ಯೋಗ ದೇಹಕ್ಕೆ ಹೊಸ ಉಲ್ಲಾಸ ನೀಡುತ್ತದೆ: ಬಿರಾದಾರ
ಲೋಕದರ್ಶನವರದಿ
ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಕ್ರೀಡೆ- ಯೋಗವು ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಎಂದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಎ.ಓ.ಬಿರಾದಾರ ಹೇಳಿದರು.
ನಗರದ ವಿಜಯ ಮಹಾಂತೇಶ ಮಾದರಿಯ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಕರ್ಾರದ ಆದೇಶದಂತೆ ಡಿ.16 ರಿಂದ 21 ವರೆಗೆ ಆರು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಫಿಟ್ಇಂಡಿಯಾ ( ಸದೃಢ ಭಾರತ) ಶಾಲೆ ಸಪ್ತಾಹ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳುವದರೊಂದಿಗೆ ಎಲ್ಲಾ ವಿದ್ಯಾಥರ್ಿಗಳು ದೈಹಿಕ ಮಾನಸಿಕವಾಗಿ ಸದೃಢಗೊಳಿಸುವುದಾಗಿದೆ ಈ ಮಹತ್ವಾಕಾಂಕ್ಷೆಯ ಫಿಟ್ಇಂಡಿಯಾ ಅಭಿಯಾನವನ್ನು ನಾವೆಲ್ಲರು ಸೇರಿ ಯಶಸ್ವಿಗೊಳಿಸಬೇಕೆಂದರು.ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ವಿ.ಜಿ ಗೌಡರ ಮಾತನಾಡಿ ವಿದ್ಯಾಥರ್ಿಗಳು ಉತ್ತಮವಾದ ಅಭ್ಯಾಸದೊಂದಿಗೆ ಕ್ರೀಡೆ-ಯೋಗದಲ್ಲಿ ಭಾಗವಹಿಸುವದರೊಂದಿಗೆ ಒಳ್ಳೆಯ ಆರೋಗ್ಯ ನಮ್ಮನ್ನು ಸದೃಢಗೊಳಿಸುತ್ತದೆೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಸವರಾಜ ಕಮ್ಮಾರ, ಮಹಾಂತೇಶ ತೋಪಲಕಟ್ಟಿ, ದೈಹಿಕ ಶಿಕ್ಷಕ ಮಹಾಂತೇಶ ಸಾಲಿಮಠ, ಶಿಕ್ಷಕರಾದ ಪಿ.ಎಂ.ಅಕ್ಕಿ, ಎಂ.ಐ.ಬಡ್ಡಿ, ಮಹಾಂತೇಶ ಮಾವಿನಕಾಯಿ ಇತರರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 