ಯೋಗ ಮನುಷ್ಯನ ಜೀವಕ್ಕೆ ಸಂಜೀವಿನಿ ಇದ್ದ ಹಾಗೆ: ಶಾಸಕ ಐಹೊಳೆ
Yoga is like Sanjeevini for human life: MLA Aihole
ರಾಯಬಾಗ, 22 : ಯೋಗ ಮನುಷ್ಯನ ಜೀವಕ್ಕೆ ಸಂಜೀವಿನಿ ಇದ್ದ ಹಾಗೆ, ಇಂದು ಭಾರತ ಸೇರಿದಂತೆ ಹಲವಾರು ದೇಶಗಳು ಯೋಗವನ್ನು ಅಳವಡಿಸಿಕೊಂಡಿವೆ, ಇದರ ಶ್ರೇಯಸ್ಸು ನಮ್ಮ ದೇಶದ ಹಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ಪಟ್ಟಣದ ಲಕ್ಷ್ಮಿಸೇನ್ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಸರ್ಕಾರಿ ಇಲಾಖೆ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯ ಯೋಗ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂದರು.
ಪ.ಪಂ ಅಧ್ಯಕ್ಷ ಅಶೋಕ ಅಂಗಡಿ, ತಾ.ಪಂ ಇಒ ಡಾ. ಸುರೇಶ ಕದ್ದು, ಬಿಇಒ ಬಸವರಾಜಪ್ಪ ಆರ್, ಬಿಜೆಪಿ ರಾಯಬಾಗಮಂಡಲ ಅಧ್ಯಕ್ಷ ಪೃಥ್ವಿರಾಜ್ ಜಾಧವ, ವಸಂತ ಹೊಸಮನಿ, ಸಂಜಯ ಕುಸ್ತಿಗಾರ, ಜಯಾನಂದ ಹಿರೇಮಠ, ಡಾ.ಅಜೀತ ನಾಯಿಕ, ಡಾ.ವಿನಾಯಕ ಕುಲಕರ್ಣಿ, ಸದಾನಂದ ಹಳಿಂಗಳಿ, ಬಸವರಾಜ ಡೋಣವಾಡೆ, ಮಹೇಶ ಕರಮಡಿ, ವಿ.ಬಿ.ಚಿಕಬಿರೆ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 