ಜೈನ ಬಸದಿ ಆವರಣದಲ್ಲಿ ನಡೆದ ಯೋಗ ದಿನಾಚರಣೆ
Yoga Day celebration held at Jain Basadi premises
ರಾಯಬಾಗ, 22 : ದೇಹ, ಮನಸ್ಸು ಮತ್ತು ಆತ್ಮಗಳ ಸಮ್ಮಿಲನವೇ ಯೋಗ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಋಷಿಮುನಿಗಳು ಯೋಗದ ಮಹತ್ವವನ್ನು ನಮ್ಮೆಲ್ಲರಿಗೂ ತಿಳಿಸಿದ್ದಾರೆ ಎಂದು ವಕೀಲ ಹಾಗೂ ಬಿಜೆಪಿ ವಕ್ತಾರ ಆರ್.ಬಿ.ಘಂಟಿ ಹೇಳಿದರು.
ಶನಿವಾರ ಸಾಯಂಕಾಲ ಪಟ್ಟಣದ ಜೈನ ಬಸದಿ ಆವರಣದಲ್ಲಿ ಆರ್.ಕೆ.ಅಮೃತ ಸಂಜೀವಿನಿ ಫೌಂಡೇಶನ್ ರಾಯಬಾಗ, ರೂರಲ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ ಹುಕ್ಕೇರಿ (ರೆಡ್ಸ್) ಮತ್ತು ಏಕೆ ಫಿಟ್ನೆಸ್ ಪಾಯಿಂಟ್ ಇವರ ಸಂಯುಕ್ತ ಆಶ್ರಯದಲ್ಲಿ "ಒಂದು ಭೂಮಿ ಒಂದು ಆರೋಗ್ಯ" ಧ್ಯೇಯ ವಾಕ್ಯದೊಂದಿಗೆ ನಡೆದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತಂಜಲಿ ಋಷಿಮುನಿಗಳು ಅಷ್ಟಾಂಗ ಯೋಗದ ಮಹತ್ವವನ್ನು ತಿಳಿಸಿ ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಒಳ್ಳೆಯ ಆರೋಗ್ಯಯುತ ಜೀವನ ನಡೆಸಲು ಹೇಳಿದ್ದಾರೆ ಎಂದರು.
ರೇಡ್ಸ್ ಅಧ್ಯಕ್ಷೆ ಆಶಾ ಕೋಚರಿಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕಿ ಡಾ.ಕೆ.ಬಿ.ಸ್ವಾತಿ ಅವರು ಯೋಗ ಪ್ರಾತ್ಯಕ್ಷಿತೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಆರ್.ಕೆ.ಪಾಟೀಲ, ಎಕೆ ಫಿಟ್ನೆಸ್‌ನ ಶಾರುಖ್ ಕಮತೆ, ಸಂಗಮೇಶ್ ಹಿರಿಯಾಳ, ಶಶಿಕಲಾ ಸಿಂಗಾಡಿ, ಡಾ.ಕೆ.ಬಿ.ಸ್ವಾತಿ, ಶಿವರಾಜ್ ಸುತಾರ, ಲಕ್ಷ್ಮಿ ಪಾಟೀಲ, ಜಿಯಾ ಕಮತೆ, ಕೌಸ್ತುಬ ಸಿಂಗಾಡಿ, ಅಮರ ಕುಂಬಾರ, ರೂಪಾಲಿ ಚೌಗುಲೆ, ಹರ್ಷಾ ಮಾಳಿ, ಗಗಮ ದೃವಿ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 