ಯೋಗ-ಆರೋಗ್ಯ-ಆಧ್ಯಾತ್ಮ ಕಾರ್ಯಕ್ರಮ
ಚಿತ್ರದುರ್ಗ: 22 ಸೆಪ್ಟಂಬರ್ 2025, ಶರಣ ಸಂಸ್ಕೃತಿ 2025ರ ಅಂಗವಾಗಿ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಯೋಗ- ಆರೋಗ್ಯ -ಆಧ್ಯಾತ್ಮ ಕಾರ್ಯಕ್ರಮದ 3ನೇ ದಿನದ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುತ್ತಾ ಮಾತನಾಡಿದ ವೈದ್ಯಶ್ರೀ ಶ್ರೀ.ಚನ್ನಬಸವಣ್ಣನವರು, ವಿಭಿನ್ನವಾದ ಯೋಗ ಪ್ರಾಕಾರಗಳನ್ನು ದಿನನಿತ್ಯ ಆಭ್ಯಾಸ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಳು ಸದಾ ಚಲನಶೀಲನೆಯಲ್ಲಿರುತ್ತವೆ. ಕರಿಚಕ್ರಾಸನ ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ ಹಾಗು ನಮಸ್ಕಾರ ಮುದ್ರೆ ನಮ್ಮ ದೇಹವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. ಪ್ರಕೃತಿಯು ನಮಗೆ ಪರಿಶುದ್ದವಾಗಿ ಆಮ್ಲಜನಕವನ್ನು ನೀಡುತ್ತದೆ. ಅಂತಹ ಪ್ರಕೃತಿಯನ್ನು ಹಾಳು ಮಾಡುವುದು ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಹಾಗೇ ಅಗುತ್ತದೆ. ನಮ್ಮ ದೇಹದ ಒಳಗೆ ಆದಮ್ಯ ಶಕ್ತಿ ಅಡಗಿರುತ್ತದೆ. ಅದನ್ನು ನಾವು ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಳ್ಳುತ್ತೇವೆ. ಉದಾಹರಣೆ ಸಾಮಾನ್ಯವಾಗಿ ಓಡುವ ನಾವು ಒಂದು ಹುಲಿಯನ್ನು ಕಂಡಾಗ ಓಡುವ ವೇಗವನ್ನು ಹೆಚ್ಚಿಸಿಕೊಳ್ಳುತ್ತೇವೆ. ಓಡುವ ರೀತಿಗಳು ಬೇರೆಯೇ ಆಗಿದ್ದರೂ ಅದರ ಶಕ್ತಿಯೇ ಮೂಲ ಒಂದೇ ದೇಹದ್ದಾಗಿರುತ್ತದೆ.
ತನುವ ಹಿಡಿದಿರುವುದು ಪ್ರಕೃತಿ: ಪಂಚಭೂತಗಳಾದ ನೀರು, ಅಗ್ನಿ, ಗಾಳಿ, ಆಕಾಶ, ಭೂಮಿ ಆಯುರ್ವೇದ ಸಿದ್ದಾಂತದಲ್ಲಿ ಬರುತ್ತವೆ. ಪ್ರಕೃತಿ ಹಿಡಿದಿರುವುದು ಪ್ರಾಣ: ಪ್ರಕೃತಿಯನ್ನು ಪ್ರಾಣ ಹಿಡಿದಿಟ್ಟುರುತ್ತದೆ ಎಂದರೆ ನವರಂಧ್ರಗಳ ಮೂಲಕ ಶರೀರವನ್ನು ಹಿಡಿದಿರುತ್ತದೆ, ಪ್ರಾಣ ಹಿಡಿದಿರುವುದು ಜ್ಞಾನ: ಸಾಧನೆ ಮಾಡಿ ಸತ್ತರೆ ಪುಣ್ಯ ಬರುತ್ತದೆ, ಮಾಡದೇ ಸತ್ತರೆ ಪಾಪ ಬರುತ್ತದೆ, ದುಡಿದು ತಿಂದರೆ ಪುಣ್ಯ ಬರುತ್ತದೆ, ಜ್ಞಾನವನ್ನು ಹಿಡಿದಿರುವುದು ಅರಿವು: ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯ, ಅರಿವನ್ನು ಪಡೆದರೇ ನಮ್ಮ ದೇಹ ಸಮ ಸ್ಥಿತಿಗೆ ಬರುತ್ತದೆ. ಪ್ರಕೃತಿಯನ್ನು ಕಾಪಾಡುವಲ್ಲಿ ನಾವೆಲ್ಲರೂ ಜಾಗೃತರಾಗೋಣ ಎಂದು ನುಡಿದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಇಂದು ಶರಣು ಶರಣಾರ್ಥಿ ಎಂಬ ಪದವು ದೊಡ್ಡ ಮಂತ್ರವಾಗಿದೆ. ಬಸವಣ್ಣನವರಿಂದ ಬಂದ ಈ ಪದವು ಈಗ ಹೆಚ್ಚು ಹೆಚ್ಚು ಬಳಕೆಗೆ ಬರಬೇಕಾಗಿದೆ. ಇದೊಂದು ಅತಿ ಮಹತ್ವ ಹೊಂದಿರುವ ಶಬ್ದವಾಗಿದೆ. ದಿ. 24.09.2025 ರಂದು ಶ್ರೀಮಠದಲ್ಲಿ ವೇಷಭೂಷಣ, ರಂಗೋಲಿ, ವಚನಕಂಠಪಾಠ, ಸ್ಪರ್ಧೆಗಳು ನಡೆಯುತ್ತವೆ. ದಿ. 25.09.2025 ರಂದು ಸಾವಯವ ಸಿರಿಧಾನ್ಯದಿಂದ ಪ್ರಸಾದ ತಯಾರಿಸುವ ಸ್ಪರ್ಧೆಯನ್ನು ಏರಿ್ಡಸಲಾಗಿದೆ. ಇದರಲ್ಲಿ ಭಾಗವಹಿಸುವವರಿಗೆ ಬಹುಮಾನವಿರುತ್ತದೆ. ಇಂದು ಸಂಜೆ 5ಗಂಟೆಗೆ ಶ್ರೀಮಠದ ಅನುಭವ ಮಂಟಪದಲ್ಲಿ ವಚನ ಝೇಂಕಾರ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮದಲ್ಲಿ ನಾಡಿನ ಸಾವಿರಾರು ಶರಣ ಶರಣೆಯರು ಆಗಮಿಸುತ್ತಿದ್ದಾರೆ. ದಿ. 28.09.2025 ರ ಭಾನುವಾರ 9 ಗಂಟೆಗೆ ವಚನ ಝೇಂಕಾರ ನಡೆಯುತ್ತದೆ ಎಂದು ತಿಳಿಸಿದರು.
ಯೋಗಗುರು ಶ್ರೀ. ಚಿನ್ಮಯಾನಂದ ಮಾತನಾಡಿ, ಯೋಗ ಗುರು ಎಂದರೆ ತ್ಯಾಗಗುರು, ಸರಳಗುರು, ಪ್ರಚಾರ ಬಯಸದ ಚೇತನ, ಸರಳತೆಯ ಸಾಕಾರಮೂರ್ತಿ. ಹಿಂದೆ ಬಳಸುತ್ತಿದ್ದ ಬೀಸುವ ಕಲ್ಲುಗಳು ಶ್ರಮದ ಸಾಧನಗಳಾಗಿದ್ದವು, ಹಿಟ್ಟನ್ನು ಬೀಸಲು ಬಳಸುತ್ತಿದ್ದರು, ಬೀಸುವ ಸಮಯದಲ್ಲಿ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಆದರೆ ಅದು ಈಗ ಮದುವೆಯ ಮನೆಯಲ್ಲಿ ಶಾಸ್ತ್ರಕ್ಕೆ ಮಾತ್ರ ಸೀಮಿತವಾಗಿ ಬಳಸುವು ಆಡಂಬರದ ವಸ್ತುವಾಗಿದೆ. ಬಸವ ಎಂದರೆ ಹುಲ್ಲು ಸಾಗುತ್ತದೆ, ಬಸವನೇ ಸ್ವರ್ಗ ಸೋಪಾನ. ಮಲ್ಲಿಗೆ ಇದ್ದಾಗ ಕಲ್ಲನು ಮುಡಿಯಬೇಡ, ಬಸವಣ್ಣನಿದ್ದಾಗ ಕಲ್ಲನು ಪೂಜಿಸಬೇಡ, ಇದೇ ಅರಿವು. ಕಾಯಕವೆಂದರೆ ನಿರಂತರ ಚಲನೆಯಲ್ಲಿರುವುದು, ಇದು ಅರಿವಿನಿಂದ ಬಂದಿದೆ, ಇದು ದೇಹದ ಭಾಗಗಳನ್ನು ಹಿಡಿದಲ್ಲಿಟ್ಟುಕೊಳ್ಳುವ ಸಾಧನವಾಗಿದೆ. ಉಸಿರಾಟ ಮಾಡುವಾಗ ಮನಸ್ಸು ಜಾಗೃತವಾಗಿರುತ್ತದೆ. ರಾತ್ರಿ ಮಲಗಿದ್ದಾಗ ನಾವು ಉಸಿರಾಡುವುದು ಗೊತ್ತಾಗುವುದಿಲ್ಲ, ಅದು ಅರಿವಿನ ಮೂಲಕ ನಡೆಯುತ್ತದೆ. ಅರಿವೇ ಗುರು, ಅದನ್ನು ಉಸಿರಾಟದಿಂದ ಪಡೆಯುತ್ತೇವೆ. ಇನ್ಸುಲಿನ್, ಬಿಪಿ, ವಿಟಮಿನ್, ಹಿಮೋಗ್ಲೊಬಿನ್ ಸಹಜ ಸ್ಥಿತಿಯಲ್ಲಿರಬೇಕಾದರೆ ಅರಿವು ಮುಖ್ಯವಾಗುತ್ತದೆ. ಜೀವಂತವಾಗಿರುವ ವ್ಯಕ್ತಿ ಹಗುರವಾಗಿರುತ್ತಾನೆ, ಸತ್ತ ವ್ಯಕ್ತಿ ಭಾರವಾಗಿರುತ್ತಾನೆ. ಹಿಂದೆ ಜನರು ಭೇಟಿಯಾದಾಗ ಪ್ರಕೃತಿ, ಮಳೆ ಬೆಳೆ ಚನ್ನಾಗಿದೆಯಾ ಎಂದು ಕೇಳಿಕೊಳ್ಳುತ್ತಿದ್ದರು. ಅದೇ ಪಂಚಭೂತಗಳು ಸಾಫ್ಟ್‌ವೇರುಗಳಾಗಿದ್ದಾವೆ. ಪ್ರಪಂಚದಲ್ಲಿ ಇದುವರೆಗೆ ಜ್ಞಾನದ ಬಗ್ಗೆ ಸಂಶೋಧನೆಗಳಾಗಿದ್ದಾವೆ, ಆದರೆ ಅರಿವಿನ ಬಗ್ಗೆ ಸಂಶೋಧನೆಗಳು ಆಗಿಲ್ಲ. ಅದನ್ನು ತಿಳಿಸಿದವರು ಬಸವಣ್ಣನವರೇ ಆಗಿದ್ದಾರೆ. ಅರಿವು ಸ್ವಯಂ ಜಾಗೃತವಾಗಬೇಕಾದರೆ ಪ್ರತಿದಿನ 15-20 ನಿಮಿಷ ಶಿವಯೋಗ ಮಾಡಬೇಕು. ಅರಿವಿಗಿಂತ ದೊಡ್ಡದ್ದು ಯಾವುದು ಇಲ್ಲ. ಅರಿವು ಜಾಗೃತರಾಗುವ ಯೋಗವೇ ಶಿವಯೋಗ. ಗಡಿಯಾರ ಸಮಯ ನೋಡುವ ಸಾಧನವಾದರೆ, ಶಿವಯೋಗ ಜೀವನವನ್ನು ನೋಡುವ ಸಾಧನವಾಗಿದೆ. ಅರಿವು ಜಾಗೃತರಾದವರಿಗೆ ತನುವಿನಲ್ಲಿ ಮೋಹ, ಮನಸ್ಸಿನಲ್ಲಿ ಅಹಂಭಾವನೆ ಇರುವುದಿಲ್ಲ ಯೋಗದಿಂದ ಕಾಸ್ಮಿಕ್ ಎನರ್ಜಿ ದೊರೆಯುತ್ತದೆ. ಬೋಗದಿಂದ ದೊರೆಯುವ ಸಂತೋಷ ಕ್ಷಣಿಕ, ಯೋಗದಿಂದ ದೊರೆಯುವ ಸಂತೋಷ ಶಾಶ್ವತ. ಹಿಂದೆ ನಾಡಿ ಗತಿಯನ್ನು ಮುಟ್ಟಿ ನೋಡಿ ಕಾಯಿಲೆಯನ್ನು ತಿಳಿಯುವುದು ಒಂದು ವೈದ್ಯಕೀಯ ಪದ್ದತಿಯಾಗಿತ್ತು. ಹೆಣ್ಣು ಮಕ್ಕಳನ್ನು ಮುಟ್ಟದೇ ರೇಷ್ಮೇದಾರ ಬಳಸಿ ನಾಡಿಗತಿಯನ್ನು ನೋಡುತ್ತಿದ್ದರು, ಇದನ್ನೆ ಅರಿವು ಎಂದು ಕರೆಯುತ್ತಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಗ ಕ್ರೀಡಾ ಸಂಸ್ಥೆಯ ಬಿ.ಆರ್.ಪ್ರಸನ್ನಕುಮಾರ್, ಬಸವರಾಜಪ್ಪ, ಭಾರತೀ, ಯೋಗಸಾಧಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ವಚನಗೀತೆಗಳನ್ನು ಹಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 