ಹೊಸ ಚೈತನ್ಯಕ್ಕೆ ಯೋಗ, ಧ್ಯಾನ ಸಹಕಾರಿ : ಮಂಜುಳಾ ಚುನಮರಿ
Yoga and meditation help in regaining vitality: Manjula Chunamari
ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ಯೋಗ ಮತ್ತು ಧ್ಯಾನ ಕಾರ್ಯಕ್ರಮ
ಬೆಳಗಾವಿ 30: .ಯೋಗವು ದೇಹದ ಸವಾಂರ್ಗಗಳಿಗೆ ಆಸನವಾದರೆ, ಧ್ಯಾನವು ಮನಸ್ಸು ಮತ್ತು ದೇಹವನ್ನು ನಿಯಂತ್ರಿಸುವ ವಜ್ರಾಯುಧವಾಗಿದೆ. ಯೋಗ, ಧ್ಯಾನ ಇವರೆಡೂ ಮನುಷ್ಯನ ಹೊಸ ಚೈತನ್ಯಕ್ಕೆ ಸಹಕಾರಿವಾಗಿವೆ ಎಂದು ಮಂಜುಳಾ ಚುನಮರಿ ಅವರು ಸಂದೇಶ ನೀಡಿದರು.
ನಗರದ ಸಮರ್ಥನಂ ಅಂಗವಿಕಲ ಸಂಸ್ಥೆಯ ಆವರಣದಲ್ಲಿ ಯೋಗದಾ ಸತ್ಸಂಗ ಧ್ಯಾನ ಮಂಡಳಿಯ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತವಾಗಿ "ಯೋಗ ಮತ್ತು ಧ್ಯಾನದ ಮಹತ್ವ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗದ ಸತ್ಸಂಗ ಮಂಡಳಿಯವರು ಕೆಲವು ತಿಂಗಳುಗಳಿಂದ ವಾರಕ್ಕೆ ಒಂದು ಸಲ ಈ ಶಾಲೆಗೆ ಭೇಟಿ ನೀಡಿ, ವಿಶೇಷ ಚೇತನ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ, ಧೃಢಿಕರಣ ತಂತ್ರ ಹಾಗೂ ಪ್ರಾಣಾಯಾಮವನ್ನು ಕಲಿಸುತ್ತಿದ್ದು, ಅದರ ಪರಿಣಾಮವಾಗಿ ಅತೀ ಚಟುವಟಿಕೆಯ ಈ ಮಕ್ಕಳು ಕಾರ್ಯಕ್ರಮದಲ್ಲಿ ತಲ್ಲೀನರಾಗಿ, ಶಾಂತವಾಗಿ ಆಲಿಸಿದ್ದು ಈ ಕಾರ್ಯಕ್ರಮಕ್ಕೆ ಒಂದು ಹೊಸ ಮೆರಗನ್ನು ತಂದು ಕೊಟ್ಟಿತು.ಯೋಗದ ಸತ್ಸಂಗ ಧ್ಯಾನ ಮಂಡಳಿಯ ಮುಖ್ಯಸ್ಥರಾದ ಶಶಿಕಾಂತ ಚುನಮರಿ , ಬೆಳಗಾವಿ ಶಾಖೆಯ ಸಮರ್ಥನಂ ಅಂಗವಿಕಲ ಸಂಸ್ಥೆಯ ಮುಖ್ಯಸ್ಥರಾದ ಅರುಣ ಕುಮಾರ ಎಂ. ಜಿ. ಸ್ವಾಗತಿಸಿದರು.
75 ಶಾಲಾ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಮತ್ತು ಯೋಗದ ಸತ್ಸಂಗ ಮಂಡಳಿಯ ಸದಸ್ಯರಾದ ಕರ್ನಲ್ ಮಾರನಬಸರಿ, ಪಟ್ಟಣಶೆಟ್ಟಿ ಹಾಗೂ ಇತರರು ಇದ್ದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 