ಸಕ್ಕರೆ ಕಾಯಿಲೆ, ಬೊಜ್ಜು ನಿಯಂತ್ರಣಕ್ಕೆ ಯೋಗ ಶಿಬಿರ

ಸಕ್ಕರೆ ಕಾಯಿಲೆ, ಬೊಜ್ಜು ನಿಯಂತ್ರಣಕ್ಕೆ ಯೋಗ ಶಿಬಿರ Yoga camp to control diabetes and obesity

ಸಕ್ಕರೆ ಕಾಯಿಲೆ, ಬೊಜ್ಜು ನಿಯಂತ್ರಣಕ್ಕೆ ಯೋಗ ಶಿಬಿರ  

ಹೂವಿನಹಡಗಲಿ  13: ಪಟ್ಟಣದಲ್ಲಿ ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್‌, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಿಸಿಐ ರಾಯಲ್ ಹಾಗೂ ವಿವಿಧ ವ್ಯಾಪಾರಸ್ಥರ ಸಂಘಗಳ ಸಹಯೋಗದಲ್ಲಿ ಸಕ್ಕರೆ ಕಾಯಿಲೆ ಮತ್ತು ಬೊಜ್ಜು ನಿಯಂತ್ರಣ ಕುರಿತು ಏಳು ದಿನಗಳ ವಿಶೇಷ ಯೋಗ ತರಬೇತಿ ಶಿಬಿರ ನಡೆಯಿತು.  

ಯೋಗಋಷಿ ಸ್ವಾಮಿ ರಾಮದೇವ್ ಮಹಾರಾಜರ ಆಶೀರ್ವಾದ ಹಾಗೂ ಅಂತರರಾಷ್ಟ್ರೀಯ ಯೋಗ ಗುರು ಭವರ್ಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಸೆ. 7ರಂದು ಶಿಬಿರಕ್ಕೆ ಚಾಲನೆ ನೀಡಲಾಯಿತು. ಗವಿಮಠದ ಡಾ. ಹಿರಿಶಾಂತ ವೀರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪತಂಜಲಿ ಯೋಗ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಡಾ. ಲಕ್ಷ್ಮಣ್ ಡಿ. ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಜಿಬಿಆರ್ ಕಾಲೇಜಿನ ಪ್ರಾಂಶುಪಾಲ ಎಸ್‌.ಎಸ್‌. ಪಾಟೀಲ್ ಶಿಬಿರ ಉದ್ಘಾಟಿಸಿದರು. ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಹಳ್ಳಿಗುಡಿ ಉಪಸ್ಥಿತರಿದ್ದರು.  

ಪತಂಜಲಿ ಕಾರ್ಯಕಾರಿಣಿಯ ರಾಜ್ಯ ಸದಸ್ಯ ಬಾಲಚಂದ್ರ ಶರ್ಮಾ, ಸತ್ಯಪ್ಪ ಹಾಗೂ ಅನಂತ್ ಜೋಶಿ ಯೋಗ ತರಬೇತಿ ನೀಡಿದರು. ವಿವಿಧ ದಿನಗಳಲ್ಲಿ ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಸಿರಸಿ, ವಿಜಯಪುರ ಹಾಗೂ ಬಸವಪೇಟೆಯಿಂದ ಆಗಮಿಸಿದ್ದ ಯೋಗ ತಜ್ಞರು ಯೋಗಾಸನ, ಸೂಕ್ಷ್ಮ ವ್ಯಾಯಾಮ, ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು.  

ಶಿಬಿರದಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ದೇಹದ ತೂಕ ಹಾಗೂ ಆಹಾರ ಪದ್ಧತಿಯ ಕುರಿತು ತಜ್ಞರು ಮಾಹಿತಿ ನೀಡಿದರು. ನಿಯಮಿತ ಯೋಗಾಭ್ಯಾಸ, ಸಮತೋಲಿತ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಸಕ್ಕರೆ ಕಾಯಿಲೆ ಮತ್ತು ಬೊಜ್ಜನ್ನು ನಿಯಂತ್ರಿಸಬಹುದಾದ ವಿಧಾನಗಳನ್ನು ಸಾರ್ವಜನಿಕರಿಗೆ ತಿಳಿಸಲಾಯಿತು.  

ಏಳು ದಿನಗಳ ಶಿಬಿರವು ಸಾರ್ವಜನಿಕರಲ್ಲಿ ಯೋಗ ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ಜಾಗೃತಿ ಮೂಡಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು.