ಸುಗಮ ಬದುಕಿಗೆ ಯೋಗ ಪರಿಸರ ಸಹಕಾರಿ : ಸಂಗನಬಸವ ಶ್ರೀಗಳು
Yoga environment helps in a smooth life: Sangana Basava Sri
ಶಿಗ್ಗಾವಿ 22: ಮಾನವನ ಸುಗಮ ಬದುಕಿಗೆ ಯೋಗ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರ ಬಹಳಷ್ಟು ಸಹಕಾರಿಯಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಜಿ ಹೇಳಿದರು.
ಪಟ್ಟಣದ ಪೀನೀಕ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನುಷ್ಯನ ಆರೋಗ್ಯ ಕ್ಷೀಣಿಸುತ್ತಿದೆ ಬದುಕನ್ನು ಸಾಗಿಸುವ ರೀತಿ ಬದಲಾಗುತ್ತಿದೆ, ಆದ್ದರಿಂದ ಪರಿಸರ ಖಾಳಜಿ ಜೊತೆಗೆ ಯೋಗದ ಮಹತ್ವ ಅರಿಯಬೇಕಿದೆ, ಧರ್ಮದ ತಳಹದಿ ಮರೆತ್ತಿದ್ದೇವೆ, ಕರ್ಮಯೋಗಗಳ ಮಹತ್ವ ತಿಳಿದು ಬದುಕನ್ನ ಆರೋಗ್ಯಯುತವಾಗಿ ಕಳೆಯಬೇಕಿದೆ, ವಿದ್ಯೆಯನ್ನ ಎಷ್ಟೇ ಕಲಿತರೂ ಬುದ್ದಿ ನಿಖರವಾಗಿ, ನಿಷ್ಟುರವಾಗಿ ಇಟ್ಟುಕೊಳ್ಳಬೇಕಿದೆ, ಮಂತ್ರಗಳ ಪಠಣ, ಯೋಗಾಬ್ಯಾಸ ಮಾಡುವುದರಿಂದ ಮನುಷ್ಯನ ದೇಹದ ಸಮತೋಲನಕ್ಕೆ ಸಹಕಾರಿಯಾಗುತ್ತದೆ ಎಂದರು. ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ ಭಾರತ ದೇಶ ಸಂಪದ್ಭರಿತ ದೇಶವಾಗಿದೆ, ಪರಿಸರವನ್ನ ನಾವು ಯಾವ ರೀತಿ ನೋಡಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮನ್ನ ಪರಿಸರ ಖಾಳಜಿ ಮಾಡುತ್ತದೆ ಎಂದರು,ಯೋಗದ ಮಹತ್ವವನ್ನ ಪ್ರಧಾನಿ ಮೋದಿಯವರು ಇಡಿ ವಿಶ್ವಕ್ಕೆ ತಿಳಿಸಿದರು. ಯೋಗದ ಮಹತ್ವ ಇಂದಿನ ಯುವ ಸಮೂಹಕ್ಕೆ ಸಹಕಾರಿಯಾಗಿದ್ದು ಆರೋಗ್ಯಯುತ ಜೀವನಕ್ಕೆ ನಾಂದಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿವಯೋಗಿ ಹಿರೇಮಠ ಸೇರಿದಂತೆಶಾಲೆಯ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಯೋಗ ದಿನಾಚರಣೆ ಕುರಿತು ಅಭಿಪ್ರಾಗಳನ್ನು ಹಂಚಿಕೊಂಡರು.
ಪಿನಿಕ್ಸ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ, ಕಾರ್ಯದರ್ಶಿ ಡಾ. ರಾಣಿ ಎಂ ತಿರ್ಲಾಪೂರ, ಯೋಗ ಶಿಕ್ಷಕಿರಾದ ಶೋಭಾ ಅಳಗವಾಡಿ,ಗೋಧಾವರಿ ಭಟ್, ಉಪ ಪ್ರಾಚಾರ್ಯ ಗಿರಿಧರ ಯಲ್ಲಮ್ಮ ಸೇರಿದಂತೆ ಶಾಲೆಯ ಉಳಿದ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 