ಜ್ಞಾಪಕ ಶಕ್ತಿ ಹೆಚ್ಚಳಕ್ಕೆ ಯೋಗ ಅಗತ್ಯ: ಏಕಾಂತ ಮುದಿಗೌಡರ
Yoga is essential to increase memory power: Ekantha Mudigowda
ನ್ಯೂ ಪಬ್ಲಿಕ್ ಶಾಲೆಯಲ್ಲಿ ಯೋಗ ದಿನಾಚರಣೆ ವಿದ್ಯಾರ್ಥಿಗಳ ಜ್ಞಾನಾರ್ಜನೆ
ರಾಣೇಬೆನ್ನೂರು 1: ಇಲ್ಲಿನ ಮಾರುತಿ ನಗರದ ಎರೇಕುಪ್ಪಿ ರಸ್ತೆಯ, ನ್ಯೂ ಪಬ್ಲಿಕ್ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಶಾಲೆಯ 400ಕ್ಕೂ ಹೆಚ್ಚು ಮಕ್ಕಳಿಂದ, ಸಾಮೂಹಿಕವಾಗಿ ಯೋಗ, ಧ್ಯಾನ, ಮತ್ತು ಪ್ರಾಣಾಯಾಮದೊಂದಿಗೆ ಆಯೋಜಿಸಲಾಗಿತ್ತು.
ಆಕರ್ಷಕವಾಗಿ, ಆಧ್ಯಾತ್ಮಿಕ ರೂಪದಲ್ಲಿ ನಡೆದ "ಯೋಗ" ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ, ಸಂಸ್ಥೆಯ ಅಧ್ಯಕ್ಷ, ನೋಟರಿ ಏಕಾಂತ್ ಮುದಿಗೌಡರ ಅವರು ಮಕ್ಕಳ ಭವಿಷ್ಯ ಸುಂದರವಾಗಿ ಮತ್ತು ಆಕರ್ಷಕವಾಗಿ ಸಾಗಬೇಕಾದರೆ, ತಮ್ಮ ಶಿಕ್ಷಣದ ಜೊತೆ, ಜೊತೆಗೆ ನಿತ್ಯವೂ ಕೆಲ ಕ್ಷಣ ಯೋಗ ಮತ್ತು ಪ್ರಾಣಾಯಾಮ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಿದೆ ಎಂದರು. ಯೋಗದಿಂದ ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುವುದು ಅಲ್ಲದೆ ಜ್ಞಾನಾರ್ಜನೆಗೆ ಜ್ಞಾಪಕ ಶಕ್ತಿ ಹೆಚ್ಚಳವಾಗುವುದು ಎಂದು ವಿಶ್ಲೇಷಿಸಿ ಮಾತನಾಡಿದ ಅವರು, ಸುಧೀರ್ಘ ಜೀವನದ ಬದುಕಿಗೆ, ಇತಿಹಾಸದ ನಮ್ಮ ಋಷಿ ಮುನಿಗಳು ನೂರಾರು ವರ್ಷಗಳ ಕಾಲ ಬದುಕಿ, ಬಾಳಿ ಇಂದಿಗೂ ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು. ನಿವೃತ್ತ ಉಪನ್ಯಾಸಕಿ ಯಶೋದಮ್ಮ ಹೆಚ್. ಅವರು, ವಿದ್ಯಾರ್ಥಿಗಳ ಬದುಕಿಗೆ ಮತ್ತು ಸಾರ್ಥಕತೆಗೆ ಯೋಗದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸೌಮ್ಯಶ್ರೀ ಕೆ.ಜೆ, ದಿನೇಶ್ ಹೆಚ್.ಆರ್., ಪ್ರಧಾನ ಗುರುಮಾತೆ ವಂದನಾ ಬಾನಾವಳಿಕರ, ಸಹ ಶಿಕ್ಷಕರಾದ ಸವಿತಾ ಮಡಿವಾಳರ, ಮಂಜುಳಾ ಬಣಕಾರ, ಗಾಯತ್ರಿ ಭರತ, ಶ್ರುತಿ, ಸಂಗೀತಾ ಕುಲಕರ್ಣಿ,ಲೀನಾ, ನಾಗರತ್ನ ಹುಲ್ಲತ್ತಿ, ರೂಪ ಸಿರಿಗೆರ, ಶೋಭಾ ಪಾಟೀಲ, ವೀಣಾ ಪುರಾಣಿಕ, ಪ್ರವೀಣ ಮಡಿವಾಳರ, ಚಂದ್ರಶೇಖರ ದೊಡ್ಲಿ ಸೇರಿದಂತೆ ಮತ್ತಿತರ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 