ಸವದತ್ತಿಯಲ್ಲಿ ಸಂಭ್ರಮದ ಯೋಗ ದಿನಾಚರಣೆ
Yoga Day celebrated in Savadatti
ಸವದತ್ತಿ : ನಗರದ ಪದಕಿಪುರಂ ಶಂಕರ ಮಠದಲ್ಲಿ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ನಯನಾ ಭಸ್ಮೆ ಅವರು, “ನಿತ್ಯ ಯೋಗದಿಂದ ಸದಾ ನಿರೋಗಿಯಾಗಿರಬಹುದು. ಆರೋಗ್ಯವೇ ನಿಜವಾದ ಭಾಗ್ಯ; ಅದಕ್ಕೆ ಯೋಗವೇ ಮೂಲಮಂತ್ರ. ಪ್ರತಿಯೊಬ್ಬರೂ ದಿನನಿತ್ಯ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯೋಗದಿಂದ ದೇಹ ಆರೋಗ್ಯವಾಗಿದ್ದು, ರೋಗಗಳು ಹತ್ತಿರ ಸುಳಿಯುವುದಿಲ್ಲ. ಮಾನಸಿಕ ಹಾಗೂ ದೈಹಿಕ ಸಮತೋಲನಕ್ಕೆ ಯೋಗ ಅತ್ಯಗತ್ಯ,” ಎಂದು ತಿಳಿಸಿದರು.
ಸೀಮಾ ವನಕಿ ಮಾತನಾಡಿ, ಯೋಗವು ಕೇವಲ ವ್ಯಾಯಾಮವಲ್ಲ; ಅದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಯೋಗ ಗುರು ಬಾಬು ಲಮಾಣಿ ಅವರನ್ನು ಕಾರ್ಯಕ್ರಮದ ಆಯೋಜಕರು ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪಲ್ಲವಿ ಪದಕಿ, ಪಾರ್ವತಿ ಕಾಂತಿಮಠ, ಹಸೀನಾ ಯಲಿಗಾರ, ಸುಮಿತ್ರಾ ಕಾರದಗಿ, ಮೇಘಾ ಬೆಂಡೆಗುಂಬಳ, ಪ್ರತಿಮಾ ಲಾಳಗೆ, ಮೀನಾಕ್ಷಿ ವಡಕನ್ನವರ, ಸುನೀತಾ ಇಜಂತಕರ, ಕೀರ್ತಿ ಬಾಗಲಕೋಟ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 