ಯೋಗ ಪುರಾತನ ಕಾಲದ ಅಭ್ಯಾಸವಾಗಿದೆ : ಬಿ.ಬಿ ಗಡ್ಡದ

ಯೋಗ ಪುರಾತನ ಕಾಲದ ಅಭ್ಯಾಸವಾಗಿದೆ : ಬಿ.ಬಿ ಗಡ್ಡದ Yoga is an ancient practice: B.B. Gadda

 ಲೋಕದರ್ಶನ ವರದಿ  

ಇಂಡಿ 21 : ತಾಲೂಕಿನ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಸೋಮೇಶ್ವರ ಶಿಕ್ಷಣ ಸಂಸ್ಥೆ ಹೊರ್ತಿ  ಶಾಲೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ  ಬಿಬಿ ಗಡ್ಡದ ಅವರು ಮಾತನಾಡಿ ಜೂನ್ 21 ರಂದು ವಿಶ್ವದ ಎಲ್ಲೆಡೆ ವಿಶ್ವಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತದೆ.

ಅದರಂತೆ ನಮ್ಮ ಶಾಲೆಯು ಕೂಡಾ ವಿಶ್ವ ಯೋಗ ದಿನಾಚಾರಣೆಯನ್ನು ಆಚರಣೆ ಮಾಡಲಾಗುತ್ತದೆ.ಯೋಗವು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಯೋಗವು ದೇಹ ಮತ್ತು ಮನಸ್ಸನ್ನು ಒಟ್ಟಿಗೆ ತರುತ್ತದೆ ಮತ್ತು ಮೂರು ಮುಖ್ಯ ಅಂಶಗಳ ಮೇಲೆ ನಿರ್ಮಿಸಲಾಗಿದೆ. ಚಲನೆ, ಉಸಿರಾಟ ಮತ್ತು ಧ್ಯಾನ. ಯೋಗವು ಸುಧಾರಿತ ಭಂಗಿ, ನಮ್ಯತೆ, ಶಕ್ತಿ, ಸಮತೋಲನ ಮತ್ತು ದೇಹದ ಅರಿವು ಸೇರಿದಂತೆ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.  

ಯೋಗದಲ್ಲಿ ಹಲವಾರು ವಿಧಗಳಿವೆ, ಆದರೆ ಪ್ರತಿಯೊಂದೂ ಮೂಲಭೂತವಾಗಿ ಉಸಿರಾಟದ ಅರಿವಿನೊಂದಿಗೆ ಅಭ್ಯಾಸ ಮಾಡುವ ರಚನಾತ್ಮಕ ಭಂಗಿಗಳನ್ನು ಅವಲಂಬಿಸಿದೆ ಎಂದು ಹೇಳಿದರು.ಈ ಕಾರ್ಯಕ್ರಮದ ಮುಖ್ಯ  ಅಥಿತಿಗಳಾಗಿ ಆಗಮಿಸಿದ ಅಜೀತ ರಾಠೋಡ (ಯೋಗ ತರಬೇತುದಾರರು) ಅವರು ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ಹೇಳಿಕೊಟ್ಟ ಮಾತನಾಡಿದ ಅವರು ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ.ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ.  

ಯೋಗವು ಬದುಕನ್ನು ಬದಲಿಸುವ ಮತ್ತು ಆತ್ಮಸಾಕ್ಷಿಯ ಸೃಷ್ಟಿ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ​‍್ಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಯೋಗವು ವ್ಯಾಯಮ ಮಾತ್ರವಲ್ಲದೇ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ.

ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪ್ರೊ. ಎ ಎಮ್ ಶಿರೂರ  ಡಿ. ಎಲ್ ಸಿಂಧೆ , ಸಿ.ಎಚ್ ಕೋಳಿ ಎಸ್ ಎಮ್ ಪಾಟೀಲ್ ಸೇರಿದಂತೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.