿ, ಇನ್ನೊಮ್ಮೆ ಗುರು ಪೂಣರ್ಿಮೆಯ ಸಂದರ್ಭದಲ್ಲಿ ; ನಾನು ಯಾವತ್ತೂ ದೇಶಕ್ಕೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಲು ಈ ದೇವಸ್ಥಾನದಲ್ಲಿ ಪ್ರಾಥರ್ಿಸುತ್ತೇನೆ. ಬಾಬಾ ಗೋರಖನಾಥ್ ಮೇಲಿನ ಶ್ರದ್ಧಾಭಕ್ತಿ ಭಾವದಿಂದ ನಾನು ದೇವಸ್ಥಾನಕ್ಕೆ ಹೋಗಿ ಗುರುಗಳ ಆಶೀವರ್ಾದ ಪಡೆದಿದ್ದೇನೆ ಹೊರತು ಬೇರೇನೂ ಅಲ್ಲ ಎಂದು ಸಿಂಗ್ ವಿವರಿಸಿದ್ದಾರೆ.
ಸಿಂಗ್ ಅವರು ಗೋರಖ್ಪುರದಲ್ಲಿ ಗೋರಖನಾಥಕ್ಕೆ ಸರ್ಕಲ್ ಆಫೀಸರ್ ಆಗಿ ನಿಯೋಜಿಸಲಾಗಿದೆ. ಪೌರ ರಕ್ಷಣೆಯ ಐಜಿ ಆಗಿರುವ ಅಮಿತಾಭ್ ಠಾಕೂರ್ (ಐಪಿಎಸ್) ಅವರು "ಈ ವಿಷಯದಲ್ಲಿ ಪೊಲೀಸ್ ಸೇವಾ ನಿಯಮ ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ಈ ಸನ್ನಿವೇಶವನ್ನು ಹೇಗೆ ಬೇಕಾದರೂ ಅಥರ್ೆಸಬಹುದಾಗಿದೆ. ಆದರೆ ಪೊಲೀಸ್ ಅಧಿಕಾರಿ ತನ್ನ ಸಮವಸ್ತ್ರದ ಘನತೆಯನ್ನು ಎತ್ತಿ ಹಿಡಿಯುವುದು ಅಗತ್ಯ ಎಂದು ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 