ಯೋಗದಿಂದ ಆರೋಗ್ಯ ವೃದ್ಧಿ : ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್‌

ಯೋಗದಿಂದ ಆರೋಗ್ಯ ವೃದ್ಧಿ : ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್‌ Yoga improves health: President Kodihalli Kotresh

ಲೋಕದರ್ಶನ ವರದಿ 

ಹೂವಿನ ಹಡಗಲಿ 21:  ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಜಿ ಬಿ ಆರ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಶಾಲಾ ಶಿಕ್ಷಣ ಇಲಾಖೆ ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್‌ ಜಿ ಬಿ ಆರ್ ಕಾಲೇಜು ಸಹಯೋಗದಲ್ಲಿ 12 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ವಿಶ್ವದ ಅನೇಕ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಿಂದ ದೈಹಿಕ ಸಮತೋಲನ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಉತ್ತಮ ಶಾರೀರಿಕ ದೃಢತೆಆರೋಗ್ಯದ ಹಿತ ಕಾಪಾಡಲು ನಿತ್ಯ ಯೋಗಾಭ್ಯಾಸ ಮಾಡಿರಿ ಎಂದು ತಿಳಿಸಿದರು.

ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ಯೋಗ ಸಾಧಕರಾದ ಲೋಕೇಶ್ ತಿಪ್ಪಾಪುರ ನಟರಾಜ್ ಬಾದಾಮಿ ಈ ಟಿ ಹನುಮೇಶ್ ಡಾ ಆನಂದ್ ಶಿವಮೂರ್ತೆಪ್ಪ , ಎ ಗುರುಸಿದ್ದಪ್ಪ, ಗಂಗಪ್ಪ ಇತರರು ಸಾಮೂಹಿಕ ಯೋಗಾಭ್ಯಾಸ ಪ್ರದರ್ಶನದ ಮೂಲಕ ಶಾಲಾ ಕಾಲೇಜು ಮಕ್ಕಳಿಗೆ ಸಾರ್ವಜನಿಕರಿಗೆ ತರಬೇತಿ ನೀಡಿದರು. ತಾಲೂಕು ದೈಹಿಕ ಪರೀವೀಕ್ಷಕ ರಫಿ ಅಹಮದ್ ಖವಾಸ್ ಜಿ ಬಿ ಆರ್ ಕಾಲೇಜು ಪ್ರಾಂಶುಪಾಲ ಅಮರೇಗೌಡ ಪಾಟೀಲ್ ಪಟ್ಟಣ ಸಿ ಆರ್ ಪಿ ವೀರೇಶ್ ಬಗಲಿ, ಸುರೇಶ ಅಂಗಡಿ,ಮಹಮದ್ ರಫಿ ಶ್ರೀಕಾಂತ್ ,ಹೇಮಾವತಿ ಜೈನ್ ಹೆಚ್ ಕಾಂತೇಶ್ ಬಸವರಾಜ ಕೆದೈಹಿಕ ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಯಂಕಾನಾಯ್ಕ್‌, ಲಲಿತಾ ನಿಂಗಪ್ಪ, ಮಂಜುನಾಥ ಇತರರು ಉಪಸ್ಥಿತರಿದ್ದರು. ಪಟ್ಟಣದ  ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ವಿವಿಧ ಯೋಗಾಸನ ಪ್ರದರ್ಶಿಸಿದರು. ಕೌಶಲ್ಯಬಾಯಿ ದ್ವಾರಕೀಶ್ ರೆಡ್ಡಿ ಎಸ್ ನಿರ್ವಹಿಸಿದರು.